ಗಂಗಾವತಿ ಟಿಎಂಇಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಬಿಇ.ಡಿ ಪರೀಕ್ಷೆ ಘಟಕಕ್ಕೆ ಕೊಪ್ಪಳ ವಿವಿ ಉಪಕುಲಪತಿ ಡಾ.ಎಸ್.ವಿ.ಡಾಣಿ ಭೇಟಿ ನೀಡಿ ಪರಿಶೀಲಿಸಿದರು. ಕೇಂದ್ರದ ಮುಖ್ಯಸ್ಥ ಡಾ.ಕೆ.ರಮೇಶ ಸಿದ್ದಪ್ಪ, ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ಇತರರಿದ್ದರು. 
ಕೊಪ್ಪಳ

ಪಾರದರ್ಶಕವಾಗಿ ಪರೀಕ್ಷೆ ಆಯೋಜಿಸಿ

ರುದ್ರಪ್ಪ ವಾಲಿ
ಗಂಗಾವತಿ : ಟಿಎಂಇಇಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಬಿಇ.ಡಿ ಪರೀಕ್ಷೆ ಘಟಕಕ್ಕೆ ಕೊಪ್ಪಳ ವಿವಿ ಉಪಕುಲಪತಿ ಡಾ.ಎಸ್.ವಿ.ಡಾಣಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಕೇಂದ್ರದಲ್ಲಿ ಬಿಇ.ಡಿ ಪ್ರಥಮ ಮತ್ತು ತತೀಯ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತಿದ್ದು, ದಿಢೀರ ಭೇಟಿ ನೀಡಿ ವ್ಯವಸ್ಥೆಯ ಮಾಹಿತಿ ಪಡೆದುಕೊಂಡರು. ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡ ಅಗತ್ಯ ವ್ಯವಸ್ಥೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಂತಿಯುತ ಮತ್ತು ಪಾರದರ್ಶಕತೆಯಿಂದ ಪರೀಕ್ಷೆ ಆಯೋಜಿಸಬೇಕಿದ್ದು, ಮೇಲ್ವಿಚಾರಕರು ಕಣ್ಗಾವಲಾಗಿರುವಂತೆ ಡಾ.ಎಸ್.ವಿ.ಡಾಣಿ ಸಿಬ್ಬಂದಿಗೆ ಸೂಚಿಸಿದರು. ಪರೀಕ್ಷೆ ಕೇಂದ್ರದಲ್ಲಿನ ವ್ಯವಸ್ಥೆ ಮತ್ತು ಮಾರ್ಗಸೂಚಿಯ ಕುರಿತು ಪ್ರಾಚಾರ್ಯ ಡಾ.ಕೆ.ಸಿ.ಕುಲ್ಕರ್ಣಿ ವಿವರಿಸಿದರು.
ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಸಹ ಪ್ರಾಧ್ಯಾಪಕ ಡಾ.ಣಿರಾಜ್, ಪರೀಕ್ಷೆ ಕೇಂದ್ರದ ಮುಖ್ಯಸ್ಥ ಡಾ.ಕೆ.ರಮೇಶ ಸಿದ್ದಪ್ಪ, ಪ್ರಾಧ್ಯಾಪಕರಾದ ಡಾ.ಡಿ.ಎಂ.ಅರುಣಕುಮಾರ, ಕೆ.ಎಂ. ಶಿವಪ್ರಕಾಶ, ಜಯರಾಮ ಮರಡಿತೋಟದ್, ಮರಳಿ ಎಸ್‌ಎಂಬಿಎಸ್ ಬಿಇ.ಡಿ ಕಾಲೇಜು ಉಪನ್ಯಾಸಕರಾದ ಶರಣಪ್ಪ ಸಂಗಟಿ,ಆರ್.ಸಿ.ಶರಣಪ್ಪ, ಅಮರೇಶಪ್ಪ, ರುದ್ರೇಶ ಎಂ. ಆರಾಳ, ಎಚ್. ಕೀರಪ್ಪ ಇತರರಿದ್ದರು.