ತಾವರಗೇರಾದಲ್ಲಿ ಕಂದಾಯ ಇಲಾಖೆಯಿಂದ ಬಂದ ಗಂಗಾಜಲಕ್ಕೆ ಪೂಜೆ ಸಲ್ಲಿಸಲಾಯಿತು. ಸಿಬ್ಬಂದಿ ಫಾರೂಲ್ ನಾಡಗೌಡ, ಆದಪ್ಪ ಪುರ, ದಾದೇಪೀರ, ಸಂಜೀವ ಛಲವಾದಿ, ಶಾಮಣ್ಣ, ದುರುಗಪ್ಪ ಇದ್ದರು.
- ಪುರ ಶ್ರೀ ಸೋಮನಾಥ ಕೋಟಿ ಶಿವಲಿಂಗಗಳ ಪೂಜೆ
- ತಾವರಗೇರಾ ಮಹಾಶಿವರಾತ್ರಿ ಗಂಗಾಜಲಕ್ಕೆ ಪೂಜೆ
ತಾವರಗೇರಾ: ಮಹಾಶಿವರಾತ್ರಿ ಪ್ರಯುಕ್ತ ಪಟ್ಟಣ ಮುಜರಾಯಿ ಇಲಾಖೆಯ ದೇವಸ್ಥಾನಗಳ ಶಿವಲಿಂಗಗಳಿಗೆ ಪೂಜೆಗಾಗಿ ಬಂದ ಗಂಗಾಜಲಕ್ಕೆ ಪೂಜೆ ಸಲ್ಲಿಸಲಾಯಿತು.
ಮುಜರಾಯಿ ಇಲಾಖೆಯ ಶ್ರೀ ವೈಜನಾಥ ದೇವಸ್ಥಾನದ ಶಿವಲಿಂಗಗಳ ಪೂಜೆಗೆ ಹಾಗೂ ಸಮೀಪದ ಪುರ ಶ್ರೀ ಸೋಮನಾಥ ದೇವಾಲಯದಲ್ಲಿರುವ ಕೋಟಿ ಶಿವಲಿಂಗಗಳ ಪೂಜೆಗೆ ಗಂಗಾಜಲ ಬಳಸಲಾಯಿತು.
ರಾಮಲಿಂಗೇಶ್ವರಗೆ ವಿಶೇಷ ಪೂಜೆ: ಮಹಾಶಿವರಾತ್ರಿ ನಿಮಿತ್ತ ಸಿದ್ದಾಪುರ ಸಮೀಪದ ಕೃಷ್ಣಾಪುರದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿತು. ವಿವಿಧ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಲಂಕಾರ ಸೇರಿ ಧಾರ್ಮಿಕ ಕೈಂಕರ್ಯಗಳು ನಡೆದವು.
ಗ್ರಾಮದ ಈಶ್ವರ ದೇವಸ್ಥಾನ, ಕಾಶಿ ವಿಶ್ವನಾಥ ಮಂದಿರ ಹಾಗೂ ವಿವಿಧ ದೇವಸ್ಥಾನಗಳಿಗೆ ಅಪಾರ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. ಸಂಜೆ ಗೃಹಿಣಿಯರು ಮಂಡಕ್ಕಿ, ಮಿರ್ಚಿ, ಸಿಹಿ ಖಾದ್ಯಗಳನ್ನು ತಯಾರಿಸಿ ಕಲ್ಲಂಗಡಿ, ಖರ್ಜುರ, ಕರಬೂಜ, ಚಿಕ್ಕು, ದ್ರಾಕ್ಷಿ ಸೇರಿ ನಾನಾ ಬಗೆಯ ಹಣ್ಣುಗಳನ್ನು ದೇವರಿಗೆ ನೈವೇದ್ಯ ಮಾಡುವ ಮೂಲಕ ಸಂಭ್ರಮದಿಂದ ಶಿವರಾತ್ರಿ ಹಬ್ಬವನ್ನು ಆಚರಿಸಿದರು.