ಗಂಗಾವತಿ ಪಬ್ಲಿಕ್ ಕ್ಲಬ್ ಕಲಾವಿನಿಕೇತನದಲ್ಲಿ ಕಾವ್ಯಲೋಕದಿಂದ ಹಮ್ಮಿಕೊಂಡಿದ್ದ ಕವಿಗೋಷ್ಠಿಯಲ್ಲಿ ನೂರೊಂದು ಹೆಜ್ಜೆ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಚಿತ್ರನಟ ವಿಷ್ಣುತೀರ್ಥ ಜೋಶಿ ಆದಾಪುರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಎಸ್.ವಿ. ಪಾಟೀಲ್ ಗುಂಡೂರು, ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಂ ಪ್ರಿಯ ಇತರರಿದ್ದರು.
- ಚಿತ್ರನಟ ವಿಷ್ಣುತೀರ್ಥ ಜೋಶಿ ಆದಾಪುರ ಹೇಳಿಕೆ
ಗಂಗಾವತಿ: ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಬೇಕಿದ್ದು ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಲು ಸಂಘಟನೆಗಳು ನೆರವಾಗಬೇಕಿದೆ ಎಂದು ಚಿತ್ರನಟ ವಿಷ್ಣುತೀರ್ಥ ಜೋಶಿ ಆದಾಪುರ ಹೇಳಿದರು.
ನಗರದ ಪಬ್ಲಿಕ್ ಕ್ಲಬ್ ಕಲಾವಿನಿಕೇತನದಲ್ಲಿ ಕಾವ್ಯಲೋಕದಿಂದ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿ ಮತ್ತು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಿಷ್ಕಿಂಧಾನಾಡು, ವಿಜಯನಗರ ವೈಭವದ ಪುಣ್ಯಭೂಮಿಯಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಬೇಕಿದ್ದು, ಸಾಹಿತ್ಯ ಮತ್ತು ಕಲೆಯನ್ನು ಪ್ರೋತ್ಸಾಹಿಸಬೇಕಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಎಸ್.ವಿ. ಪಾಟೀಲ್ ಗುಂಡೂರು ಮಾತನಾಡಿ, ಕವಿ, ಕವಯಿತ್ರಿಯರ ಕಾವ್ಯ ಸಂಗ್ರಹಿಸಿ ಸಂಕಲನ ಪ್ರಕಟಿಸಬೇಕು. ಪ್ರಕಟಿತ ಕತಿಗಳು ಮುಂದಿನ ಪೀಳಿಗೆಗೆ ನೆರವಾಗಲಿವೆ. ಕಾವ್ಯ ರಚಿಸುವವರು ಹಿರಿಯ ಸಾಹಿತಿಗಳ ಮಾರ್ಗದರ್ಶನ ಪಡೆಯಲಿ ಎಂದರು.
ಕಾವ್ಯಲೋಕ ಪ್ರಕಪಟಿಸಿದ ನೂರೊಂದು ಹೆಜ್ಜೆಗಳ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಸಂಕಲ್ಪ ಪದವಿ ಕಾಲೇಜಿನ ಪ್ರಾಚಾರ್ಯ ಬಸವರಾಜ ಶಿರಗೇರಿ, ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಆರ‌್ಹಾಳ, ಉಪನ್ಯಾಸಕಿ ಡಾ.ಮುಮ್ತಾಜ್ ಬೇಗಂ, ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮ ಪ್ರಿಯ, ಕಾರ್ಯದರ್ಶಿ ಮೈಲಾರಪ್ಪ ಬೂದಿಹಾಳ್, ಸದಸ್ಯರಾದ ಕಷ್ಣ ಆಶೀಶ, ಭುವನೇಶ್ವರಿ ಇದ್ದರು.
ಕವಿಗೋಷ್ಠಿಯಲ್ಲಿ 28ಕ್ಕೂ ಹೆಚ್ಚು ಕವಿ, ಕವಿಯತ್ರಿಯರು ಕವನ ವಾಚಿಸಿದರು.