ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಕೊಪ್ಪಳದಲ್ಲಿ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಮನವಿ ಸಲ್ಲಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಪ್ರಮುಖರಾದ ವಿ.ಎಂ.ಭೂಸನೂರಮಠ, ಎ.ವಿ.ಕಣವಿ, ರಾಜು ಬಾಕಳೆ, ಸುನಿಲ್ ಹೆಸರೂರು ಇದ್ದರು.
- ಕ್ರಮಕ್ಕೆ ಬಿಜೆಪಿ ನಾಯಕ ಆಗ್ರಹ
- ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಮನವಿ
ಕೊಪ್ಪಳ: ಆರ್ಎಸ್ಎಸ್ ಹಾಗೂ ಬಿಜೆಪಿಯವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿ ಉದ್ವಿಗ್ನ ಸ್ಥಿತಿ ಉಂಟಾಗಲು ಕಾರಣವಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಗುರುವಾರ ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿಗೆ ಮನವಿ ಸಲ್ಲಿಸಿದರು.
ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಖರ್ಗೆ, ಕುರಾನ್ ಉಲ್ಲೇಖಿಸಿ ಆರ್ಎಸ್ಎಸ್, ಬಿಜೆಪಿ ವಿಷಸರ್ಪದಂತೆ. ಕಂಡಾಗ ಕೊಲ್ಲಬೇಕು ಎಂದು ಪ್ರಚೋದನಾತ್ಮಕವಾಗಿ ಹೇಳಿದ್ದಾರೆ. ಮುಸ್ಲಿಮರಿಗೆ ನೇರವಾಗಿ ನೀವು ಕೊಲ್ಲದಿದ್ದರೆ ಬದುಕುವುದಿಲ್ಲವೆಂದು ಪ್ರೆರೇಪಿಸಿದ್ದಾರೆ. ಪ್ರಮುಖ ಹುದ್ದೆಯಲ್ಲಿದ್ದು, ಅಲ್ಪಸಂಖ್ಯಾತರ ಓಲೈಕೆಗೆ ಮಾಡಿದ ಭಾಷಣ ಲಾಂತರ ಸ್ವಯಂ ಸೇವಕರು, ಬಿಜೆಪಿಗರಿಗೆ ಜೀವ ಭಯ ತಂದೊಡ್ಡಿದೆ. ಮತಿಗೇಡಿಗಳು, ಮೂಲಭೂತವಾದಿಗಳಿಗೆ ಅಸ್ತ್ರ ನೀಡಿದಂತಾಗಿದೆ ಎಂದು ಆರೋಪಿಸಿದರು.
ಧಾರ್ಮಿಕ, ಸಮುದಾಯಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ದ್ವೇಷ ಭಾಷಣಕ್ಕೆ ಅವಕಾಶವಿಲ್ಲ. ಹಲವು ಕಾಯ್ದೆಗಳ ಉಲ್ಲಂನೆಯಾಗಿದೆ. ಇಂಥ ಟನೆ ನಡೆದಾಗ ಯಾವುದೇ ದೂರು ಕೊಡುವುದನ್ನು ಕಾಯುವ ಅಗತ್ಯವಿಲ್ಲ. ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲು ಕಾನೂನು ಅವಕಾಶ ಕಲ್ಪಿಸಿದೆ. ಖರ್ಗೆ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಬಿಜೆಪಿ ಹಾಗೂ ಆರ್ಎಸ್ಎಸ್ ಸ್ವಯಂ ಸೇವಕರಿಗೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಪ್ರಮುಖರಾದ ವಿ.ಎಂ.ಭೂಸನೂರಮಠ, ಎ.ವಿ.ಕಣವಿ, ರಾಜು ಬಾಕಳೆ, ಸುನಿಲ್ ಹೆಸರೂರು, ಪ್ರದಿಪ್ ಹಿಟ್ನಾಳ, ದೇವರಾಜ ಹಾಲಸಮುದ್ರ ಇತರರಿದ್ದರು.