ಕೊಪ್ಪಳದ ಗವಿಮಠ ಕಾಲೇಜು ಪರೀಕ್ಷಾ ಕೇಂದ್ರ ಪ್ರವೇಶ ಮುನ್ನ ಅಭ್ಯರ್ಥಿಯೊಬ್ಬರು ಮೂಗುತಿ ತೆಗೆದಿದ್ದು ಕಂಡುಬಂತು.
- ಕೇಂದ್ರದ ಸುತ್ತಲೂ ಬಂದೋಬಸ್ತ್
ಕೊಪ್ಪಳ : ನಗರದ 11 ವಿವಿಧ ಕೇಂದ್ರಗಳಲ್ಲಿ ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6.15ವರೆಗೆ ನೀಟ್ ಪರೀೆ ನಡೆದವು.
ಕಳೆದ ಪರೀಕ್ಷೆ ಯಲ್ಲಿ ಅಕ್ರಮ ನಡೆದ ಕಾರಣ ಈ ಬಾರಿ ಬಿಗಿ ಭದ್ರತೆಯಲ್ಲಿ ಪರೀಕ್ಷೆ ನಡೆಸಲಾಯಿತು. ಮಧ್ಯಾಹ್ನ 1.30 ಗಂಟೆಯೊಳಗೆ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದೊಳಗೆ ಇರುವಂತೆ ಸೂಚಿಸಲಾಗಿತ್ತು. ಅದರಂತೆ ಬೆಳಗ್ಗೆ 11 ಗಂಟೆಗೆ ಕೆಲ ಪಾಲಕರು ತಮ್ಮ ಮಕ್ಕಳೊಡನೆ ಆಗಮಿಸಿದ್ದು ಕಂಡುಬಂತು. ಗೇಟ್ ಹೊರಭಾಗದಲ್ಲಿ ಕಾಯುತ್ತಾ ನಿಂತಿದ್ದರು. ಪರೀಾ ಕೇಂದ್ರದ ಸಿಬ್ಬಂದಿ ಬಿಟ್ಟರೆ ಬೇರೆ ಯಾರಿಗೂ ಕೇಂದ್ರದ ಒಳಗೆ ಪ್ರವೇಶ ನೀಡಲಿಲ್ಲ.
ವಿವಿಧ ಬ್ಯಾಂಕ್ಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇರಿಸಲಾಗಿತ್ತು. ಸರಿಯಾದ ಸಮಯಕ್ಕೆ ಮೇಲಧಿಕಾರಿಗಳ ಸೂಚನೆ ನೀಡಿದ ಬ್ಯಾಂಕಿನಿಂದ ಪ್ರಶ್ನೆ ಪತ್ರಿಕೆಗಳನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಕೇಂದ್ರಗಳಿಗೆ ತಲುಪಿಸಲಾಯಿತು. ಮೊದಲೇ ಹೊರಡಿಸಿದ ಮಾರ್ಗಸೂಚಿ ಪಾಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಯಿತು. ಕೆಲವರು ಪ್ರವೇಶ ಪತ್ರದಲ್ಲಿನ ಫೋಟೋ ಹಾಗೂ ತಾವು ತಂದ ಫೋಟೋ ದಲ್ಲಿ ವ್ಯತ್ಯಾಸ ಆದ ಕಾರಣ ವಾಪಸ್ ತೆರಳುವಂತಾಯಿತು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಬಾಲಕರ ಸರ್ಕಾರಿ ಪಿಯು ಕಾಲೇಜು ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು. ಮಕ್ಕಳು ಹಾಗೂ ಪರೀಾ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ನಿಯಮಾನುಸಾರ ಎಕ್ಸಾಂ ನಡೆಸುವಂತೆ ನಿರ್ದೇಶಿಸಿದರು.
ಎಲ್ಲೆಲ್ಲಿ ಪರೀಕ್ಷೆ?
