ತಾವರಗೇರಾ ಠಾಣೆಯಲ್ಲಿ ಗಣೇಶ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಸಿಪಿಐ ವಿಶ್ವನಾಥ ಹಿರೇಗೌಡರ್ ಮಾತನಾಡಿದರು. ಪಿಎಸ್‌ಐ ಚಂದ್ರಪ್ಪ, ಜೆಸ್ಕಾಂ ಅಧಿಕಾರಿ ರಾಚಯ್ಯ ಹಿರೇಮಠ, ಪಪಂ ಆರೋಗ್ಯ ನಿರೀಕ್ಷಕ ಫಯಾಜ್ ಇತರರಿದ್ದರು. 
ಕೊಪ್ಪಳ

ಕಡ್ಡಾಯವಾಗಿ ಪರವಾನಗಿ ಪಡೆಯರಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ಸಿಪಿಐ ವಿಶ್ವನಾಥ ಹಿರೇಗೌಡರ್ ಹೇಳಿಕೆ
  • ತಾವರಗೇರಾ ಗಣೇಶೋತ್ಸವ ಶಾಂತಿ ಸಭೆ
ತಾವರಗೇರಾ: ಪಟ್ಟಣದ ವಿವಿಧೆಡೆ ಆಚರಿಸುವ ಗಣೇಶೋತ್ಸವದ ಅಂಗವಾಗಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ನಡೆಯಿತು. ಕುಷ್ಟಗಿ ಸಿಪಿಐ ವಿಶ್ವನಾಥ ಹಿರೇಗೌಡರ್ ಮಾತನಾಡಿ, ಪೊಲೀಸ್ ಇಲಾಖೆ ಸೂಚನೆಯಂತೆ ಈ ವರ್ಷ ಏಳು ದಿನ ಗಣೇಶ ಹಬ್ಬ ಆಚರಿಬೇಕು. ಪಟ್ಟಣ ಪಂಚಾಯಿತಿ ಮತ್ತು ಜೆಸ್ಕಾಂನಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ 23 ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸಂಘ-ಸಂಸ್ಥೆಗಳ ಮುಖ್ಯಸ್ಥರು ಜವಾಬ್ದಾರಿಯಿಂದ ಹಾಗೂ ಶಾಂತಿಯಿಂದ ಹಬ್ಬ ಆಚರಿಸಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಪಿಎಸ್‌ಐ ಚಂದ್ರಪ್ಪ, ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಜೆಸ್ಕಾಂ ಅಧಿಕಾರಿ ರಾಚಯ್ಯ ಹಿರೇಮಠ, ಪಪಂ ಆರೋಗ್ಯ ನಿರೀಕ್ಷಕ ಫಯಾಜ್, ವಕೀಲ ಪಿ.ರಮೇಶ್ ಮಾತನಾಡಿದರು. ಮುಖಂಡ ಮಂಜುನಾಥ ಜೂಲಕುಂಟಿ ಸೇರಿದಂತೆ ಸಂಘ-ಸಂಸ್ಥೆಗಳ ಮುಖ್ಯಸ್ಥರು ಇದ್ದರು.