ಬೆಟಗೇರಿ ಗ್ರಾಮದಲ್ಲಿ ಆಯೋಜಿಸಿದ್ದ ಪೋಷಣ ಪಕ್ವಾಡ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕಿ ಚಾಲನೆ ನೀಡಲಾಯಿತು. ವಲಯ ಮೇಲ್ವಿಚಾರಕಿ ಚಂದ್ರಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಯಶೋಧಾ, ಲಕ್ಷ್ಮೀ, ಹುಲಿಗೆಮ್ಮ, ಸುಮಿತ್ರಾ, ಶಾಂತಾ, ಲಲಿತಾ, ಅಕ್ಕಮ್ಮ, ಮಮತಾಜಬಿ, ಪ್ರೇಮಾ ಇತರರಿದ್ದರು. 
ಕೊಪ್ಪಳ

ಆರೋಗ್ಯಕರ ಜೀವನಕ್ಕೆ ಪೊಷಣ ಪಕ್ವಾಡ ಸಹಕಾರಿ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಪೌಷ್ಟಿಕ
  • ಆಹಾರ
  • ಪ್ರದರ್ಶನಗಳು
ಅಳವಂಡಿ: ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆ ಹಾಗೂ ಆರೋಗ್ಯಕರ ಜೀವನ ಶೈಲಿ ಉತ್ತೇಜಿಸುವುದು ಪೋಷಣ ಪಕ್ವಾಡ ಅಭಿಯಾನದ ಉದ್ದೇಶವಾಗಿದೆ ಎಂದು ಅಂಗನವಾಡಿ ವಲಯ ಮೇಲ್ವಿಚಾರಕಿ ಚಂದ್ರಮ್ಮ ತಿಳಿಸಿದರು.
ಸಮೀಪದ ಬೆಟಗೇರಿ ಗ್ರಾಮದಲ್ಲಿ ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಿಂದ ಆಯೋಜಿಸಿದ್ದ ಪೋಷಣ ಪಕ್ವಾಡ ಅಭಿಯಾನ ಉದ್ದೇಶಿಸಿ ಗುರುವಾರ ಮಾತನಾಡಿದರು.
ಮಗುವಿನ ಮೊದಲ 6ವರ್ಷಗಳಲ್ಲಿ ಮಿದುಳಿನ ಬೆಳವಣಿಗೆಯಾಗಲಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಅಂಗನವಾಡಿ ಮಟ್ಟದಲ್ಲಿ ಜಾಗೃತಿ ಜಾಥಾಗಳು, ಪೌಷ್ಟಿಕ ಆಹಾರ ಪ್ರದರ್ಶನಗಳು, ಆರೋಗ್ಯ ತಪಾಸಣಾ ಶಿಬಿರ ಇತರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.