ಶಿವರಾಜ ತಂಗಡಗಿ. ಕನ್ನಡ ಮತ್ತು ಸಂಸತಿ ಸಚಿವ. 
ಕೊಪ್ಪಳ

ಪಿಎಂಗೆ ವಿಪಕ್ಷವಿಲ್ಲದ ಭಾರತ ಬೇಕು

ಪ್ರಮುಖ ಮುಖ್ಯಾಂಶಗಳು

  • ಮೋದಿ ವಿರುದ್ಧ ವ್ಯಂಗ್ಯ ಕವಿತೆ ಬರೆದ ತಂಗಡಗಿ
ಕೊಪ್ಪಳ : "ವಿರೋಧ ಪಕ್ಷ ಇಲ್ಲದ ಭಾರತ ಬೇಕು. ಹೆಂಡತಿ ಇಲ್ಲದ ಜೀವನ ಬೇಕು. ಮಕ್ಕಳಿಲ್ಲದ ಅಂಗಳ ಬೇಕು. ಪ್ರಶ್ನೆಗಳಿಲ್ಲದ ಸಂಸತ್ತು ಬೇಕು. ಸವಾಲುಗಳಿಲ್ಲದ ಮೀಡಿಯಾ ಬೇಕು. ಆಡಿಟ್​ ಇಲ್ಲದ ಹಣ ಬೇಕು. ಬುದ್ಧಿ ಇಲ್ಲದ ಭಕ್ತರು ಬೇಕು' ಎಂದು ಸ್ವರಚಿತ ಕವಿತೆ ವಾಚಿಸುವ ಮೂಲಕ ಸಚಿವ ಶಿವರಾಜ ತಂಗಡಗಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯವಾಡಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಪ್ರಜಾಪ್ರಭುತ್ವ, ಮಹಿಳಾ ಮೀಸಲು ಬದ್ಧತೆ ಬಗ್ಗೆ ಕಾಂಗ್ರೆಸ್​ಗೆ ಬಿಜೆಪಿ ಹೇಳುವ ಅಗತ್ಯ ಇಲ್ಲ. ಕ್ಷೇತ್ರ ಮರು ವಿಂಗಡಣೆ ಮಾಡು ದುರುದ್ದೇಶದಿಂದ ಮಹಿಳಾ ಮೀಸಲು ಬಿಲ್​ ತಂದರು. 2010ರಲ್ಲೇ ರಾಜ್ಯಸಭೆಯಲ್ಲಿ ಬಿಲ್​ ಪಾಸ್​ ಆಗಿದೆ. ಆಗ ಬಿಜೆಪಿ ವಿರೋಧಿಸಿದೆ. ಸದ್ಯ ಮೋದಿ ಗಾಳಿ, ಹವಾ ಎಲ್ಲ ಹೋಗಿದೆ. ಅದಕ್ಕೆ ನಾನಾ ಗಿಮಿಕ್​ ಮಾಡುತ್ತಿದ್ದಾರೆ. ಇಡಿ, ಸಿಬಿಐ ಮೂಲಕ ಹೆದರಿಸಿ ಬೇರೆ ಪಕ್ಷದ ಸಂಸದರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಮೋದಿಗೆ ಮಾಧ್ಯಮದವರನ್ನು ಎದುರಿಸುವ ಧೈರ್ಯವಿಲ್ಲ. ನಾವೂ ಯಾವತ್ತಿದ್ದರೂ ಮಹಿಳೆಯರ ಪರ. ಇವರ ನಾಟಕ ಜನತೆಗೆ ಗೊತ್ತಾಗಿದೆ ಎಂದು ಕಾಂಗ್ರೆಸ್​ ಮಹಿಳಾ ಬಿಲ್​ ವಿರೋಧಿಸಿದನ್ನು ಸಮರ್ಥಿಸಿಕೊಂಡರು.
ನಮ್ಮ ಪಕ್ಷ ಗಟ್ಟಿಯಾಗಿದೆ. ಸಿಎಂ ಬದಲಾವಣೆ, ಸಂಪುಟ ವಿಸ್ತರಣೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ನಿಮ್ಮ ಕೆಲಸ ನೀವು ಮಾಡಿ. ಪ್ರಮುಖ ನಿರ್ಧಾರ ನಾವು ಕೈಗೊಳ್ಳುತ್ತೇವೆ ಎಂದು ನಮಗೆ ಸೂಚನೆ ನೀಡಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲವೆಂದು ಜಾರಿಕೊಂಡರು.
ಅನ್ನಭಾಗ್ಯ ಅಕ್ಕಿ ದುರುಪಯೋಗ ಆಗುತ್ತಿರುವುದು ಸರ್ಕಾರದ ಗಮನಕ್ಕಿದೆ. ಜನರೂ ಅಕ್ಕಿ ಮಾರಾಟ ಮಾಡುವುದು ತಪು$್ಪ. ಇಂದಿರಾ ಕಿಟ್​ ನೀಡಲು ಸರ್ಕಾರ ಯೋಜಿಸಿದೆ. ಶ್ರೀ ವಿತರಣೆ ಆಗಲಿದೆ. ಯಾವ ಪಕ್ಷದವರೇ ಇರಲಿ. ಪಡಿತರ ಅಕ್ಕಿ ಅಕ್ರಮದಲ್ಲಿ ತೊಡಗಿದ್ದಲ್ಲಿ ಸುಮ್ಮನೆ ಬಿಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳುತ್ತೇವೆ. ಟಿಬಿ ಡ್ಯಾಂ ಕ್ರಸ್ಟ್​ ಗೇಟ್​ ಅಳವಡಿಸಿದ್ದೇವೆ. ಸಣ್ಣಪುಟ್ಟ ಕೆಲಸ ಇದೆ. ಬಿಜೆಪಿ ಸ್ನೇಹಿತರು ಪಾದಯಾತ್ರೆ ಮಾಡುವುದು, ಡ್ಯಾಂಗೆ ಹಾರುವ ಅಗತ್ಯವಿಲ್ಲವೆಂದು ಕಿಚಾಯಿಸಿದರು.
"

