ಬಾಲಕಿ ವೇಷದಲ್ಲಿದ್ದ ಬಾಲಕ 
ಕೊಪ್ಪಳ

ಬಾಲಕಿ ವೇಷದಲ್ಲಿದ್ದ ಪೋರನ ಕಂಡು ಬೆರಗಾದ ಅಧಿಕಾರಿಗಳು !

ಪ್ರಮುಖ ಮುಖ್ಯಾಂಶಗಳು

  • ಸಾಹಸ ಕ್ರೀಡೆಯಲ್ಲಿ ತೊಡಗಿದ್ದ ಪೋರ
ಕೊಪ್ಪಳ: ನಗರದ ಗವಿಮಠ ಜಾತ್ರೆಯಲ್ಲಿ ಸಾಹಸ ಕ್ರೀಡೆಯಲ್ಲಿ ತೊಡಗಿದ್ದ ಬಾಲಕಿಯನ್ನು ಮಕ್ಕಳ ರಕ್ಷಣಾಧಿಕಾರಿಗಳು ರಸಿದ್ದಾರೆ. ಬಾಲಕಿಯರ ಬಾಲ ಮಂದಿರಕ್ಕೆ ಬಿಡಲು ಹೋದಾಗ ಅದು ಬಾಲಕಿ ಅಲ್ಲ. ಬಾಲಕ ಎಂದು ತಿಳಿದು ಅಧಿಕಾರಿಗಳು ದಂಗಾಗಿದ್ದಾರೆ.
ಗವಿಮಠ ಜಾತ್ರಾ ಆವರಣದಲ್ಲಿ ಹಗ್ಗ ಕಟ್ಟಿ ಸಾಹಸ ಪ್ರದರ್ಶಿಸಲು ಮಧ್ಯಪ್ರದೇಶ ಮೂಲದ ಕುಟುಂಬವೊಂದು ಬಂದಿದೆ. ಹಗ್ಗದ ಮೇಲೆ ಕಟ್ಟಿಗೆ, ಪಾತ್ರೆ ಬಳಸಿ ಸಾಹಸ ಪ್ರದರ್ಶಿಸಿ ಜನರನ್ನು ರಂಜಿಸುತ್ತಿದೆ. ಆದರೆ, ಸಾಹಸಕ್ಕೆ 10 ವರ್ಷದ ಬಾಲಕಿಯನ್ನು ಬಳಕೆ ಮಾಡಿದ್ದಾರೆ. ಇದನ್ನು ಕಂಡು ಪ್ರಜ್ಞಾವಂತರು ಮಕ್ಕಳ ರಕ್ಷಣಾ ಟಕಕ್ಕೆ ಮಾಹಿತಿ ನೀಡಿದ್ದಾರೆ. ಮಕ್ಕಳ ಸಹಾಯವಾಣಿ 1098 ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ, ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಬಸವರಾಜ ಹಿರೇಗೌಡರ್​ ತಂಡ ಭೇಟಿ ನೀಡಿ ಬಾಲಕಿಯನ್ನು ವಶಕ್ಕೆ ಪಡೆದಿದ್ದಾರೆ. ಚಿಕ್ಕ ಮಕ್ಕಳನ್ನು ಬಳಕೆ ಮಾಡುವುದು ಕಾನೂನು ಬಾಹಿರವೆಂದು ತಿಳಿವಳಿಕೆ ನೀಡಿದ್ದಾರೆ.
ಬಾಲಕಿಯನ್ನು ರಸಿ ಬಾಲಕಿಯರ ಬಾಲ ಮಂದಿರಕ್ಕೆ ಬಿಟ್ಟಿದ್ದಾರೆ. ಅಲ್ಲಿನ ಅಧಿಕಾರಿಗಳು ವಿವರ ಪಡೆದು ಪರೀಸಿದಾಗ ಅದು ಬಾಲಕಿ ಅಲ್ಲ, ಬಾಲಕ ಎಂಬುದು ಗೊತ್ತಾಗಿ ಕ್ಷಣ ಕಾಲ ಅಧಿಕಾರಿಗಳೇ ದಂಗಾಗಿದ್ದಾರೆ. ಪೋರನಿಗೆ ಉದ್ದವಾಗಿ ಕೂದಲು ಬಿಡಿಸಿದ್ದು ಬಾಲಕಿ ಎಂಬಂತೆ ವೇಷ ತೊಡಿಸಲಾಗಿದೆ. ಇದರಿಂದ ಜನರು ಹೆಚ್ಚಿನ ಹಣ ನೀಡುತ್ತಾರೆ ಎಂದು ಹೀಗೆ ಮಾಡಿದ್ದರೆಂದು ತಿಳಿದು ಬಂದಿದೆ. ಸದ್ಯ ಒಡಿಶಾ ಸರ್ಕಾರಕ್ಕೆ ಮಾಹಿತಿ ಕಳಿಸಿದ್ದು ಮುಂದಿನ ಪಾಲನೆ ಮತ್ತು ಪೋಷಣೆಗೆ ಒಪ್ಪಿಸಲು ಕ್ರಮ ಕೈಗೊಂಡಿದ್ದಾರೆ.