ಕೊಪ್ಪಳ ತಾಲೂಕಿನ ಭಾಗ್ಯನಗರದ ಷಡ್ಜ ಸಂಗೀತ ಸಭಾ ಭವನದಲ್ಲಿ ಆಯೋಜಿಸಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮರೇಗೌಡರ ಅವರ ವಚನ ಸಂಗೀತ ಪ್ರೇಕ್ಷಕರ ಮನಸೂರೆಗೊಂಡಿತು. 
ಕೊಪ್ಪಳ

ಸಂಗೀತದಿಂದ ಶಿವನ ಸಾಾತ್ಕಾರ ಸಾಧ್ಯ

ಪ್ರಮುಖ ಮುಖ್ಯಾಂಶಗಳು

  • ಬಿ.ಪಿ. ಮರೇಗೌಡರ ಪ್ರತಿಪಾದನೆ
  • ಸಂಗೀತ ರಸ ಸಂಜೆ
ಕೊಪ್ಪಳ : ಮಾತೆಂಬುದು ಜ್ಯೋತಿರ್ಲಿಂಗ, ಸ್ವರವೆಂಬುದು ಪರತತ್ವ ಎಂಬ ಅಲ್ಲಮಪ್ರಭುಗಳ ವಚನದಂತೆ, ಪರಮಾತ್ಮನ ಸನ್ನಿಧಿಯನ್ನು ನೇರವಾಗಿ ಸೇರಲು ಸಂಗೀತಕ್ಕಿಂತ ಮಿಗಿಲಾದ ಮಾರ್ಗವಿಲ್ಲ ಎಂದು ಹಿರಿಯ ಕಲಾವಿದ ಬಿ.ಪಿ. ಮರೇಗೌಡರ ಅವರು ಮಾರ್ಮಿಕವಾಗಿ ನುಡಿದರು.
ತಾಲೂಕಿನ ಭಾಗ್ಯನಗರದ ಷಡ್ಜ ಸಂಗೀತ ಸಭಾ ಭವನದಲ್ಲಿ ಆಯೋಜಿಸಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ಸಾಂಸತಿಕ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅನೇಕ ಖಾಸಗಿ ಸಂಸ್ಥೆಗಳು ಶ್ರಮಿಸುತ್ತಿವೆ. ಇಂತಹ ಸಂಸ್ಥೆಗಳಿಗೆ ಸರ್ಕಾರ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯು ಸೂಕ್ತ ಬೆಂಬಲ ಮತ್ತು ಪ್ರೋತ್ಸಾಹ ನೀಡಿದರೆ, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ವಿಶಿಷ ಮತ್ತು ಜನಪರ ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮರೇಗೌಡರ ಅವರ ವಚನ ಸಂಗೀತ ಪ್ರೇಕ್ಷಕರ ಮನಸೂರೆಗೊಂಡಿತು. ಅಲ್ಲದೆ ಅಭಿಷೇಕ ಚಿತ್ರಗಾರ ಮತ್ತು ಕಿಶನ ಪೂಜಾರರ ಬಾನ್ಸೂರಿ ವಾದನ, ಕೀರ್ತಿ ಮೇಟಿ ಹಾಗೂ ಆರತಿ ಮೇಟಿಯವರ ಸಮೂಹ ಗಾಯನ ಮತ್ತು ವಿಜಯಲಕ್ಷಿ$್ಮ ಹಂಚಿನಾಳರ ಸುಗಮ ಸಂಗೀತ ಕಾರ್ಯಕ್ರಮಕ್ಕೆ ಮೆರುಗು ನೀಡಿದವು.
ರಾಮಚಂದ್ರಪ್ಪ ಉಪ್ಪಾರ, ಜಡೆಪ್ಪ ಎಮ್ಮಿಗನೂರು ಹಾಗೂ ರಾಮಚಂದ್ರಪ್ಪ ಉಪ್ಪಾರ, ಮಾರುತಿ ದೊಡ್ಡಮನಿ, ಅನಂತ ಪಾವಣಸ್ಕರ, ನಾಗರಾಜ ಶ್ಯಾವಿ, ಸಂಜನ ಬೆಲ್ಲದ ಇತರರಿದ್ದರು.