ಗಂಗಾವತಿ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಎನ್ನೆಸ್ಸೆಸ್ ವಾರ್ಷಿಕ ಸೇವಾ ಶಿಬಿರವನ್ನು ನಿವೃತ್ತ ಪ್ರಾಚಾರ್ಯ ಡಾ.ಬಿ.ಸಿ. ಐಗೋಳ್ ಗುರುವಾರ ಉದ್ಘಾಟಿಸಿದರು. ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಇತರರಿದ್ದರು. 
ಕೊಪ್ಪಳ

ಬದುಕಿಗೆ ಸೇವಾ ಗುಣ ಮುಖ್ಯ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ಸೇವಾಮನೋಭಾವನೆ ಹೆಚ್ಚಿಸುವ ಎನ್ನೆಸ್ಸೆಸ್ ಚಟುವಟಿಕೆಗಳು ಜೀನ ಸಾರ್ಥಗೊಳಿಸುತ್ತಿದ್ದು, ಕಲಿಕೆಗೆ ಪೂರಕವಾಗಿವೆ ಎಂದು ಎಚ್‌ಆರ್‌ಎಸ್‌ಎಂ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಬಿ.ಸಿ.ಐಗೋಳ್ ಹೇಳಿದರು.
ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಎನ್ನೆಸ್ಸೆಸ್ ವಾರ್ಷಿಕ ಸೇವಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಸೇವಾ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬ ಉದ್ದೇಶದಿಂದ ಎನ್ನೆಸ್ಸೆಸ್ ಚಟುವಟಿಕೆಗಳು ಕಾಲೇಜುಗಳಲ್ಲಿ ಅರಂಭಿಸಿದ್ದು, ಜೀವನ ಸಾರ್ಥಕಗೊಳ್ಳಲಿದೆ ಎಂದರು.
ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ ಮಾತನಾಡಿ, ಶ್ರಮದಾನದ ಮೂಲಕ ಸಾಮಾಜಿಕ ಜವಾಬ್ದಾರಿ ಹೆಚ್ಚಿಸಿಕೊಳ್ಳಬೇಕಿದ್ದು, ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪ ಪ್ರಾಚಾರ್ಯ ಡಾ.ಕೆ.ಎಂ. ಬಸವರಾಜ, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಸುರೇಶಗೌಡ, ಡಾ. ಬಸಮ್ಮ ಶಿಗ್ಗಾಂವಿ, ಉಪನ್ಯಾಸಕರಾದ ಪ್ರೊ.ಜಿ. ಬಸವರಾಜ್, ಡಾ. ಶಾರದಾ ಪಾಟೀಲ್, ಡಾ. ಜರೀನಾ, ಶಿವಮ್ಮ, ಶಾಂತಮ್ಮ, ವಿಜಯಲಕ್ಷ್ಮೀ, ರಶ್ಮಿ, ಹನುಮಂತ, ಮೆಹಕ್ ಸಾನಿಯಾ, ಶಂಕರನಾಗ್, ಸತೀಶ, ನಿಮಿಷಾ ಇತರರಿದ್ದರು.