ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಶಿವರಾಜ ತಂಗಡಗಿ ಮಾತನಾಡಿದರು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ, ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ ಇದ್ದರು.  
ಕೊಪ್ಪಳ

ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ

ರವೀಂದ್ರ ರಡ್ಡಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ
ಕೊಪ್ಪಳ : ಮುನಿರಾಬಾದ್​ನಲ್ಲಿ ಗುರುವಾರ ನಡೆಯಲಿರುವ ಟಿಬಿ ಡ್ಯಾಂ ಕ್ರಸ್ಟ್​ ಗೇಟ್​ ಲೋಕಾರ್ಪಣೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಲು ವಿವಿಧ ಸಮಿತಿ ರಚಿಸಲಾಗಿದೆ. ಅಧಿಕಾರಿಗಳು ನಿಮಗೆ ವಹಿಸಿದ ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸೂಚಿಸಿದರು.
ತಾಲೂಕಿನ ಮುನಿರಾಬಾದ್​ ಐಆರ್​ಬಿಯಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.
ಸಿಎಂ ಡಿ.ಕೆ.ಶಿವಕುಮಾರ್​, ಆಂಧ್ರ, ತೆಲಂಗಾಣ ರಾಜ್ಯ ಸಿಎಂ ಹಾಗೂ ಸಚಿವರುಗಳು ಆಗಮಿಸುವರು. ಗೇಟ್​ ಲೋಕಾರ್ಪಣೆ ಬಳಿಕ ಐಆರ್​ಬಿ ಸಭಾಂಗಣದಲ್ಲಿ ನವಲಿ ಸಮಾನಾಂತರ ಜಲಾಶಯ ಸೇರಿ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸುವರು. ಆ ಬಳಿಕ ಮುನಿರಾಬಾದ್​ ಸರ್ಕಾರಿ ಶಾಲಾ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಇರಲಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು. ನೀವೆಲ್ಲ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಅಗತ್ಯ ಸೌಲಭ್ಯ ಕಲ್ಪಿಸಿ. ಆಹಾರ ಪರೀೆಗೆ ಒಳಪಡಿಸಿ. ನಿಮಗೆ ನಿಯೋಜಿಸಿದ ಕೆಲಸ, ಸ್ಥಳದಲ್ಲಿರಬೇಕು. ಹೆಲಿಪ್ಯಾಡ್​ ನಿರ್ಮಾಣ ಸೇರಿ ನಿಮಗೆವಹಿಸಿದ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು ಎಂದು ತಾಕೀತು ಮಾಡಿದರು.
ಶಾಸಕ ಶಿವರಾಜ ತಂಗಡಗಿ ಮಾತನಾಡಿ, ಶಿಷ್ಠಾಚಾರ ಪಾಲನೆ ಕಡ್ಡಾಯ. ವೇದಿಕೆಯಲ್ಲಿ ಯಾರಿಗೂ ಅಗೌರವ ಆಗಕೂಡದು. ಸಮಾನಾಂತರ ಜಲಾಶಯ ಹಾಗೂ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ವಿವರವಾದ ಮಾಹಿತಿಯೊಂದಿಗೆ ಅಧಿಕಾರಿಗಳು ಸಭೆಗೆ ಬನ್ನಿ. ಗೇಟ್​ ಅಳವಡಿಸಿದ ತಜ್ಞರು, ಕಾರ್ಮಿಕರನ್ನು ಸನ್ಮಾನಿಸಲಾಗುವುದು ಎಂದರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ಮೂರು ರಾಜ್ಯಗಳ ಸಿಎಂಗಳು, ಡಿಸಿಎಂಗಳು, ಸಚಿವರು, ಕೇಂದ್ರ ಜಲಶಕ್ತಿ ಸಚಿವರು ಭಾಗವಹಿಸಲಿದ್ದು ಅಗತ್ಯ ಭದ್ರತೆ ಕಲ್ಪಿಸಿ ಎಂದು ತಿಳಿಸಿದರು.
ಎಂಪಿ ರಾಜಶೇಖರ ಹಿಟ್ನಾಳ ಮಾತನಾಡಿದರು. ಮಾಜಿ ಸಚಿವ ಅಮರೇಗೌಡ ಬಯ್ಯಾಪುರ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಕೆಎನ್​ಎನ್​ಎಲ್​ ಎಂಡಿ ರಾಜೇಶ ಅಮೀನಬಾವಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಎಎಸ್ಪಿ ಹೇಮಂತ್​ ಕುಮಾರ್​, ಮುನಿರಾಬಾದ್​ ನೀರಾವರಿ ಯೋಜನೆ ಸಿಇ ಎಸ್​.ಬಿ ಮಲ್ಲಿಗೆವಾಡ ಇತರರಿದ್ದರು.