ಮುಲ್ಲಾಪುರ ಗ್ರಾಮದಲ್ಲಿ ಮೊಬೈಲ್ಗೆ ನೆಟ್‌ವರ್ಕ್ ಸಿಗದಿದ್ದಕ್ಕೆ ಮನೆ ಛಾವಣಿ ಮೇಲೆ ನಿಂತು ಮಾತನಾಡುತ್ತಿರುವುದು. 
ಕೊಪ್ಪಳ

ಮುರ್ಲಾಪುರ-ಘಟ್ಟಿರಡ್ಡಿಹಾಳದಲ್ಲಿ ಸಿಗ್ನಲ್ ಸಮಸ್ಯೆ

ಪ್ರಮುಖ ಮುಖ್ಯಾಂಶಗಳು

  • ಮೊಬೈಲ್‌ನಲ್ಲಿ ಮಾತನಾಡಲು ಮನೆ ಛಾವಣಿ ಏರುವುದು ಅನಿವಾರ್ಯ
ಅಳವಂಡಿ: ಪ್ರಮುಖ ಸಂವಹನ ಸಾಧನವಾಗಿರುವ ಮೊಬೈಲ್‌ಗೆ ನೆಟ್‌ವರ್ಕ್ ಮೂಲಾಧಾರವಾಗಿದ್ದು, ಇದರದ್ದೇ ಸಮಸ್ಯೆಯಿಂದ ಸಮೀಪದ ಮುರ್ಲಾಪುರ ಹಾಗೂ ಘಟ್ಟಿರಡ್ಡಿಹಾಳ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.
ಎರಡೂ ಗ್ರಾಮ ಸುತ್ತಲಿನ ಐದು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಮೊಬೈಲ್ ನೆಟ್‌ವರ್ಕ್ ದೊರೆಯದಿರುವುದರಿಂದ ಗ್ರಾಮಸ್ಥರು ಮನೆಯ ಛಾವಣಿ ಇಲ್ಲವೇ ಊರಿನ ಹೊರಗಡೆ ಬಂದು ಮಾತನಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ವಾಟ್ಸಾೃಪ್, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಬಳಕೆ ಈ ಊರಿನವರಿಗೆ ದೂರದ ಮಾತಾಗಿದ್ದು, ಬಳಕೆ ಅವಶ್ಯ ಇದ್ದವರು ನೆಟ್‌ವರ್ಕ್ ಹುಡಿಕಿಕೊಂಡು ಊರಿನ ಹೊರಗೆ ಬರುವುದು ಅನಿವಾರ್ಯವಾಗಿದೆ.
ದೇಶದೆಲ್ಲೆಡೆ 4ಜಿ, 5ಜಿ ಬಂದರೂ ನಮ್ಮ ಗ್ರಾಮದಲ್ಲಿ 2ಜಿ ನೆಟ್‌ವರ್ಕ್ ಸಹ ಸಿಗದಿರುವುದು ಬಹುದೊಡ್ಡ ಸಮಸ್ಯೆಯಾಗಿದೆ. ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಪರಿಹಾರ ಕ್ರಮ ಕೈಗೊಳ್ಳಬೇಕೆಂಬುದು ಮುರ್ಲಾಪುರ ಹಾಗೂ ಘಟ್ಟಿರಡ್ಡಿಹಾಳದ ಸುರೇಶ ಚನ್ನಳ್ಳಿ, ಸಿದ್ದಪ್ಪ ಡಂಬಳ ಇತರರ ಅಂಬೋಣವಾಗಿದೆ.