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳದ ಐದು ಕಾರ್ಖಾನೆಗಳಿಗೆ ಕ್ಲೋಸರ್​ ನೋಟಿಸ್​ ನೀಡಿದೆ. ಪಿ.ಎಂ.ನರೇಂದ್ರಸ್ವಾಮಿ ಬಂದು ಹೋದ ಮೇಲೆ ನೋಟಿಸ್​ ನೀಡಲಾಗಿದೆ. ಬೋರ್ಡ್​ ಏನೇ ನಿರ್ಧಾರ ಕೈಗೊಂಡರೂ ನಮ್ಮ ಬೆಂಬಲ ಇರಲಿದೆ. ನಟ ಚೇತನ್​ ಸುದ್ದಿ ಆಗಬೇಕೆಂದು ಮಾತಾಡುತ್ತಾರೆ. ಡಾ.ರಾಜ್​ ಕುಮಾರ್​ ಬಗ್ಗೆ ಮಾತನಾಡುವ ಅರ್ಹತೆ ಅವರಿಗಿಲ್ಲ.

"

ಈಗಾಗಲೇ ಪಾಸ್​ ಆದ ಮಹಿಳಾ ಮೀಸಲು ಮಸೂದೆ ಮರು ಮಂಡಿಸುವ ಅಗತ್ಯ ಏನಿದೆ ? 2023ರಲ್ಲೇ ಜಾರಿ ಆಗಿದ್ದನ್ನು ಮರೆ ಮಾಚಿದ್ದಾರೆ. ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಿಸುವ ಉದ್ದೇಶ ಮುಖ್ಯವಾಗಿತ್ತು. ದಕ್ಷಿಣ ರಾಜ್ಯಗಳಲ್ಲಿ 130 ಸ್ಥಾನ ಇವೆ. ಶೇ.50ರಷ್ಟು ಹೆಚ್ಚು ಎಂದರೆ 70 ಸ್ಥಾನ ಸಿಗುತ್ತವೆ. ಇದರಿಂದ ಅನ್ಯಾಯ ಆಗುತ್ತದೆ. ಈಗಿರುವ 543ರಲ್ಲೇ ಮೀಸಲು ಕೊಡಲಿ.