ಕೊಪ್ಪಳದ ಫಿದೋರ್ಸ್​ ಮಸೀದಿಗೆ ಅನುದಾಮ ಬಿಡುಗಡೆ ಪ್ರಮಾಣ ಪತ್ರವನ್ನು ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಶುಕ್ರವಾರ ನೀಡಿದರು. ಇಮಾಮ್​ ಮೌಲಾನ ಸಿರಾಜುದ್ದೀನ್​ ರಶಾದಿ, ಆಡಳಿತ ಮಂಡಳಿ ಸಂಚಾಲಕ ಬಹದ್ದೂರ್​ ಖಾನ್​ ಇದ್ದರು.  
ಕೊಪ್ಪಳ

ಮಸೀದಿಗೆ ಒಂದು ಕೋಟಿ ರೂ. ಅನುದಾನ

ಪ್ರಮುಖ ಮುಖ್ಯಾಂಶಗಳು

  • ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಹೇಳಿಕೆ
ಕೊಪ್ಪಳ: ನಗರದ ಫಿದೋರ್ಸ್​ ನಗರದ ಮಸೀದಿ ಹಾಗೂ ಅರಬ್ಬಿ ಶಾಲೆಗಳ ಮೂಲಸೌಕರ್ಯಕ್ಕೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಶುಕ್ರವಾರ ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಆದೇಶ ಪ್ರತಿ ನೀಡಿದರು.
ನಂತರ ಮಾತನಾಡಿ, ಮಸೀದಿ ಹಾಗೂ ಅರಬ್ಬಿ ಶಾಲೆಗೆ ಮೂಲ ಸೌಕರ್ಯಗಳಿರಲಿಲ್ಲ. ಈ ಬಗ್ಗೆ ಮಸೀದಿ ಕಮಿಟಿ ನನಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ದೂರವಾಣಿ ಕರೆ ಮಾಡಿ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್​ ಅಹಮದ್​ ಖಾನ್​ಗೆ ಅನುದಾನ ಕೇಳಿ ಮನವಿ ಮಾಡಿದ್ದೆ. ಅದಕ್ಕೆ ಸ್ಪಂದಿಸಿದ ಸಚಿವರು ತಕ್ಷಣ ಉಮ್ಮಿದ್​ ಯೋಜನೆಯಡಿ ಒಂದು ಕೋಟಿ ರೂ. ಕೊಡುವುದಾಗಿ ಭರವಸೆ ನೀಡಿದರು. ಅದರಂತೆ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿ ಆದೇಶ ಬಂದಿರುವುದು ಸಂತಸ ತಂದಿದೆ. ಮಸೀದಿ ಹಾಗೂ ಅರಬ್ಬಿ ಶಾಲೆಯ ಎಲ್ಲಾ ದಾಖಲೆಗಳನ್ನು ಸರಕಾರದ ಉಮ್ಮಿದ್​ ಯೋಜನೆಯಡಿ ದಾಖಲಿಕರಣ ಮಾಡಿಸಲಾಗಿದೆ ಎಂದರು.
ಮಸೀದಿ ಕಮಿಟಿಯಿಂದ ಅಮ್ಜದ್​ ಪಟೇಲ್​ ಅವರನ್ನು ಸನ್ಮಾನಿಸಲಾಯಿತು. ಮಸೀದಿಯ ಪೇಶ್​ ಇಮಾಮ್​ ಮೌಲಾನ ಸಿರಾಜುದ್ದೀನ್​ ರಶಾದಿ, ಆಡಳಿತ ಮಂಡಳಿ ಸಂಚಾಲಕ ಬಹದ್ದೂರ್​ ಖಾನ್​, ಶಫೀಕ್​ ಖಾನ್​, ಫಾರೂಕ್​ ಅಹಮದ್​ ಖಾನ್​, ತೌಸ್​ೀ ಖಾನ್​, ಗೌಸಸಾಬ್​ ಸರ್ದಾರ, ಬಶೀರ್​ ಅಹಮದ್​ ಇತರರಿದ್ದರು.