ಕೊಪ್ಪಳದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯಲ್ಲಿ ವಿಪ ಮಾಜಿ ಸದಸ್ಯ ಅಮರನಾಥ ಪಾಟೀಲ್​ ಮಾತನಾಡಿದರು. ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮನವಳ್ಳಿ, ಡಾ. ಕೆ.ಜಿ. ಕುಲಕರ್ಣಿ, ಡಾ. ಬಸವರಾಜ ಕ್ಯಾವಟರ್​, ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ್​ ಗುಳಗಣ್ಣವರ, ಪದಾಧಿಕಾರಿಗಳಾದ ಕರಿಯಪ್ಪ ಮೇಟಿ, ರತ್ನಾಕುಮಾರಿ ಇತದ್ದರು. 
ಕೊಪ್ಪಳ

ಪಕ್ಷದ ಸಿದ್ಧಾತಗಳೆ ಬಿಜೆಪಿ ಬೆಳವಣಿಗೆಗೆ ಬುನಾದಿ

ಪ್ರಮುಖ ಮುಖ್ಯಾಂಶಗಳು

  • ಅಮರನಾಥ ಪಾಟೀಲ್​ ಅಭಿಪ್ರಾಯ
  • ಬಿಜೆಪಿ ಸಂಸ್ಥಾನ ದಿನಾಚರಣೆ
ಕೊಪ್ಪಳ : ಭಾರತೀಯ ಜನತಾ ಪಾರ್ಟಿಯು ಕಳೆದ 46 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯಲು ಪಕ್ಷದ ಹಿರಿಯರು ನಂಬಿಕೊಂಡು ಬಂದ ಸಿದ್ಧಾಂತಗಳೇ ಪ್ರಮುಖ ಕಾರಣ. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ಧೇಯೋದ್ದೇಶದೊಂದಿಗೆ ಬಿಜೆಪಿ ಇಂದು ವಿಶ್ವದ ಅತೀ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ ಎಂದು ಬಳ್ಳಾರಿ ವಿಭಾಗದ ಪ್ರಭಾರಿ ಹಾಗೂ ವಿಧಾನ ಪರಿಷತ್​ ಮಾಜಿ ಸದಸ್ಯ ಅಮರನಾಥ ಪಾಟೀಲ್​ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಾರತಿಯ ಜನತಾ ಪಾರ್ಟಿ1980 ಏಪ್ರಿಲ್​ 6 ರಂದು ಸ್ಥಾಪನೆಯಾದ ಈ ಪಕ್ಷವು ಹತ್ತಾರು ಮಹನೀಯರ ಬಲಿದಾನದಿಂದ ಕಟ್ಟಿ ನಿಲ್ಲಿಸಲಾಗಿದೆ. 70 ವರ್ಫಿಗಳ ಹಿಂದೆ ಕಂಡ ಅಖಂಡ ಭಾರತದ ಕನಸನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆರ್ಟಿಕಲ್​ 370 ರದ್ದುಪಡಿಸುವ ಮೂಲಕ ನನಸು ಮಾಡಿದ್ದಾರೆ. ಹಿಂದೆ ಜಮ್ಮು-ಕಾಶ್ಮೀರಕ್ಕೆ ಹೋಗಲು ಪರ್ಮಿಟ್​ ಬೇಕಿತ್ತು, ಇಂದು ಆ ಪರಿಸ್ಥಿತಿಯನ್ನು ಬದಲಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಟ್ಟ ಹೆಮ್ಮೆ ನಮ್ಮ ಪಕ್ಷಕ್ಕಿದೆ. ನುಡಿದಂತೆ ನಡೆದ ಪಕ್ಷ ಯಾವುದಾದರೂ ಇದ್ದರೆ ಅದು ಬಿಜೆಪಿ ಮಾತ್ರ ಎಂದು ಬಣ್ಣಿಸಿದರು..
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಸಾಮಾನ್ಯ ಕಾರ್ಯಕರ್ತರಿಗೂ ಮನ್ನಣೆ ನೀಡುವ ಏಕೈಕ ಪಕ್ಷ ಬಿಜೆಪಿ. ಪ್ರಸ್ತುತ ಬಿಜೆಪಿ ಎದುರಾಳಿ ಕಾಂಗ್ರೆಸ್​ ಪಕ್ಷದಲ್ಲಿ ಭಯ ಹುಟ್ಟಿಸುವಫಿ್ಟು ಶಕ್ತಿಯುತವಾಗಿ ಬೆಳೆದಿದೆ. ನಿಫಿ್ಠೆಯಿಂದ ದುಡಿಯುವವರನ್ನು ಪಕ್ಷ ಎಂದಿಗೂ ಕೈಬಿಡುವುದಿಲ್ಲ ಎಂದರು.
ಮಾಜಿ ಶಾಸಕ ಪರಣ್ಣ ಮನವಳ್ಳಿ ಮಾತನಾಡಿ, ನರೇಂದ್ರ ಮೋದಿ ಅವರು ಇಂದು ವಿಶ್ವಗುರುವಾಗಿ ಮಿಂಚುತ್ತಿದ್ದಾರೆ. ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರ ಹಾಗೂ ಮುಂಬರುವ ಉಪಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನೂರಕ್ಕೆ ನೂರರಷ್ಟು ಬಹುಮತದಿಂದ ಗೆಲ್ಲಲಿದ್ದಾರೆಂದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ, ಪದಾಧಿಕಾರಿಗಳಾದ ಕರಿಯಪ್ಪ ಮೇಟಿ, ರತ್ನಾಕುಮಾರಿ, ಮಹಾಂತೇಶ ಮೈನಳ್ಳಿ, ಬಸಲಿಂಗಪ್ಪ ಭೂತೆ, ಅಪ್ಪಣ್ಣ ಪದಕಿ, ಅರವಿಂದಗೌಡ ಪಾಟೀಲ್​, ವಿ.ಎಸ್​.ಭೂಸನೂರಮಠ, ರಾಘವೇಂದ್ರ ಪಾನಂಟಿ, ಎಂ.ಬಿ.ಅಳವಂಡಿ, ಚಂದ್ರಶೇಖರ ಪಾಟೀಲ್​ ಹಲಗೇರಿ, ಡಾ.ನೀಲಕಂಠಯ್ಯ ಹಿರೇಮಠ, ವೀರೇಶ ಸಜ್ಜನ, ಕಳಕಪ್ಪ, ಅಶೋಕ, ರಾಜು ಬಾಕಳೆ, ವಾಣಿಶ್ರೀ ಮಠದ, ರಮೇಶ ನಾಡಿಗೇರ್​ ಇತರರಿದ್ದರು.
"

ಬಿಜೆಪಿ ಕೇವಲ ರಾಜಕೀಯ ಪಕ್ಷವಲ್ಲ; ದೇಶ ಸೇವಕರನ್ನು ಹೊಂದಿರುವ ಶಕ್ತಿ. ಕಾರ್ಯಕರ್ತರು ಕೇವಲ ಪಕ್ಷಕ್ಕಾಗಿ ಮಾತ್ರವಲ್ಲ, ದೇಶದ ಜನರ ಸೇವೆಗಾಗಿ ಶ್ರಮಿಸುವವರು.