ಗವಿಸಿದ್ದೇಶ್ವರ ಪದವಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಟಣಕನಕಲ್ ಆದರ್ಶ ವಿದ್ಯಾಲಯ, ತಳಕಲ್ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ದದೇಗಲ್ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಭಾಗ್ಯನಗರ ಸರ್ಕಾರಿ ಪಿಯು ಕಾಲೇಜು, ಕೊಪ್ಪಳದ ಬಾಲಕರ ಸರ್ಕಾರಿ ಪಿಯು ಕಾಲೇಜು, ಕಾಳಿದಾಸ ಪ್ರೌಢಶಾಲೆ, ಪಿಎಂಶ್ರೀ ಕೇಂದ್ರೀಯ ವಿದ್ಯಾಲಯ ಕೇಂದ್ರದಲ್ಲಿ ಪರೀಕ್ಷೆ ನಡೆದವು.
ತಡವಾಗಿ ಬಂದು ಕಣ್ಣೀರಿಟ್ಟರು
ಕಟ್ಟುನಿಟ್ಟಾಗಿ ಪರೀೆ ಆಯೋಜಿಸಿದ್ದು ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಹೀಗಿದ್ದರೂ ಕೆಲವರು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಪರೀಕ್ಷೆ ಬರೆಯಲು ಕೇಂದ್ರದ ಸಿಬ್ಬಂದಿ ಅವಕಾಶ ಮಾಡಿಕೊಡಲಿಲ್ಲ. ಗಂಗಾವತಿಯ ಬೀಬಿ ಫಾತಿಮಾ ಎಂಬ ಅಭ್ಯರ್ಥಿ 1.54 ಗಂಟೆಗೆ ಬಂದರೂ ಪರೀೆ ಬರೆಯಲು ಅವಕಾಶ ಸಿಗದೆ ಕಣ್ಣೀರು ಹಾಕಿದಳು. ಕೆಲ ಯುವಕರು 5-10 ನಿಮಿಷ ತಡವಾಗಿ ಬಂದು ಅಂಗಲಾಚಿದರು ಅವಕಾಶ ಇಲ್ಲದ ಕಾರಣ ಕಣ್ಣೀರಾದರು. ಗವಿಮಠ ಕಾಲೇಜು ಕೇಂದ್ರದಲ್ಲಿ ಬಂದ ಮಹಿಳಾ ಅಭ್ಯರ್ಥಿಗಳು ಬಂಗಾರದ ಆಭರಣ, ಮೂಗುತಿ ಬಿಚ್ಚಿ ಪಾಲಕರ ಕೈಯಲ್ಲಿ ಕೊಟ್ಟು ಕೇಂದ್ರ ಪ್ರವೇಶಿಸಿದ್ದು ಕಂಡುಬಂತು.
"
ಕೊಪ್ಪಳ ಜಿಲ್ಲೆಯ 11 ಕೇಂದ್ರಗಳಲ್ಲಿ 3700ಅಭ್ಯರ್ಥಿಗಳು ನೀಟ್ ಪರೀೆಗೆ ನೋಂದಾಯಿಸಿಕೊಂಡು ಪರೀಕ್ಷೆ ಬರೆದಿದ್ದಾರೆ. ಎನ್ಟಿಎಯಿಂದ ನನ್ನ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಮಿತಿ ಇದ್ದು ಮೇಲಿನಿಂದ ಬಂದ ಎಲ್ಲ ನಿರ್ದೇಶನ ಪಾಲಿಸಲಾಗಿದೆ. ಕೇಂದ್ರಗಳಿಗೆ ಅಗತ್ಯ ಭದ್ರತೆ ಕಲ್ಪಿಸಿ ನಿಯಮಾನುಸಾರ ಪರೀೆ ನಡೆಸಲಾಗಿದೆ.
— ಡಾ.ಸುರೇಶ ಬಿ.ಇಟ್ನಾಳ. ಕೊಪ್ಪಳ ಡಿಸಿ.