ಕೊಪ್ಪಳದ ಗವಿಮಠಕ್ಕೆ ಶುಕ್ರವಾರ ಭೇಟಿ ನೀಡಿದ ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ ಗವಿಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೆಸುಗೂರು, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​ ಇದ್ದರು.  
ಕೊಪ್ಪಳ

ಗವಿಮಠಕ್ಕೆ ಭೇಟಿ ನೀಡಿದ ನಾರಾಯಣಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಗವಿಶ್ರೀಗಳೊಂದಿಗೆ ಮಾತುಕತೆ
ಕೊಪ್ಪಳ: ವಿಧಾನ ಪರಿಷತ್​ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಶುಕ್ರವಾರ ನಗರದ ಗವಿಮಠಕ್ಕೆ ಭೇಟಿ ನೀಡಿ ಗವಿಶ್ರೀಗಳ ಆಶೀರ್ವಾದ ಪಡೆದರು.
ಕರ್ತೃ ಗದ್ದುಗೆ ದರ್ಶನ ಪಡೆದು ಕೆಲ ಕಾಲ ಅಭಿನವ ಗವಿಶ್ರೀಗಳೊಂದಿಗೆ ಮಾತುಕತೆ ನಡೆಸಿದರು. ಮಠ, ಜಾತ್ರೆ, ದಾಸೋಹ ಬಗ್ಗೆ ಮಾಹಿತಿ ಪಡೆದರು. ಶ್ರೀಗಳು ಸನ್ಮಾನಿಸಿದರು. ಬಳಿಕ ಮಹಾದಾಸೋಹ ಭವನದಲ್ಲಿ ಓಡಾಡಿದ ನಾರಾಯಣಸ್ವಾಮಿ, ಅಡುಗೆ ಮಾಡುವವರ ಜತೆ ಕೈ ಜೋಡಿಸಿದರು. ಕೆಲ ಕಾಲ ಪ್ರಸಾದ ವಿತರಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೆಸುಗೂರು, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಚಂದ್ರಶೇಖರ ಹಲಗೇರಿ ಇತರರಿದ್ದರು.