ಗಂಗಾವತಿ ತಾಲೂಕಿನ ಶ್ರೀರಾಮನಗರದ ರಾಘವೇಂದ್ರ ಕಾಲನಿಯ ಶ್ರೀ ಯಲ್ಲಮ್ಮ ದೇವಿ ದೇವಾಲಯದಲ್ಲಿ ಅಷಾಢ ಏಕಾದಶಿ ನಿಮಿತ್ತ ಪಾಂಡುರಂಗ ವಿಠ್ಠಲ ರುಕ್ಮಾಯಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ದೇವಾಲಯದ ಅರ್ಚಕ ಶ್ರೀಕಾಂತಯ್ಯಸ್ವಾಮಿ, ಪ್ರಮುಖರಾದ ಕೊಟ್ನೆಕಲ್‌ನ ಸಂಗಯ್ಯಸ್ವಾಮಿ, ಚಿಕ್ಕಸೋಬಟಗಿ ಚಂದ್ರಪ್ಪ ಇತರರಿದ್ದರು. 
ಕೊಪ್ಪಳ

ಪಾಂಡುರಂಗ ವಿಠ್ಠಲ ರುಕ್ಮಾಯಿ ಭಾವಚಿತ್ರ ಮೆರವಣಿಗೆ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಯಲ್ಲಮ್ಮ ದೇವಿ ದೇವಾಲಯ
  • ಅಷಾಢ ಏಕಾದಶಿ
ಗಂಗಾವತಿ: ತಾಲೂಕಿನ ಶ್ರೀರಾಮನಗರದ ರಾಘವೇಂದ್ರ ಕಾಲನಿಯ ಶ್ರೀ ಯಲ್ಲಮ್ಮ ದೇವಿ ದೇವಾಲಯದಲ್ಲಿ ಅಷಾಢ ಏಕಾದಶಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕುಂಭ, ಕಲಶ, ವಾದ್ಯ, ವೇದ ಮೇಳದೊಂದಿಗೆ ಪಾಂಡುರಂಗ ವಿಠ್ಠಲ ರುಕ್ಮಾಯಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು.
ನಂತರ ಶ್ರೀ ಮದ್ ಭಗದ್ಗೀತೆ ಗ್ರಂಥ ಪೋತಿ ಸ್ಥಾಪನೆ, ಸಂಕೀರ್ತನೆ, ನಾಮ ಜಪ, ನಿರಂತರ ಭಜನೆ ಹಮ್ಮಿಕೊಳ್ಳಲಾಗಿತ್ತು. ನಂತರ ಪುನ್ನಾಪುರದ ಸಂಗೀತ ಕಲಾವಿದೆ ವೀಣಾ ವಾದನ ಪ್ರದರ್ಶಿಸಿದರು. ದೇವಾಲಯದ ಅರ್ಚಕ ಶ್ರೀಕಾಂತಯ್ಯಸ್ವಾಮಿ, ಪ್ರಮುಖರಾದ ಕೊಟ್ನೆಕಲ್‌ನ ಸಂಗಯ್ಯಸ್ವಾಮಿ, ಚಿಕ್ಕಸೋಬಟಗಿ ಚಂದ್ರಪ್ಪ, ಹಳೇಜೂರಟಗಿ ವೆಂಕಟೇಶಪ್ಪ, ಚಿಕ್ಕಬೊಮ್ಮನಾಳ ದೇವಪ್ಪ, ಹುಲಸನಹಟ್ಟಿ ಶರಣಪ್ಪ, ಹೊಸಪೇಟೆಯ ಪದ್ಮಾವತಿ ಇತರರಿದ್ದರು.