ಗುಡಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಸಪ್ತ ಭಜನಾ ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಭಾಗವಹಿಸಿದ್ದರು. ಗ್ರಾಮಸ್ಥರಾದ ವೆಂಕಣ್ಣ ಆಡುರ, ತಿಪ್ಪಣ್ಣ ತೋಟದ, ವಿರೂಪಾಕ್ಷಪ್ಪ ಬನ್ನಿಕೊಪ್ಪ, ಶರಣಪ್ಪ ತೋಟದ, ಹಾಲಪ್ಪ ಬಳ್ಳಾರಿ, ಬಸವರಾಜ ಆಡುರು ಇತರರಿದ್ದರು. 
ಕೊಪ್ಪಳ

ದೇವರ ಸ್ಮರಣೆಯಿಂದ ಮನಸ್ಸಿಗೆ ಶಾಂತಿ

ಪ್ರಮುಖ ಮುಖ್ಯಾಂಶಗಳು

  • ಭಜನೆ
  • ದೇವರ
  • ನಾಮಸ್ಮರಣೆ
ಅಳವಂಡಿ: ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ನಾಡಿನ ರೈತರು ಮತ್ತು ಜನತೆಯ ಸುಖ-ಶಾಂತಿ, ಸಮೃದ್ಧಿಗಾಗಿ ಗುಡಗೇರಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳು ದಿನಗಳ ಸಪ್ತ ಭಜನಾ ಕಾರ್ಯಕ್ರಮವು ಭಕ್ತಿಭಾವದೊಂದಿಗೆ ಸೋಮವಾರ ಮಂಗಲಗೊಂಡಿತು.
ಜು.20ರಿಂದ ಏಳು ದಿನಗಳ ಕಾಲ ಸಪ್ತ ಭಜನಾ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ಆಯೋಜಿಸಲಾಗಿತ್ತು. ಪ್ರತಿದಿನ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಭಜನೆ, ದೇವರ ನಾಮಸ್ಮರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.
ಮಂಗಲ ಕಾರ್ಯಕ್ರಮದಲ್ಲಿ ಶ್ರೀ ಮರುಳಾರಾಧ್ಯ ಶಿವಾಚಾರ್ಯರು, ಭಜನೆ ಮತ್ತು ದೇವರ ನಾಮಸ್ಮರಣೆ ಮನಸ್ಸಿಗೆ ಶಾಂತಿ ನೀಡುವುದರ ಜೊತೆಗೆ ಸಮಾಜದಲ್ಲಿ ಭಕ್ತಿ, ಸಹೋದರತ್ವ ಮತ್ತು ಒಗ್ಗಟ್ಟಿನ ಭಾವನೆ ಬೆಳೆಸುತ್ತದೆ.
ರೈತರು ಹಾಗೂ ನಾಡಿನ ಜನತೆಯ ಒಳಿತಿಗಾಗಿ ಗ್ರಾಮಸ್ಥರು ಏಳು ದಿನಗಳ ಕಾಲ ಭಕ್ತಿಯಿಂದ ಸಪ್ತ ಭಜನಾ ಕಾರ್ಯಕ್ರಮ ನಡೆಸಿರುವುದು ಶ್ಲಾಘನೀಯ ಎಂದರು. ಸಪ್ತ ಭಜನಾ ಕಾರ್ಯಕ್ರಮದ ನಂತರ ಅನ್ನದಾಸೋಹ ಸೇವೆ ನಡೆಯಿತು. ಪ್ರಮುಖರಾದ ಬಸವರಾಜ ಗುಟಗನೂರು, ಈಶ್ವರಗೌಡ ಸರಬಗೌಡ್ರು, ರವಿಕುಮಾರ ಅಂಬಳಿ, ಶರಣಪ್ಪ ಗುಟಗನೂರ, ಚೆನ್ನಪ್ಪ ಗುಟಗನೂರು ಇತರರಿದ್ದರು.