ವಡ್ಡರಹಟ್ಟಿ ಕ್ಯಾಂಪ್ ಸಹಿಪ್ರಾ ಶಾಲೆ ವಾರ್ಷಿಕೋತ್ಸವದಲ್ಲಿ ಶಾಲಾಭಿವೃದ್ಧಿಗೆ ನೆರವಾದ ಉದ್ಯಮಿಗಳಾದ ಮುರಳಿ ಕೃಷ್ಣ ಸಂಕುರಾತ್ರಿ, ಗೋಪಾಲಕೃಷ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುಧಾಕರ ಮತ್ತು ಟೈಪಿಸ್ಟ್ ವೆಂಕಟೇಶರನ್ನು ಸನ್ಮಾನಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ ನಡುಲಮನಿ, ಮುಖ್ಯಶಿಕ್ಷಕ ಚಾಂದ್‌ಪಾಷಾ ಇತರರಿದ್ದರು.
- ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ ನಡುಲಮನಿ
- ಗಂಗಾವತಿ ವಡ್ಡರಹಟ್ಟಿ ಕ್ಯಾಂಪ್ ವಾರ್ಷಿಕೋತ್ಸವ
ಗಂಗಾವತಿ: ವಡ್ಡರಹಟ್ಟಿ ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ವಾರ್ಷಿಕೋತ್ಸವ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಎಸ್‌ಡಿಎಂಸಿ ಅಧ್ಯಕ್ಷ ದುರುಗಪ್ಪ ನಡುಲಮನಿ ಮಾತನಾಡಿ, ಅಕ್ಷರ ಕಲಿಸಿದ ಶಿಕ್ಷಕರು ಮತ್ತು ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಶಾಲಾಭಿವೃದ್ಧಿಗೆ ದೇಣಿಗೆ ನೀಡಿದ ಉದ್ಯಮಿಗಳಾದ ಮುರಳಿ ಕೃಷ್ಣ ಸಂಕುರಾತ್ರಿ, ಗೋಪಾಲಕೃಷ್ಣ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸುಧಾಕರ ಮತ್ತು ಟೈಪಿಸ್ಟ್ ವೆಂಕಟೇಶ ಅವರನ್ನು ಸನ್ಮಾನಿಸಲಾಯಿತು. ವರ್ಗಾವಣೆಗೊಂಡ ಶಿಕ್ಷಕಿ ಶಶಿಕಲಾ ಚೌಹಾಣ ಅವರು 10 ಸಾವಿರ ರೂ. ಮೌಲ್ಯದ ಕ್ಲಾಸ್ ರೂಂ ಬೆಲ್ ದೇಣಿಗೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಬಿ.ಆರ್. ಜೋಶಿ, ಸಿಆರ್‌ಪಿ ವಿಜಯಕುಮಾರ, ಪ್ರಮುಖರಾದ ಮುದುಕಪ್ಪ ಗಡ್ಡಿ, ರಾಮಣ್ಣ ಬಳ್ಳಾರಿ, ವೆಂಕಟೇಶ ನಾಯಕ, ಕೃಷ್ಣಾ, ಸುರೇಶ, ಪೀರ್ ಮೊಹ್ಮದ್, ಹುಸೇನಪ್ಪ ಬಂಡೆ, ಮುಖ್ಯಶಿಕ್ಷಕ ಚಾಂದಾಪಾಷಾ, ಶಿಕ್ಷಕರಾದ ಪ್ರಿಯದರ್ಶಿನಿ, ನಂದಿನಿ, ಖಾಸಿಂಸಾಬ್, ನಾಗಯ್ಯಸ್ವಾಮಿ, ರಾಜಾಸಾಬ್, ಮೈಮುದಾ ಬೇಗಂ ಸೇರಿದಂತೆ ಇತರರು ಉಪಸ್ಥಿತರಿದ್ದರು.