ಗಂಗಾವತಿ ಕ್ರೀಡಾ ಮೈದಾನದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಒತ್ತಾಯಿಸಿ ಕರವೇ ಪ್ರವೀಣ ಶೆಟ್ಟಿ ಬಣ ಜಿಲ್ಲಾ ಘಟಕದ ಕಾರ್ಯಕರ್ತರು ಆರೋಗ್ಯ ನಿರೀಕ್ಷಕ ಎ.ನಾಗರಾಜ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಪಂಪಣ್ಣನಾಯಕ, ಪದಾಧಿಕಾರಿಗಳಾದ ಶಂಕರ ಪೂಜಾರಿ, ಮುತ್ತಣ್ಣ ಈಳಿಗೇರ, ಹಸೇನ್‌ಸಾಬ್, ಶರಣು ನಾಯಕ, ಪುಂಡಲೀಕ ಇತರರಿದ್ದರು. 
ಕೊಪ್ಪಳ

ಕ್ರೀಡಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ರಕ್ಷಣಾ ವೇದಿಕೆ ಮನವಿ
  • ನಗರಸಭೆ ಕ್ರಮಕ್ಕೆ ಖಂಡನೆ
ಗಂಗಾವತಿ: ಕ್ರೀಡಾ ಮೈದಾನದಲ್ಲಿ ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳದಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ಜಿಲ್ಲಾ ಘಟಕದ ಕಾರ್ಯಕರ್ತರು ನಗರಸಭೆ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಆರೋಗ್ಯ ನಿರೀಕ್ಷಕ ಎ.ನಾಗರಾಜ್‌ಗೆ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಪಂಪಣ್ಣನಾಯಕ ಮಾತನಾಡಿ, ನಗರದ ಜೂನಿಯರ್ ಕಾಲೇಜಿನ ಕ್ರೀಡಾ ಮೈದಾನಕ್ಕೆ 75 ವರ್ಷಗಳ ಇತಿಹಾಸವಿದ್ದು, ಹಲವು ಕ್ರೀಡಾಪಟುಗಳ ಬೆಳವಣಿಗೆಗೆ ವೇದಿಕೆಯಾಗಿದೆ. ಮೈದಾನದಲ್ಲಿದ್ದ ಬಯಲು ರಂಗ ಮಂದಿರ ಸಾಹಿತಿಗಳು ಮತ್ತು ಕಲಾವಿದರಿಗೆ ಅನುಕೂಲವಾಗಿತ್ತು. ಅದನ್ನು ತೆರವುಗೊಳಿಸಿರುವ ನಗರಸಭೆ ಅಧಿಕಾರಿಗಳು, ುಡ್ ಕೋರ್ಟ್ ನಿರ್ಮಿಸಲುದ್ದೇಶಿಸಿರುವುದು ಖಂಡನೀಯ. ುಡ್ ಕೋರ್ಟ್‌ಗೆ ಅವಕಾಶ ನೀಡಿದರೆ ಮೈದಾನದಲ್ಲಿ ಕುಡುಕರ ಹಾವಳಿ ಹೆಚ್ಚಾಗಲಿದ್ದು, ಸಮಾಜ ವಿರೋಧಿ ಚಟುವಟಿಗಳಿಗೆ ಅವಕಾಶ ನೀಡಿದಂತಾಗುತ್ತದೆ. ಮೈದಾನ ಸುತ್ತಲಿರುವ ನಾಲ್ಕು ಶಾಲೆಗಳ 4ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ವಾಯುವಿಹಾರಕ್ಕೆ ಬರುವ ಹಿರಿಯ ನಾಗರಿಕರಿಗೆ ತೊಂದರೆಯಾಗಲಿದೆ. ಬಯಲು ರಂಗ ಮಂದಿರ ನಿರ್ಮಿಸುವುದರ ಜತೆಗೆ ಯಾವುದೇ ಕಾರಣಕ್ಕೂ ಕ್ರೀಡಾ ಮೈದಾನ ಅನ್ಯ ಕಾಮಗಾರಿಗಳಿಗೆ ಬಳಸಿಕೊಳ್ಳದಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಶಂಕರ ಪೂಜಾರಿ, ಮುತ್ತಣ್ಣ ಈಳಿಗೇರ, ಹಸೇನ್‌ಸಾಬ, ಶರಣು ನಾಯಕ, ಪುಂಡಲೀಕ, ಪುನೀತ್ ಪೂಜಾರಿ, ಅಂಜಿನಪ್ಪ, ಉಮೇಶ ಬಂಡಿ, ಬಾಷಾಸಾಬ್, ಕಷ್ಣ ಇತರರಿದ್ದರು.
ನಂತರ ಬೇಡಿಕೆ ಮನವಿಯನ್ನು ತಾಪಂ ಕಚೇರಿ ಆವರಣದಲ್ಲಿರುವ ಶಾಸಕರ ಕಚೇರಿಯಲ್ಲಿ ಶಾಸಕರ ಆಪ್ತ ಕಾರ್ಯದರ್ಶಿ ಸುರೇಶ ಉಪ್ಪಾರ್‌ಗೆ ಮನವಿ ಸಲ್ಲಿಸಲಾಯಿತು.