ಬಿಜಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಎಸ್‌ಕೆಡಿಆರ್‌ಡಿ ದೋಟಿಹಾಳ ವಿಭಾಗದ ಸೇವಾ ಉಸ್ತುವಾರಿ ಶರಣಪ್ಪ ಹೆಸರೂರು, ಮುಖ್ಯ ಶಿಕ್ಷಕರಾದ ಬಸವರಾಜ ಬಾಗಲಿ, ಪಾರ್ವತಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ್ ಇನ್ನಿತರರಿದ್ದರು.
- ಸೇವಾ ಉಸ್ತುವಾರಿ ಶರಣಪ್ಪ ಹೆಸರೂರು ಸಲಹೆ
- ಕುಷ್ಟಗಿ ಬಿಜಕಲ್ ಪರಿಸರ ದಿನ
ಕುಷ್ಟಗಿ: ಪ್ರತಿಯೊಬ್ಬರೂ ಸಸಿಗಳನ್ನು ಬೆಳೆಸುವ ಮೂಲಕ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ದೋಟಿಹಾಳ ವಿಭಾಗದ ಸೇವಾ ಉಸ್ತುವಾರಿ ಶರಣಪ್ಪ ಹೆಸರೂರು ಹೇಳಿದರು.
ತಾಲೂಕಿನ ಬಿಜಕಲ್ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನದ ನಿಮಿತ್ತ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ತ್ತೀಚೆಚೆಗೆ ಮಾತನಾಡಿದರು. ಸುಡುವ ಬಿಸಿಲಿನಿಂದ ರಕ್ಷಿಸಿಕೊಳ್ಳಲು, ಭೂಮಿಗೆ ತಂಪೆರೆಯಲು, ಬೆಳೆ ಬೆಳೆಯಲು, ಮಳೆ ತರಿಸಲು ಗಿಡ-ಮರಗಳು ಬೇಕು. ಇಂಥ ಅದ್ಭುತ ಶಕ್ತಿಯುಳ್ಳ ಹಸಿರು ವಾತಾವರಣವನ್ನು ಸೃಷ್ಟಿಸಲು ನಾವೆಲ್ಲರೂ ಕಂಕಣಬದ್ಧರಾಗಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಪ್ರೌಢ ಶಾಲೆ ಮುಖ್ಯ ಶಿಕ್ಷಕ ಬಸವರಾಜ ಬಾಗಲಿ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಪಾರ್ವತಿ ಮಾತನಾಡಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪಾಟೀಲ್, ಇಕೋ ಕ್ಲಬ್‌ನ ಉಸ್ತುವಾರಿ ಶಿಕ್ಷಕ ಶಶಿಧರ್ ಗೊರೇಬಾಳ, ಎಸ್ಡಿಎಂಸಿ ಸದಸ್ಯರಾದ ಸಿದ್ದಪ್ಪ ಛಲವಾದಿ, ಸಾವಿತ್ರಿ ತಳುವಗೇರಿ, ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕಿ ಅಕ್ಕಮಹಾದೇವಿ ತೋಟದ್, ಪ್ರಮುಖರಾದ ನರಸಿಂಹದಾಸ್ ತೋಟದ್, ಛತ್ರಪ್ಪ ವಡ್ಡರ್, ಶ್ರೀಧರ ವಂಕಲಕುಂಟಿ, ನಿರುಪಾದೆಪ್ಪ ಹಾಗೂ ಶಿಕ್ಷಕರಾದ ಸಂತೋಷ ನಾಗಲೋಟಿ, ಹಂಪಯ್ಯ ಜಂಬಲದಿನ್ನಿ, ಕಳಕಮಲ್ಲೇಶ್ ಭೋಗಿ ಹಾಗೂ ವಿದ್ಯಾರ್ಥಿಗಳು ಇದ್ದರು.