ಬೇವೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಪಿಡಿಒ ಅಬ್ದುಲ್ ಗಫಾರ, ಶಿಕ್ಷಕರಾದ ಗಣೇಶ್, ದೇವಪ್ಪ ವಾಲ್ಮೀಕಿ, ಚಂದ್ರಪ್ಪ ರಾಜೂರು ಇತರರಿದ್ದರು. 
ಕೊಪ್ಪಳ

ಸಮತೋಲನ ಕಾಪಾಡಲು ಒಂದು ಸಸಿ ನೆಡಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶೆ ಪ್ರಮೀಳಾ ಎಂ. ಸಲಹೆ
  • ಯಲಬುರ್ಗಾ ನ್ಯಾಯಾಲಯ ವಿಶ್ವ ಪರಿಸರ ದಿನ
ಯಲಬುರ್ಗಾ: ಪರಿಸರವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಮರಗಳನ್ನು ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರಮೀಳಾ ಎಂ.ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪರಿಸರದ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನಾದರೂ ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಸಿವಿಲ್ ನ್ಯಾಯಾಧೀಶರಾದ ಸಂಜುಕುಮಾರ್ ಪಚ್ಚಪುರೆ ಮಾತನಾಡಿ, ಪರಿಸರ ಸಂರಕ್ಷಣೆಯು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೆ ಪ್ರತಿಯೊಬ್ಬರ ನಿತ್ಯ ಜೀವನದ ಭಾಗವಾಗಬೇಕು ಎಂದು ಹೇಳಿದರು.
ತಹಸೀಲ್ದಾರ್ ಪ್ರಕಾಶ್ ನಾಸಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಹೊಂಬಾಳ, ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಅಸೂಟಿ, ವಲಯ ಅರಣ್ಯಾಧಿಕಾರಿಗಳಾದ ಬಸವರಾಜ ಗೋಗೇರಿ, ಬಾಬುರಾವ್, ವಕೀಲರಾದ ಸಿ.ಎಸ್.ಬನ್ನಪ್ಪಗೌಡ್ರು, ಎಸ್.ಸಿ.ಗದಗ, ಆರ್.ಜಿ. ನಿಂಗೋಜಿ, ಅಯ್ಯರ್ ಕೆಂಚಮ್ಮನವರ್, ಜಿ.ಕೆ.ಲಾಲಗೊಂಡರು, ಎ.ಎಂ.ಪಾಟೀಲ್, ಕೆ.ಆರ್.ಬೆಟಿಗೇರಿ, ಎಸ್.ಜಿ. ಅಂಗಡಿ, ಸಾವಿತ್ರಿ ಗೊಲ್ಲರ, ಎ.ಬಿ. ಬೋರಣ್ಣವರ್, ಬಸವರಾಜ ಕಡಬಲಕಟ್ಟಿ, ಮಂಜುನಾಥ್ ಕಮ್ಮಾರ್ ಹಾಗೂ ಸಮಿತಿಯ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ್ ಮತ್ತು ವಿನಾಯಕ ಇದ್ದರು.
ಬೇವೂರು: ನಮ್ಮ ಸುತ್ತಲಿನ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಜಿಪಂ ಉಪಕಾರ್ಯದರ್ಶಿ ಟಿ.ಕೃಷ್ಣಮೂರ್ತಿ ಹೇಳಿದರು. ಬೇವೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಪರಿಸರವು ಪ್ರತಿಯೊಬ್ಬ ಜೀವಕೋಶಗಳ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ವಿಶ್ವದಾದ್ಯಂತ ಸುಮಾರು 143 ದೇಶಗಳಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಾ ಬರಲಾಗುತ್ತಿದೆ. ಪರಿಸರ ಕಾಳಜಿ ಜತೆಗೆ ಜನರಿಗೆ ಪರಿಸರದ ಮಹತ್ವ ಸಾರಬೇಕಿದೆ. ಸ್ವಚ್ಛ ಪರಿಸರ ಆರೋಗ್ಯಕರ ಜೀವನಕ್ಕೆ ಅಗತ್ಯವಾಗಿದೆ ಎಂದರು.
ಪಿಡಿಒ ಅಬ್ದುಲ್ ಗಫಾರ, ಶಿಕ್ಷಕರಾದ ಗಣೇಶ್, ದೇವಪ್ಪ ವಾಲ್ಮೀಕಿ, ಚಂದ್ರಪ್ಪ ರಾಜೂರು, ಆಡಳಿತಾಧಿಕಾರಿಗಳು, ಎಲ್ಲ ಶಾಲೆಗಳ ಮುಖ್ಯ ಶಿಕ್ಷಕರು, ಮಹಿಳಾ ಸಂಘದ ಪದಾಧಿಕಾರಿಗಳು, ಎಂಬಿಕೆ, ವಿಆರ್‌ಡಬ್ಲುೃ, ಗ್ರಂಥಪಾಲಕರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಇದ್ದರು.