ಕುಕನೂರಿನಲ್ಲಿ ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರುಗೆ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿದರು. ಪ್ರಮುಖರಾದ ಲಕ್ಷ್ಮಣ ಕಾಳಿ, ಸುರೇಶ ಬಳೂಟಗಿ, ಪ್ರಕಾಶ ರಾಜೂರು, ಸಿದ್ದು ಮಣ್ಣಿನವರ, ಸಿದ್ದು ವಾಲ್ಮೀಕಿ ಇತರರಿದ್ದರು. 
ಕೊಪ್ಪಳ

ಸಚಿವ ಕಾಶಪ್ಪನವರ್ ಹೇಳಿಕೆಗೆ ಆಕ್ರೋಶ

ನರೇಶ್ ಕುಮಾರ್

ಕುಕನೂರು: 

ಸಚಿವ ವಿಜಯಾನಂದ ಕಾಶಪ್ಪನವರ್ ಅವಹೇಳನಕಾರಿ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರುಗೆ ಮನವಿ ಸಲ್ಲಿಸಿದರು. 

ವಿಜಯಾನಂದ ಕಾಶಪ್ಪನವರ್ ಅವರು ಇಳಕಲ್‌ನಲ್ಲಿ ಸುದ್ದಿಗೋಷ್ಠಿ ವೇಳೆ ದಲಿತರಿಗೆ ಅವಮಾನಿಸುವಂತೆ ಮಾತನಾಡಿ ನೋವುಂಟು ಮಾಡಿದ್ದಾರೆ. ಈ ರೀತಿ ಇನ್ನೊಬ್ಬರನ್ನು ಹೀಯಾಳಿಸುವುದು, ಅವಮಾನ ಮಾಡುವುದು ಇದೇ ಮೊದಲೇನಲ್ಲ. ಹಲವಾರು ಬಾರಿ ಎಲ್ಲರನ್ನೂ ಅವಾಚ್ಯ ಶಬ್ದ ಬಳಸಿ ಮಾತನಾಡಿದ್ದಾರೆ. 
ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿ ಹೇಗೆ ಮಾತನಾಡಬೇಕೆಂಬ ಕನಿಷ್ಠ ಪುಜ್ಞೆ  ಇಲ್ಲ. ಮಠಾಧೀಶರು ಹಾಗೂ ಪೊಲೀಸರನ್ನು ನಿಂದಿಸುತ್ತಾರೆ. ಪತ್ರಕರ್ತರಿಗೆ ಬೆದರಿಕೆ ಹಾಗೂ ರೈತರ ಮೇಲೆ ದರ್ಪ ತೋರಿಸುತ್ತಾರೆ. ಇಳಕಲ್ ಮತ್ತು ಹುನಗುಂದ ತಾಲೂಕಿನಲ್ಲಿ ಇವರ ದೌರ್ಜನ್ಯ ಮಿತಿಮೀರಿದೆ. ದಲಿತರಿಗೆ ಅವಮಾನ ಮಾಡುವಂತೆ ಮಾತನಾಡಿರುವುದು ಖಂಡನೀಯ. ಆದ್ದರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಒಕ್ಕೂಟದ ಸದಸ್ಯರಾದ ಲಕ್ಷ್ಮಣ ಕಾಳಿ, ಸುರೇಶ ಬಳೂಟಗಿ, ಪ್ರಕಾಶ ರಾಜೂರು, ಸಿದ್ದು ಮಣ್ಣಿನವರ, ಸೋಮಣ್ಣ ಇಟಗಿ, ಸಿದ್ದು ವಾಲ್ಮೀಕಿ, ಪ್ರಭುರಾಜ ರಾಜೂರು, ನಾಗರಾಜ ಚಲುವಾದಿ, ಆನಂದ ಚಲುವಾದಿ, ಮಂಜುನಾಥ ಭಜಂತ್ರಿ, ಮಲ್ಲಪ್ಪ ಗೊರ್ಲೆಕೊಪ್ಪ, ಶರಣಪ್ಪ ಕಾಳಿ ಇತರರಿದ್ದರು.