ಮುನಿರಾಬಾದ್‌ನಲ್ಲಿ ಮಾದಕ ವಸ್ತು ಹಾಗೂ ಸೈಬರ್ ಕ್ರೈಂ ಕುರಿತು ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಪಿಎಸ್‌ಐ ಅಮರೇಗೌಡ, ಪ್ರಮುಖರಾದ ವೀರೇಶ ಗುಡಾರಿ, ಶರಣಪ್ಪ, ನರಸಪ್ಪ, ಶರಣಪ್ಪ, ವಾಹೀದ್ ಇತರರಿದ್ದರು. 
ಕೊಪ್ಪಳ

ಆನ್‌ಲೈನ್ ವಂಚನೆ ಬಗ್ಗೆ ಎಚ್ಚರವಿರಲಿ

ಮುನಿರಾಬಾದ್: ಇತ್ತೀಚಿನ ದಿನಗಳಲ್ಲಿ ಯುವಜನತೆ ಹಾಗೂ ಸಾರ್ವಜನಿಕರಲ್ಲಿ ಮಾದಕ ದ್ರವ್ಯಗಳ ವ್ಯಸನ ಹೆಚ್ಚಾಗುತ್ತಿದ್ದು ಇದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ. ಇದರ ತಡೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮುನಿರಾಬಾದ್ ಠಾಣೆ ಪಿಎಸ್‌ಐ ಅಮರೇಗೌಡ ಹೇಳಿದರು.
ಇಲ್ಲಿನ ಮುನಿರಾಬಾದ್ ಡ್ಯಾಂನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಕ ವಸ್ತು ಹಾಗೂ ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಾದಕ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಅಹಿತಕರ ಘಟನೆಗಳು ಹೆಚ್ಚುತ್ತಿವೆ. ಇದು ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲದೆ, ಇಡೀ ಕುಟುಂಬ ಮತ್ತು ದೇಶದ ಭವಿಷ್ಯದ ಮೇಲೆ ಮಾರಕ ಪ್ರಭಾವ ಬೀರುತ್ತದೆ. ಇದರೊಂದಿಗೆ ಸಾರ್ವಜನಿಕರು ಆನ್‌ಲೈನ್ ವಂಚನೆಗಳ ಬಗ್ಗೆಯೂ ಎಚ್ಚರದಿಂದಿರಬೇಕು. ಅಪರಿಚಿತ ಲಿಂಕ್‌ಗಳನ್ನು ಒತ್ತಬಾರದು ಹಾಗೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಬಾರದು ಎಂದು ತಿಳಿಸಿದರು.