ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಫೀಜಿಯೋ ಥೆರಪಿ ಉಕರಣ ಅಳವಡಿಕೆ.  
ಕೊಪ್ಪಳ

ರೋಗಿಗಳು ಉಪಕರಣ ಸದ್ಬಳಕೆ ಮಾಡಿ

ಪ್ರಮುಖ ಮುಖ್ಯಾಂಶಗಳು

  • ಡಿಎಸ್​ ಡಾ.ಕೃಷ್ಣ ಓಂಕಾರ್​ ಸಲಹೆ
ಕೊಪ್ಪಳ: ರೋಗಿಗಳು ಗುಣಮುಖರಾಗುವಲ್ಲಿ ಫಿಜಿಯೋ ಥೆರಪಿ ಸಹಾಯಕ. ಜಿಲ್ಲಾಸ್ಪತ್ರೆಯಲ್ಲಿ ಉಪಕರಣ ಅಳವಡಿಸಿದ್ದು ರೋಗಿಗಳು ಸದ್ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾ ಶಸ್ತ್ರಚಿಕಿತ್ಸ ಡಾ.ಕೃಷ್ಣ ಓಂಕಾರ ಸಲಹೆ ನೀಡಿದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಮಿದುಳು ಆರೋಗ್ಯ ಉಪಕ್ರಮ ಯೋಜನೆಯಡಿ ಪೀಜಿಯೋ ಥೆರಪಿ ಉಪಕರಣಗಳ ಅಳವಡಿಕೆ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ನರ ರೋಗಕ್ಕೆ ಸಂಬಂಧಿಸಿದಂತೆ ಪಾರ್ಶ್ವವಾಯು, ಪಾರ್ಕಿನ್ಸನ್​, ಅಭಿವೃದ್ಧಿಯಲ್ಲಿ ಹಿಂದುಳಿದ ಮಕ್ಕಳು, ಸೆರೆಬ್ರಲ್​ ಪಾಲ್ಸಿ ಇರುವ ರೋಗಿಗಳಿಗೆ ಫಿಜಿಯೋ ಥೆರಪಿ ಅವಶ್ಯ. ಜಿಲ್ಲಾಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಿದ್ದು ರೋಗಿಗಳು ಸದುಪಯೋಗ ಪಡೆಯಬೇಕು ಎಂದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಎಚ್​.ಪ್ರಕಾಶ ಮಾತನಾಡಿ, ನರ ವೈಜ್ಞಾನಿಕ ಕಾಯಿಲೆಗಳಾ ತಲೆನೋವು, ಪಾರ್ಶ್ವವಾಯು, ಅಪಸ್ಮಾರ ಹಾಗೂ ಡಿಮಾನ್ಷಿಯ ಕಾಯಿಲೆಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ನರವೈಜ್ಞಾನಿಕ ಕಾಯಿಲೆ ಇರುವ ವ್ಯಕ್ತಿಗೆ ಬೆಂಗಳೂರಿನ ನಿಮ್ಹಾನ್ಸ್​ ಇಂದ ಟೆಲಿ ನ್ಯೂರೋಲಾಜಿ ಸೇವೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಫಿಸಿಯೋಥೆರಪಿಸ್ಟ್​ ಡಾ.ಚೈತ್ರಾ ಸರೋದೆ, ವೈದ್ಯಾಧಿಕಾರಿಗಳಾದ ಶರಣಪ್ಪ, ಸರ್ವಮಂಗಳ ಇತರಿದ್ದರು.