ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೈಬರ್ ಕೆಂ ಜಾಗೃತಿ ಕಾರ್ಯಾಗಾರದಲ್ಲಿ ಡಿವೈಎಸ್ಪಿ ಸಿದ್ದಲಿಂಗನಗೌಡ ಮಾಹಿತಿ ನೀಡಿದರು. ಜಿಲ್ಲಾ ಎನ್ಐಸಿ ಅಧಿಕಾರಿ ಬಸವರಾಜ, ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಸಲೀಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
- ಡಿವೈಎಸ್ಪಿ ಸಿದ್ದಲಿಂಗನಗೌಡ ಪಾಟೀಲ್ ಸೂಚನೆ
- ಸುರಕ್ಷಿತ ಅಂತರ್ಜಾಲ ಅರಿವು ಕಾರ್ಯಾಗಾರ
ಕೊಪ್ಪಳ : ಸೈಬರ್ ಸುರಕ್ಷತೆ ಪೊಲೀಸರ ಜವಾಬ್ದಾರಿ ಮಾತ್ರವಲ್ಲ. ಪ್ರತಿಯೊಬ್ಬ ನಾಗರಿಕ ಮತ್ತು ಅಧಿಕಾರಿ, ಸಿಬ್ಬಂದಿ ಜಾಗೃತರಾಗಬೆಕು. ಡಿಜಿಟಲ್ ಜಗತ್ತಿನಲ್ಲಿ "ತಡೆ, ಯೋಚನೆ, ನಂತರ ಕ್ರಮ' ಎಂಬ ನೀತಿ ಅನುಸರಿಸಿದರೆ ಮೋಸದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಲ್ಲಾ ಸೈಬರ್ ಕೆಂ ಡಿವೈಎಸ್ಪಿ ಸಿದ್ದಲಿಂಗನಗೌಡ ಪಾಟೀಲ್ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಮಂಗಳವಾರ ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆನ್ಲೈನ್ ಬ್ಯಾಂಕಿಂಗ್, ಸಾಮಾಜಿಕ ಜಾಲತಾಣ ಮತ್ತು ಇ-ಕಾಮರ್ಸ್ ಬಳಕೆ ಹೆಚ್ಚಿದಂತೆ ಮೋಸಗಾರರು ಹೆಚ್ಚುತ್ತಿದ್ದಾರೆ. ನಮ್ಮ ಕೊಪ್ಪಳ ಸುತ್ತಮುತ್ತ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳಿಂದ ಜಾಗೃತರಾಗಿ. ಸೈಬರ್ ಕೆಂನಿಂದ ತಪ್ಪಿಸಿಕೊಳ್ಳಲು ಬಲವಾದ ಪಾಸ್ವರ್ಡ್ ಬಳಸಿ. ಅನಾಮಧೇಯ ಲಿಂಕ್ ಅಥವಾ ಆ್ಯಪ್ ಡೌನ್ಲೋಡ್ ಮಾಡಬೇಡಿ. ವೈಯಕ್ತಿಕ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹಂಚಬೇಡಿ. ಹಣ ವರ್ಗಾವಣೆಗೂ ಮೊದಲು ಖಚಿತಪಡಿಸಿಕೊಂಡು ವರ್ಗಾಯಿಸಿ ಎಂದರು.
ಮೊಬೈಲ್, ಇಂರ್ಟನೆಟ್ನಿಂದ ನಮಗೆ ಲಾಭ-ನಷ್ಟ ಎರಡು ಇದೆ. ಅವುಗಳನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳುತ್ತೇವೆ ಎಂಬುವುದು ಮುಖ್ಯ. ಪ್ರತಿಯೊಬ್ಬರೂ ಸೈಬರ್ ಅಪರಾಧಗಳ ಕುರಿತು ತಿಳಿಯಬೇಕು. ಮನುಷ್ಯನಿಗೆ ಅತಿ ಆಸೆ ಮತ್ತು ಭಯ ಸೈಬರ್ ಕೆಂಗೆ ದಾರಿಯಾಗುತ್ತದೆ. ಮೊಬೈಲ್ ಕರೆಗಳ ಮೂಲಕ ಸೂಕ್ಷ$್ಮ ವಿವರಗಳಾದ ಒಟಿಪಿ, ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಮಾಹಿತಿಯನ್ನು ಎಂದಿಗೂ ಬಹಿರಂಗಪಡಿಸಬಾರದು. ಅನಧಿಕೃತ ಆಧಾರ್ ಪಾವತಿ ಅಧಿಸೂಚನೆಗಳ ಬಗ್ಗೆ ಜಾಗರೂಕರಾಗಿರಿ. ವೈಯಕ್ತಿಕ ಮಾಹಿತಿ ಅಥವಾ ಹಣಕ್ಕಾಗಿ ವಿನಂತಿಸುವ ಅಪರಿಚಿತ ದೂರವಾಣಿ ಸಂಖ್ಯೆಗಳಿಂದ ಬರುವ ಕರೆಗಳಿಗೆ ಎಂದಿಗೂ ಪ್ರತಿಕ್ರಿಯಿಸಬಾರದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಎನ್ಐಸಿ ಅಧಿಕಾರಿ ಬಸವರಾಜ, ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ ದೇಶಪಾಂಡೆ, ಸಲೀಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.
ಸೈಬರ್ ಮೋಸವಾದರೆ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಅಥವಾ ಮೋಸ ಹೋದ ಒಂದು ಗಂಟೆಯೊಳಗಾಗಿ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಬೇಕು. ಇದರಿಂದ ಹಣ ವಾಪಸ್ ಪಡೆಯುವ ಸಾಧ್ಯತೆ ಹೆಚ್ಚು. ಆದಷ್ಟು ಜಾಗೃತರಾಗಿ ವ್ಯವಹರಿಸುವುದು ಒಳಿತು. ಅಪರಿಚಿತ ಕರೆ, ಚಾಟಿಂಗ್ಗೆ ಸ್ಪಂದಿಸಬೇಡಿ.
&ಸಿದ್ದಲಿಂಗನಗೌಡ ಪಾಟೀಲ್. ಸೈಬರ್ ಕೆಂ ಡಿವೈಎಸ್ಪಿ ಕೊಪ್ಪಳ.