ಕೊಪ್ಪಳದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕೊಪ್ಪಳ-&ಭಾಗ್ಯನಗರ ಬಂದ್​ ಪೂರ್ವಭಾವಿ ಸಭೆಯಲಿ ನೂರಾರು ನೂರಾರು ಮುಖಂಡರು, ಸಾಹಿತಿಗಳು ಹಾಗೂ ಪರಿಸರ ಪ್ರೇಮಿಗಳು ಪಾಲ್ಗೊಂಡಿದ್ದರು. 
ಕೊಪ್ಪಳ

ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲ

ಪ್ರಮುಖ ಮುಖ್ಯಾಂಶಗಳು

  • ಅಮರೇಗೌಡ ಬಯ್ಯಾಪೂರ
  • ಸರ್ಕಾರ ಜನಪರ ಕೆಲಸ ಮಾಡಲಿ
ಕೊಪ್ಪಳ : ಸರ್ಕಾರ ಯಾವಾಗಲೂ ಜನರ ಹಿತದೃಷ್ಟಿಯಿಂದಲೇ ಕೆಲಸ ಮಾಡಬೇಕು. ಪರಿಸರ ಮಾಲಿನ್ಯ ಮತ್ತು ಜನರ ಆರೋಗ್ಯಕ್ಕಾಗಿ ನಡೆಯುತ್ತಿರುವ ಈ ಹೋರಾಟ ನ್ಯಾಯಯುತವಾಗಿದೆ ಎಂದು ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್​ ಬಯ್ಯಾಪೂರ ಹೇಳಿದರು.
ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಕೊಪ್ಪಳ-&ಭಾಗ್ಯನಗರ ಬಂದ್​ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಳೆದ ನೂರಾರು ದಿನಗಳಿಂದ ರೈತರು ಮತ್ತು ಸಾರ್ವಜನಿಕರು ನಡೆಸುತ್ತಿರುವ ಹೋರಾಟವನ್ನು ನಾನು ಗಮನಿಸುತ್ತಿದ್ದೇನೆ. ಈ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು, ಆದಷ್ಟು ಶೀಘ್ರವಾಗಿ ವೈಜ್ಞಾನಿಕ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕಾಂಗ್ರೆಸ್​ ಜಿಲ್ಲಾಧ್ಯಕ್ಷನಾಗಿ ನನ್ನ ಲೆಟರ್​ ಹೆಡ್​ ಮೂಲಕವೂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ. ಸ್ಥಳಿಯ ಶಾಸಕರೊಂದಿಗೂ ಚರ್ಚಿಸಿ ಈ ಚಳವಳಿಗೆ ಪೂರಕವಾಗಿ ಸ್ಪಂದಿಸಲು ಕೋರುತ್ತೇನೆ. ಬಂದ್​ ಹೋರಾಟದ ಯಶಸ್ಸಿಗಾಗಿ ಮತ್ತು ಖರ್ಚು-ವೆಚ್ಚಗಳಿಗಾಗಿ ವೈಯಕ್ತಿಕವಾಗಿ 2 ಲಕ್ಷ ರೂ. ಧನಸಹಾಯವನ್ನು ಸ್ಥಳದಲ್ಲೇ ಘೋಷಿಸಿದರು.
ಸಭೆಯ ನಂತರ ರೈತರ ಒತ್ತಾಯದ ಮೇರೆಗೆ ಹಿರೇಬಗನಾಳು ಗ್ರಾಮಕ್ಕೆ ಭೇಟಿ ನೀಡಿ. ಕಾರ್ಖಾನೆಗಳಿಂದ ಆಗುತ್ತಿರುವ ಮಾಲಿನ್ಯದ ಬಗ್ಗೆ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಬಲ್ಡೋಟ ಸೇರಿದಂತೆ ಯಾವುದೇ ಕಾರ್ಖಾನೆಗಳ ವಿಸ್ತರಣೆ ಮಾಡಬಾರದು. ಬಸಾಪುರ ಕೆರೆಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಬೇಕು. ತುಂಗಭದ್ರಾ ನದಿಯನ್ನು ವಿಷಗೊಳಿಸುತ್ತಿರುವ ಕಾರ್ಖಾನೆಗಳನ್ನು ಮುಚ್ಚಬೇಕು. ಐ.ಐ.ಎಸ್​.ಸಿ ಅಥವಾ ಏಮ್ಸ್​ ಸಂಸ್ಥೆಗಳ ಮೂಲಕ ಆರೋಗ್ಯ ಮತ್ತು ಪರಿಸರದ ಮೇಲೆ ಉಂಟಾಗಿರುವ ಪರಿಣಾಮಗಳ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಬೇಕು ಎಂಬ ಹಲವಾರು ಬೇಡಿಕೆಗಳಿಗಾಗಿ ಸಭೆಯಲ್ಲಿ ಫೆ. 24ರಂದು ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಕೊಪ್ಪಳ ಮತ್ತು ಭಾಗ್ಯನಗರ ಸಂಪೂರ್ಣ ಬಂದ್​ ಆಚರಿಸಲು ನಿರ್ಧರಿಸಲಾಯಿತು.

ಬಂದ್​ ಗೆ ಸಹಕರಿಸಲು ಮನವಿ

ಈ ಬಂದ್​ ಹೋರಾಟವನ್ನು ಪಕ್ಷಾತಿತವಾಗಿ ಜಿಲ್ಲೆಯ ಎಲ್ಲಾ ರಾಜಕೀಯ ಮುಖಂಡರು, ಧಾರ್ಮಿಕ ಮುಖ್ಯಸ್ಥರು, ವಿವಿಧ ಸಂಘ-ಸಂಸ್ಥೆಗಳು, ಸ್ವಯಂ ಪ್ರೇರಣೆಯಿಂದ ಈ ಹೋರಾಟವನ್ನು ಬೆಂಬಲಿಸಿ, ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಲಾಯಿತು.
ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು. ಹಿರಿಯ ಸಾಹಿತಿ ಎಚ್​.ಎಸ್​.ಪಾಟೀಲ್​, ಪ್ರಕಾಶ ಡಿ.ಎಂ, ದಾನಪ್ಪ ಕವಲೂರು, ಮಲ್ಲನಗೌಡ ಕೊನಗೌಡ್ರು, ಮಲ್ಲಿಕಾರ್ಜುನ ಬಿ. ಗೋನಾಳ, ಈಶ್ವರಪ್ಪ ಕೊರ್ಲಹಳ್ಳಿ, ಎ.ವಿ. ಕಣವಿ, ಪಿರಾ ಹುಸೇನ್​, ಟಿ. ರತ್ನಾಕರ, ವಿದ್ಯಾ ನಲವಾಡ, ಸೇರಿದಂತೆ ಜಿಲ್ಲೆಯ ನೂರಾರು ಮುಖಂಡರು, ಸಾಹಿತಿಗಳು ಹಾಗೂ ಪರಿಸರ ಪ್ರೇಮಿಗಳು ಇತರರಿದ್ದರು.