ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಶಾಲಾ ವಾರ್ಷಿಕೋತ್ಸವ ಕಲಾ ಸೌರಭ ಕಾರ್ಯಕ್ರಮವನ್ನು ಟಿಎಪಿಸಿಎಂಎಸ್ ನಿರ್ದೇಶಕ ಜೋಗದ ನಾರಾಯಣಪ್ಪ ನಾಯಕ ಉದ್ಘಾಟಿಸಿದರು. ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು, ಶ್ರೀರಾಮನಗರದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿಲುಕೂರಿ ವೆಂಕಟರಾಮಕಷ್ಣ, ಗ್ರಾಪಂ ಅಧ್ಯಕ್ಷ ಡಿ.ಶಾಂತಪ್ಪ ಇತರರಿದ್ದರು.
ಪಾಲಕರು ಮಕ್ಕಳಲ್ಲಿ ಆತ್ಮಸ್ಥೆರ್ಯ ಬೆಳೆಸಲು ಮುಂದಾಗಿ
ಗಂಗಾವತಿ: ಪಾಲಕರು ಶಿಕ್ಷಣದಿಂದ ಮಕ್ಕಳಲ್ಲಿ ಆತ್ಮಸ್ಥೆರ್ಯ ಬೆಳೆಸುವ ಕೆಲಸಕ್ಕೆ ಮುಂದಾದರೆ ಮಾತ್ರ ಭವಿಷ್ಯ ಉಜ್ವಲವಾಗಲಿದೆ ಎಂದು ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ಶ್ರೀ ದುರ್ಗಾದೇವಿ ದೇವಾಲಯ ಸಮಿತಿ ಅಧ್ಯಕ್ಷ ಜೋಗದ ನಾರಾಯಣಪ್ಪ ನಾಯಕ ಹೇಳಿದರು.
ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಕಲಾ ಸೌರಭ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಾಲಕರ ಆಸೆ ಈಡೇರಿಸುವತ್ತ ಮಕ್ಕಳು ಗಮನಹರಿಸಬೇಕು. ಶಿಕ್ಷಣಕ್ಕಾಗಿ ದೂರದ ಊರುಗಳಿಗೆ ಹೋಗುವಂಥ ಕಾಲವಿತ್ತು. ಆದರೆ, ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣವನ್ನು ಸ್ಥಳೀಯವಾಗಿ ದೊರೆಯುವಂತೆ ಮಾಡಿದ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಸಾಧನೆ ಶ್ಲಾಘನೀಯ ಎಂದರು.
ಮಕ್ಕಳ ತಜ್ಞ ಡಾ.ಕೆ.ಅಮರೇಶ ಪಾಟೀಲ್ ಮಾತನಾಡಿ, ಜಿಲ್ಲೆಯಲ್ಲಿ ಗವಿಸಿದ್ದೇಶ್ವರ ಜಾತ್ರೆ ನಂತರ ಸರಸ್ವತಿ ಜಾತ್ರೆ ನಡೆಯುತ್ತಿದೆ. ನಾಡಿನ ಪರಂಪರೆ, ಕಲೆ ಸಂರಕ್ಷಿಸಬೇಕು. ಮಕ್ಕಳಿಗೆ ಗೌರವಯುತ ಬದುಕು ನೀಡುವತ್ತ ಗಮನಹರಿಸಬೇಕು. ಮಕ್ಕಳು ಎಐ ಕಾಲದಲ್ಲಿದ್ದು, ವಿಶೇಷ ಕೌಶಲ, ಮಾನವೀಯ ಗುಣ ಮೂಡಿಸಬೇಕಿದೆ. ಒತ್ತಡದಿಂದ ಆರೋಗ್ಯ ಸಮಸ್ಯೆ ಕಾಡುತ್ತಿವೆ. ಮಕ್ಕಳ ಆರೋಗ್ಯ ಕಾಪಾಡುವತ್ತ ಗಮನಹರಿಸಿ ಎಂದು ಸಲಹೆ ನೀಡಿದರು.
ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಮಾತನಾಡಿ, 2006ರಲ್ಲಿ ಆರಂಭವಾದ ಸಂಸ್ಥೆ 9 ಸಾವಿರ ವಿದ್ಯಾರ್ಥಿಗಳು, 1ಸಾವಿರ ಶಿಕ್ಷಕರು, ಐಸಿಎಸ್‌ಇ, ಸಿಬಿಎಸ್‌ಇ, ಪದವಿ, 4 ಪಿಯು ಕಾಲೇಜುಗಳವರೆಗೆ ಬೆಳೆದಿದೆ. 25 ಜಿಲ್ಲೆಯ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಸಂಸ್ಥೆ ಯಶಸ್ಸಿನ ಬೆಳವಣಿಗೆಯಲ್ಲಿ ಪಾಲಕರಿಗೂ ಪಾಲು ಸಲ್ಲುತ್ತದೆ. ನರ್ಸರಿಯಿಂದ ನೌಕರಿವರೆಗೆ ಪರಿಕಲ್ಪನೆಯಡಿ ಸ್ವಾವಲಂಬಿ ಬದುಕು ರೂಪಿಸಲು ಕೆಲಸ ಮಾಡುತ್ತಿದ್ದೇವೆ. ಪಾಲಕರು ಮಕ್ಕಳಿಗೆ ಸಮಯ ನೀಡಿ ಪ್ರಜ್ಞಾವಂತರಾಗಿಸಿ ಸುಶಿಕ್ಷಿತ ಸಮಾಜ ನಿರ್ಮಿಸೋಣ ಎಂದರು.
ಶ್ರೀರಾಮನಗರದ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿಲುಕೂರಿ ವೆಂಕಟರಾಮಕಷ್ಣ, ಗ್ರಾಪಂ ಅಧ್ಯಕ್ಷ ಡಿ.ಶಾಂತಪ್ಪ, ಪ್ರಮುಕರಾದ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಶರಣೇಗೌಡ, ಡಿ.ಆರ್.ಪ್ರಸಾದ್, ಕರಟೂರಿ ವೆಂಕಟರಾವ್, ಎಚ್.ಕೆ.ಚಂದ್ರಮೋಹನ್, ಕಷ್ಣಪ್ಪ ನಾಯಕ ಇತರರಿದ್ದರು.