ಕನಕಗಿರಿ-ನವಲಿ ರಸ್ತೆಯ ಮಲ್ಲಿಗೆವಾಡ ಕ್ರಾಸ್‌ನಲ್ಲಿ ವಾಮಾಚಾರ ಮಾಡಿರುವುದು. 
ಕೊಪ್ಪಳ

ಕನಕಗಿರಿಯಲ್ಲಿ ವಾಮಾಚಾರಕ್ಕೆ ಬೇಸತ್ತ ಜನರು

ಕನಕಗಿರಿ: ಪಟ್ಟಣದಿಂದ ನವಲಿಗೆ ಸಾಗುವ ರಸ್ತೆಯ ಮಲ್ಲಿಗೆವಾಡ ಕ್ರಾಸ್‌ನಲ್ಲಿ ಪ್ರತಿನಿತ್ಯ ವಾಮಾಚಾರ ನಡೆಯುತ್ತಿದ್ದು, ಸುತ್ತ ಮುತ್ತಲಿನ ಜಮೀನುಗಳ ರೈತರು ಹಾಗೂ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಮೂರು ದಾರಿ ಕೂಡುವ ರಸ್ತೆಯೆಂದು ನಿತ್ಯ ವಾಮಾಚಾರ ನಡೆಸಲಾಗುತ್ತಿದೆ. ಕುಂಬಳಕಾಯಿ, ಗೊಂಬೆ, ಪತ್ರೊಳಿ, ಮೂಳೆ, ಕುಂಕುಮ, ಅರಿಶಿಣ, ವಾಮಾಚಾರಕ್ಕೆ ಬಳಸುವ ಇತರ ವಸ್ತುಗಳು ರಸ್ತೆ ಮಧ್ಯದಲ್ಲಿ ಪ್ರತಿನಿತ್ಯ ಕಾಣಸಿಗುತ್ತವೆ. ತಡರಾತ್ರಿ ಜನರ ಸಂಚಾರ ನಿಂತ ಮೇಲೆ ಈ ರೀತಿ ವಾಮಾಚಾರ ನಡೆಯುತ್ತಿದ್ದು, ಮಲ್ಲಿಗೆವಾಡಕ್ಕೆ ಹೋಗುವವರು, ಕೃಷಿ ಕಾರ್ಯಕ್ಕೆ ಜಮೀನುಗಳಿಗೆ ತೆರಳುವವರು ಸ್ವಲ್ಪ ಯಾಮಾರಿದರೂ ವಾಮಾಚಾರ ಮಾಡಿದ ವಸ್ತುಗಳನ್ನು ದಾಟಬೇಕಾಗಿದೆ. ಇದರಿಂದ ನಮಗೆಲ್ಲಿ ಕಾಡಾಟ ಶುರುವಾಗುವ ಆತಂಕವಿದೆ. ಕೂಡಲೇ ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ವಾಮಾಚಾರ ತಡೆಯಬೇಕು ಎಂದು ಜನರು ಆಗ್ರಹಿಸಿದ್ದಾರೆ.