ಕೊಪ್ಪಳ ತಾಲೂಕಿಮ ಭಾಗ್ಯನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಶಿಕ್ಷಣ ಅಭಿಯಾನವನ್ನು ವಿಪ ಸದಸ್ಯೆ ಹೇಮಲತಾ ನಾಯಕ ಉದ್ಘಾಟಿಸಿದರು. ಪ್ರಮುಖರಾದ ಚಂದ್ರಶೇಖರ ಹಲಿಗೇರಿ, ಚನ್ನಬಸವನಗೌಡ, ನವೀನ್ ಗುಳಗಣ್ಣವರ್, ಡಾ. ಬಸವರಾಜ ಕ್ಯಾವಟರ್, ಅನೀಲ್ ನಾಯ್ಡು, ವಿರೇಶ ಸಜ್ಜನ್ ಇತರರಿದ್ದರು.
- ಚಂದ್ರಶೇಖರ ಹಲಿಗೇರಿ ಹೇಳಿಕೆ
- ಬಿಜೆಪಿ ಶಿಸ್ತಿಗೆ ಹೆಸರಾದ ಪಕ್ಷ
ಕೊಪ್ಪಳ : ಭಾರತೀಯ ಜನತಾ ಪಾರ್ಟಿಯು ಶಿಸ್ತಿಗೆ ಹೆಸರಾದ ಪಕ್ಷವಾಗಿದ್ದು, ಕಾರ್ಯಕರ್ತರಿಗೆ ಮೊದಲ ಪಾಠವಾಗಿ ಶಿಸ್ತನ್ನೇ ಕಲಿಸಲಾಗುತ್ತದೆ ಎಂದು ಬಳ್ಳಾರಿ ವಿಭಾಗದ ಪ್ರಶಿಕ್ಷಣ ವರ್ಗದ ಮಾಜಿ ಪ್ರಭಾರಿ ಚಂದ್ರಶೇಖರ ಹಲಿಗೇರಿ ತಿಳಿಸಿದರು.
ತಾಲೂಕಿನ ಭಾಗ್ಯಾನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಪಂಡಿತ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಬಿರದಲ್ಲಿ ಒಟ್ಟು ಏಳು ಅವಧಿಗಳಿರುತ್ತವೆ. ಬೂತ್ ಮಟ್ಟದ ಎಲ್ಲಾ ಕಾರ್ಯಕರ್ತರನ್ನು ಒಂದೆಡೆ ಸೇರಿಸಿ ಅವರಿಗೆ ಕಾರ್ಯಕ್ರಮದ ಉದ್ದೇಶಗಳನ್ನು ಮನವರಿಕೆ ಮಾಡಿಕೊಡಲಾಗುತ್ತದೆ. ಇಂದು ಎರಡು ಅವಧಿಗಳು ನಡೆಯಲಿದ್ದು, ನಾಳೆ ಉಳಿದ ಅವಧಿಗಳಲ್ಲಿ ತರಬೇತಿ ನೀಡಲಾಗುವುದು. ಬಿಜೆಪಿಯು ಇಷ್ಟು ದೊಡ್ಡ ಮಟ್ಟಕ್ಕೆ ಹೇಗೆ ಬೆಳೆದು ಬಂದಿದೆ ಎನ್ನುವ ಇತಿಹಾಸವನ್ನು ಇಲ್ಲಿ ತಿಳಿಸಿಕೊಡಲಾಗುತ್ತದೆ ಎಂದರು..
