ಕೊಪ್ಪಳದಲ್ಲಿ ಭಾನುವಾರ ಮಕ್ಕಳಿಗೆ ಈಜು ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ಪಿಐ ಸುರೇಶ ಡಿ., ಕ್ರೀಡಾ ಇಲಾಖೆ ಎಡಿ ವಿಠ್ಠಲ್​ ಜಾಬಗೌಡರ, ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಅಂತಾರಾಷ್ಟ್ರೀಯ ಈಜುಪಟುಗಳಾದ ಅಸ್ಮಿತಾ ಚಂದ್ರು, ವೃತ್ತಿ ಅಗರವಾಲ್​, ತರಬೇತುದಾರರಾದ ಜಾನ್ವಿ, ಎ.ಎನ್​. ಯತಿರಾಜ್​, ದೈಹಿಕ ಶಿಕ್ಷಕ ಬಸವಾಜು ಹನಮಸಾಗರ ಇದ್ದರು.  
ಕೊಪ್ಪಳ

ಈಜಿನಿಂದ ದೈಹಿಕ&ಮಾನಸಿಕ ಸದೃಢತೆ

ಪ್ರಮುಖ ಮುಖ್ಯಾಂಶಗಳು

  • ಪಿಐ ಸುರೇಶ ಡಿ.ಅಭಿಪ್ರಾಯ
  • ಮಕ್ಕಳಿಗೆ ಈಜು ಸ್ಪರ್ಧೆ
ಕೊಪ್ಪಳ : ಮಕ್ಕಳು ಈಜು ಕಲಿಯುವದರಿಂದ ಮಕ್ಕಳ ದೈಹಿಕ&ಮಾನಸಿಕ ಬೆಳವಣಿಗೆಗೆ ಸಹಕಾರಿ ಎಂದು ನಗರಠಾಣೆ ಪಿಐ ಸುರೇಶ ಡಿ. ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕ್ರೀಡಾಂಗಣದ ಈಜುಕೊಳದಲ್ಲಿ ಭಾನುವಾರ ಕ್ರೀಡಾ ಇಲಾಖೆಯಿಂದ ಮಕ್ಕಳಿಗೆ ಹಮ್ಮಿಕೊಂಡಿದ್ದ ಈಜು ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಈಜು ಕಲಿಕೆ ಬಹುಮುಖ್ಯ. ಕ್ರೀಡಾ ಇಲಾಖೆ ಕ್ರೀಡಾಪಟುಗಳಿಗೆ ಹಲವು ಸೌಲಭ್ಯ ಕಲ್ಪಿಸುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಬೇಕು. ಅಗತ್ಯ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ್​ ಜಾಬಗೌಡರ ಮಾತನಾಡಿ, ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಪ್ರತಿಯೊಬ್ಬರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಕ್ರೀಡೆ ಆರೋಗ್ಯ ವೃದ್ಧಿಗೆ ಸಹಕಾರಿ. ಜಿಲ್ಲೆಯ ಕ್ರೀಡಾಪಟುಗಳಿಗಾಗಿ ಈಜು ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ತಾಲೂಕು ಕ್ರೀಡಾಧಿಕಾರಿ ಶರಣಬಸವ ಬಂಡಿಹಾಳ, ಅಂತಾರಾಷ್ಟ್ರೀಯ ಈಜುಪಟು ವೃತ್ತಿ ಅಗರವಾಲ್​, ತರಬೇತುದಾರರಾದ ಜಾನ್ವಿ, ಎ.ಎನ್​. ಯತಿರಾಜ್​, ದೈಹಿಕ ಶಿಕ್ಷಕ ಬಸವಾಜು ಹನಮಸಾಗರ ಇತರರಿದ್ದರು.

ವಿರಾಟ್​-ಶೌರ್ಯ-ಗವಿಶ್​ ಪ್ರಥಮ

8 ರಿಂದ 10 ವರ್ಷ, 10-12ವರ್ಷ ಹಾಗೂ 12-14 ವಯೋಮಿತಿ ಒಳಗಿನ ಬಾಲಕ ಮತ್ತು ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಯಿತು. 50 ಬಾಲಕ-ಬಾಲಕಿಯರು ಭಾಗವಹಿಸಿದರು. 8-10 ವರ್ಷ ವಿಭಾಗದಲ್ಲಿ ವಿರಾಟ್​ ಪಾಟೀಲ್​ (ಪ್ರಥಮ), ಆದರ್ಶ (ದ್ವೀತಿಯ), ಸುಫಿಯಾನ್​ ಪಟೇಲ್​ (ತೃತೀಯ), 10 ರಿಂದ 12 ವರ್ಷ ವಯೋಮಿತಿ ಸ್ಪರ್ಧೆಯಲ್ಲಿ ಶೌರ್ಯ ಪಾಟೀಲ್​ (ಪ್ರಥಮ), ಅನುಷ್​ (ದ್ವೀತಿಯ), ಶ್ರೀಧರ್​ ಭಟ್​ (ತೃತೀಯ), 12 ರಿಂದ 14 ವರ್ಷ ವಯೋಮಾನದವರಲ್ಲಿ ಗವಿಶ್​ (ಪ್ರಥಮ), ಶ್ರೇಯಸ್​ (ದ್ವೀತಿಯ) ಮತ್ತು ತನಯ್​ (ತೃತೀಯ) ಸ್ಥಾನ ಪಡೆದುಕೊಂಡರು.