ಅಳವಂಡಿಯಲ್ಲಿ ನಡೆದ ನರೇಗಾ ಕ್ರಿಯಾಯೋಜನೆ ತಯಾರಿ ಕುರಿತು ವಾರ್ಡ್ ಸಭೆಯಲ್ಲಿ ಪಿಡಿಒ ಗೀತಾಕುಮಾರಿ ಮಾತನಾಡಿದರು. ಪ್ರಮುಖರಾದ ಕೊಟ್ರಪ್ಪ, ತೋಟಯ್ಯ, ಮಲ್ಲಪ್ಪ, ಹನುಮಂತ, ರಾಘು, ದಾವಲ್ ಸಾಬ್, ಗೀತಾ ಇತರರಿದ್ದರು.
- ನರೇಗಾ ಯೋಜನೆ
- ಕಾಮಗಾರಿ
- ಬೇಡಿಕೆ ಸಲ್ಲಿಸಿ
ಕೂಲಿಕಾರರಿಗೆ ನರೇಗಾ ವರದಾನ
ಅಳವಂಡಿ: ನರೇಗಾ ಯೋಜನೆಯ ಕ್ರಿಯಾಯೋಜನೆ ತಯಾರಿಕೆಗೆ ಕಾಮಗಾರಿ ಬೇಡಿಕೆ ಸಲ್ಲಿಸಿ ಎಂದು ಪಿಡಿಒ ಗೀತಾಕುಮಾರಿ ಹೇಳಿದರು.
ಗ್ರಾಮದಲ್ಲಿ ಗ್ರಾಪಂನಿಂದ 2026-27ನೇ ಸಾಲಿನ ನರೇಗಾ ಯೋಜನೆಯ ಕಾರ್ಮಿಕರ ಆಯ-ವ್ಯಯ ತಯಾರಿಕೆ ಕುರಿತು ಸೋಮವಾರ ಹಮ್ಮಿಕೊಂಡಿದ್ದ ವಾರ್ಡ್ ಸಭೆಯಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ರೈತರು ಹಾಗೂ ಕೂಲಿಕಾರರಿಗೆ ನರೇಗಾ ವರದಾನವಾಗಿದೆ. ಇದು ವಾರ್ಷಿಕ 100 ದಿನಗಳ ಉದ್ಯೋಗ ಗ್ಯಾರಂಟಿ ನೀಡಲಿದೆ. ಗ್ರಾಪಂ ಹಾಗೂ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ, ರಾಷ್ಟ್ರೀಯ ತೋಟಗಾರಿಕೆ ಇಲಾಖೆಗಳಿಂದ ನರೇಗಾದಡಿ ಕಾಮಗಾರಿ ಕೈಗೊಳ್ಳಲು ಅವಕಾಶ ಇದೆ.
ಗ್ರಾಮದ ಪ್ರತಿ ವಾರ್ಡ್‌ಗಳಲ್ಲಿ ಸಭೆ ನಡೆಸುವ ಮೂಲಕ ಕಾಮಗಾರಿ ಬೇಡಿಕೆ ಪಡೆಯಲಾಗುತ್ತಿದೆ. ರೈತರು ಯಾವ ಕಾಮಗಾರಿ ಅವಶ್ಯಕತೆ ಇದೆ ಎಂಬುದನ್ನು ಗಮನಿಸಿ ಕಾಮಗಾರಿ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ವೈಯಕ್ತಿಕ ಕಾಮಗಾರಿ ಜತೆ ಜಾನುವಾರುಗಳ ಶೆಡ್, ಮೇಕೆ ಶೆಡ್, ಕೃಷಿಹೊಂಡ, ಬದು ನಿರ್ಮಾಣ, ಕೊಳಿ ಶೆಡ್ ನಿರ್ಮಿಸಬಹುದು ಎಂದರು.
ಪ್ರಭಾರ ಪಿಡಿಒ ಕೊಟ್ರಪ್ಪ ಅಂಗಡಿ, ಜೆಇ ಮಲ್ಲಿಕಾರ್ಜುನ, ಪ್ರಮುಖರಾದ ಮಲ್ಲಪ್ಪ ಬೆಣಕಲ್, ತೋಟಯ್ಯ ಅರಲೆಳೆಮಠ, ಹನುಮಂತ ಮೊರನಾಳ, ದಾವಲ್ ಸಾಬ್, ರಾಘು ಇಮ್ಮಡಿ, ಮಲ್ಲಪ್ಪ, ಶಕೀಲ, ಇಂದಿರಾ, ಕಾಳಮ್ಮ, ಗೀತಾ, ಪ್ರತಿಭಾ, ಸಲೀಮಾ, ರತ್ನವ್ವ, ಭವಾನಿ ಇತರರಿದ್ದರು.