ಬಳ್ಳಾರಿ ವಲಯದ ಪ್ರಶಿಕ್ಷಣ ಸಪ್ರಭಾರಿ ಚನ್ನಬಸವನಗೌಡ ಮಾತನಾಡಿ, ಭಾರತೀಯ ಜನತಾ ಪಾರ್ಟಿಯು ಇತರ ರಾಜಕೀಯ ಪಕ್ಷಗಳಿಗಿಂತ ಸಿದ್ಧಾಂತ ಮತ್ತು ಕಾರ್ಯವೈಖರಿಯಲ್ಲಿ ವಿಭಿನ್ನವಾಗಿದೆ. ಇದನ್ನು ಕಾರ್ಯಕರ್ತರು ಮೊದಲು ಅರ್ಥಮಾಡಿಕೊಳ್ಳಬೇಕು. ಬಿಜೆಪಿ ಕಾರ್ಯಕರ್ತರು ಕೇವಲ ರಾಜಕೀಯ ಲಾಭಕ್ಕಾಗಿ ಕೆಲಸ ಮಾಡುವವರಲ್ಲ. ಬದಲಾಗಿ, ಸಮಾಜದ ಪ್ರತಿಯೊಂದು ಹಂತದಲ್ಲೂ ಜನರ ಸೇವೆ ಮಾಡಲು ಸದಾ ಸಿದ್ಧರಿರಬೇಕು. ಪ್ರತಿಯೊಬ್ಬ ಕಾರ್ಯಕರ್ತನು ಎಲ್ಲೇ ಇರಲಿ, ಪಕ್ಷದ ತತ್ವಗಳನ್ನು ಜನರಿಗೆ ತಲುಪಿಸಬೇಕು. ಇಲ್ಲಿ ನಡೆಯುವ ತರಬೇತಿಯ ಪ್ರತಿಯೊಂದು ವಿಷಯವನ್ನೂ ಸೂಕ್ಷ$್ಮವಾಗಿ ಆಲಿಸಿ ಮನದಟ್ಟು ಮಾಡಿಕೊಳ್ಳಬೇಕೆಂದು ಸೂಚಿಸಿದರು.
ಮಾಜಿ ಸಚಿವ ಹಾಲಪ್ಪ ಆಚಾರ, ವಿಪ ಸದಸ್ಯೆ ಹೇಮಲತಾ ನಾಯಕ, ಬಳ್ಳಾರಿಯ ಜಿಲ್ಲಾಧ್ಯಕ್ಷ ಅನೀಲ್ ನಾಯ್ಡು, ಗ್ರಾಮೀಣ ಮಂಡಲ ಪ್ರಶಿಕ್ಷಣ ವರ್ಗದ ಅಧ್ಯಕ್ಷ ವಿರೇಶ ಸಜ್ಜನ್, ಕೊಪ್ಪಳ ನಗರ ಮಂಡಲದ ಅಧ್ಯಕ್ಷ ಮುರುಳಿ, ಮಹಾಂತೇಶ ಪಾಟೀಲ, ಅಪ್ಪಣ್ಣಪದಕಿ, ಕಳಕಪ್ಪ ಜಾದವ ಇತರರಿದ್ದರು.
ನಮಗೆಲ್ಲರಿಗೂ ದೇಶ ಮೊದಲು, ನಂತರ ಪಕ್ಷ, ತದನಂತರ ವ್ಯಕ್ತಿ. ಈ ಉದಾತ್ತ ಘೋಷವಾಕ್ಯದೊಂದಿಗೆ ಮುನ್ನಡೆಯುವ ವಿಶ್ವದ ಏಕೈಕ ಪಕ್ಷವೆಂದರೆ ಅದು ಭಾರತೀಯ ಜನತಾ ಪಾರ್ಟಿ. ವ್ಯಕ್ತಿ ನಿಮಾರ್ಣದ ಮೂಲಕ ಸಂಘ ನಿಮಾರ್ಣ, ಸಂಘದ ಮೂಲಕ ರಾಷ್ಟ್ರ ನಿಮಾರ್ಣ ಮಾಡುವುದೇ ಬಿಜೆಪಿ ಪಕ್ಷದ ಮೂಲ ಗುರಿ.
ಯಾರು ಪಕ್ಷ ಬಿಟ್ಟು ಹೋದರು ಎನ್ನುವುದು ನಮಗೆ ಮುಖ್ಯವಲ್ಲ, ಕಾರ್ಯಕರ್ತರು ಗಟ್ಟಿಯಾಗಿ ನಿಲ್ಲುವುದು ಮುಖ್ಯ. ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಪಕ್ಷಾಂತರಿಗಳಿಗೆ ಮತ್ತು ವಿರೋಧಿಗಳಿಗೆ ತಕ್ಕ ಪಾಠ ಕಲಿಸೋಣ.