ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ಅಂಗಳದಲ್ಲಿ ತಾರಾಲಯ ಕಾರ್ಯಕ್ರಮದಲ್ಲಿ ಸಂಚಾರಿ ತಾರಾಲಯ ಕುರಿತು ಮಾಹಿತಿ ನೀಡಿದ ಸಂಯೋಜಕರಾದ ಚರಂತಯ್ಯ ಭೂಸನೂರಮಠ ಮತ್ತು ಮಂಜುನಾಥ ಇವರನ್ನು ಗೌರವಿಸಲಾಯಿತು. ಪ್ರಾಚಾರ್ಯ ಪ್ರೊ.ಸುಂಕೇಶ್ವರ ಕರಿಗೂಳಿ, ಐಕ್ಯೂಎಸಿ ಸಂಚಾಲಕ ಡಾ.ಕೆ.ವಿರೂಪಾಕ್ಷ ಇತರರಿದ್ದರು.
- ಪ್ರಾಚಾರ್ಯ ಪ್ರೊ. ಸುಂಕೇಶ್ವರ ಕರಿಗೂಳಿ ಸಲಹೆ
- ಕಾಲೇಜು ಅಂಗಳದಲ್ಲಿ ತಾರಾಲಯ ಕಾರ್ಯಕ್ರಮ
ಗಂಗಾವತಿ: ತಂತ್ರಜ್ಞಾನ ಬಳಕೆ ಮೂಲ ವೈಜ್ಞಾನಿಕ ಚಿಂತನೆಯನ್ನು ವಿದ್ಯಾರ್ಥಿಗಳು ಹೆಚ್ಚಿಸಿಕೊಳ್ಳಬೇಕಿದ್ದು, ಆಲೋಚನೆಗಳನ್ನು ಅನ್ವೇಷಣೆಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಪ್ರೊ. ಸುಂಕೇಶ್ವರ ಕರಿಗೂಳಿ ತಿಳಿಸಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಕಾಲೇಜು ಅಂಗಳದಲ್ಲಿ ತಾರಾಲಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂಲ ವಿಜ್ಞಾನದತ್ತ ಗಮನ ಕೇಂದ್ರೀಕರಿಸುವುದರ ಜತೆಗೆ ತಂತ್ರಜ್ಞಾನ ಬಳಕೆಗೂ ಆದ್ಯತೆ ನೀಡಬೇಕು. ಅವಶ್ಯಕತೆಗೆ ತಕ್ಕಂತೆ ತಂತ್ರಜ್ಞಾನ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಐಕ್ಯೂಎಸಿ ಸಂಚಾಲಕ ಡಾ.ಕೆ. ವಿರೂಪಾಕ್ಷ ಮಾತನಾಡಿ, ಮಹಾನಗರದಲ್ಲಿ ಮಾತ್ರ ಲಭ್ಯವಿರುವ ತಾರಾಲಯ ವೀಕ್ಷಣೆಯನ್ನು ಕಾಲೇಜು ಅಂಗಳದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಚಾರಿ ತಾರಾಲಯ ಕುರಿತು ಸಂಯೋಜಕರಾದ ಚರಂತಯ್ಯ ಭೂಸನೂರಮಠ ಮತ್ತು ಮಂಜುನಾಥ ಮಾಹಿತಿ ನೀಡಿದರು. ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ, ರವಿಕುಮಾರ್, ಶಶಿಕುಮಾರ, ಉಪನ್ಯಾಸಕರಾದ ಮಲ್ಲಯ್ಯ, ವೆಂಕಟರಾಜು, ಬಾಲಚಂದ್ರ, ದೇವರಾಜ ಸಾಯಿಕುಮಾರ್, ಪೆನಜಾ, ಸಿಬ್ಬಂದಿ ಜಬೀನಾಬೇಗಂ, ವಿನಾಯಕ ಇತರರಿದ್ದರು.