ಕೊಪ್ಪಳ ತಾಲೂಕಿನ ಮುನಿರಾಬಾದ್​ನಲ್ಲಿ ವೇದಿಕೆ ಅಂತಿಮ ಸಿದ್ಧತೆ ನಡೆದಿರುವುದು.  
ಕೊಪ್ಪಳ

ತುಂಗಾಡಂಭರಕ್ಕೆ ಸಜ್ಜುಗೊಂಡ ಮುನಿರಾಬಾದ್​

ಪ್ರಮುಖ ಮುಖ್ಯಾಂಶಗಳು

  • ಸಾವಿರಾರು ಜನ ಸೇರುವ ನಿರೀಕ್ಷೆ
  • ಮೂರು ರಾಜ್ಯಗಳ ಸಿಎಂ ಭಾಗಿ
ಕೊಪ್ಪಳ : ದೇಶದ ನೀರಾವರಿ ಇತಿಹಾಸದಲ್ಲಿ ಮಹತ್ತರ ಕ್ಷಣ ದಾಖಲಿಸಲು ಮುನಿರಾಬಾದ್​ ಗ್ರಾಮ ಸಜ್ಜುಗೊಂಡಿದೆ. ಆಂಧ್ರ&ತೆಲಂಗಾಣ ಹಾಗೂ ರಾಜ್ಯ ಸಿಎಂಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಕ್ಷಣ ಕಣ್ತುಂಬಿಕೊಳ್ಳಲು ದೇಶವೇ ಕಾತುರದಿಂದ ಕಾಯುತ್ತಿದೆ.
ಮುನಿರಾಬಾದ್​ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಬೃಹತ್​ ವೇದಿಕೆ ತಲೆ ಎತ್ತಿದೆ. 15 ಸಾವಿರ ಜನ ಕುಳಿತುಕೊಳ್ಳಲು ಅನುಕೂಲವಾಗುವಂತೆ ಕುರ್ಚಿ ಹಾಕಿದ್ದು ಜರ್ಮನ್​ ಟೆಂಟ್​ ಅಳವಡಿಸಲಾಗಿದೆ. ಮುನಿರಾಬಾದ್​ ಐಆರ್​ಬಿಯಲ್ಲಿ ಎಲಿಪ್ಯಾಡ್​ ರಚಿಸಿದ್ದು, ಸಿಎಂಗಳಾದ ಡಿ.ಕೆ.ಶಿವಕುಮಾರ್​, ಚಂದ್ರಬಾಬು ನಾಯ್ಡು, ರೇವಂರ್​ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವರು, ರಾಜ್ಯಗಳ ನೀರಾವರಿ ಸಚಿವರು ಬಂದಿಳಿಯುವರು.
ಅಲ್ಲಿಂದ ಡಿಬಿ ಡ್ಯಾಂ ಮುಖ್ಯ ಗೇಟ್​ ಮೂಲಕ ವೈಕುಂಠ ಅತಿಥಿ ಗೃಹಕ್ಕೆ ತೆರಳಲಿದ್ದು, ಬಳಿಕ ಡ್ಯಾಂ ಮೇಲ್ಭಾಗದಲ್ಲಿ ಹೊಸ ಕ್ರಸ್ಟ್​ ಗೇಟ್​ ಲೋಕಾರ್ಪಣೆಗೊಳಿಸಲಿದ್ದಾರೆ. ಅಲ್ಲಿಂದ ಲೇಕ್​ವ್ಯೂವ್​ ಮಾರ್ಗವಾಗಿ ಮುನಿರಾಬಾದಿನ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿನ ವೇದಿಕೆಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಐಆರ್​ಬಿಗೆ ತೆರಳಿ ತ್ರಿವಳಿ ರಾಜ್ಯಗಳ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಅನೌಪಚಾರಿಕ ಸಭೆ ನಡೆಸುವರು.
ಮೂವರು ಸಿಎಂಗಳು ಹಾಗೂ ಕೇಂದ್ರ, ರಾಜ್ಯದ ಸಚಿವರು, ಸಂಸದರು, ಶಾಸಕರು ಭಾಗಿಯಾಗುವ ಕಾರಣ ಬಿಗಿ ಪೊಲೀಸ್​ ಭದ್ರತೆ ಕಲ್ಪಿಸಲಾಗಿದೆ. ಆರು ಎಸ್ಪಿಗಳು, 12 ಎಎಸ್ಪಿಗಳು, 25 ಡಿವೈಎಸ್ಪಿಗಳು, 50 ಪಿಐ ಮತ್ತು ಪಿಎಸ್​ಐಗಳು, 1500 ಪೊಲೀಸರನ್ನು ನಿಯೋಜಿಸಲಾಗಿದೆ. ಕೆಎಸ್​ಆರ್​ಪಿ ತುಕಡಿಗಳನ್ನು ಬಳಕೆ ಮಾಡಲಾಗುತ್ತಿದೆ. ಹುಲಿಗಿ ಕ್ರಾಸ್​ನಿಂದ ಮುನಿರಾಬಾದ್​ ಪ್ರವೇಶಿಸುವ ಮಾರ್ಗ ಸಾರ್ವಜನಿಕರಿಗೆ ರ್ನಿಬಂಧಿಸಿದ್ದು, ಹೆದ್ದಾರಿ ಮೂಲಕವೇ ಗ್ರಾಮದ ಒಳಗೆ ಪ್ರವೇಶಿಸಬೇಕು. ವೇದಿಕೆ ಸುತ್ತಲಿನ ಭಾಗ ಹಾಗೂ ಇತರೆಡೆ 150 ಬಸ್​, 450 ಇತರ ವಾಹನ ಹಾಗೂ ಬೈಕ್​ಗಳಿಗೆ ಪಾರ್ಕಿಂಗ್​ ಅವಕಾಶ ಕಲ್ಪಿಸಲಾಗಿದೆ.

ರಸ್ತೆಗಳ ರಿಪೇರಿ

ಮುನಿರಾಬಾದ್​ ಸಂಪರ್ಕಿಸುವ ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ. ಎರಡೂ ಬದಿಗಳಲ್ಲಿನ ಜಂಗಲ್​ ಕಟಿಂಗ್​ ಮಾಡಿಸಿ ಸ್ವಚ್ಛತೆ ಕಾಪಾಡಲಾಗುತ್ತಿದೆ. ಡಿವೈಡರ್​ಗಳಿಗೆ ಬಣ್ಣ ಬಳಿಯುತ್ತಿದ್ದು, ಮಧುವಣಗಿತ್ತಿಯಂತೆ ಮುನಿರಾಬಾದ್​ ಗ್ರಾಮವನ್ನು ಸಿಂಗರಿಸಲಾಗಿದೆ. ಸ್ವಾಗತ ಕಮಾನುಗಳು ರಾರಾಜಿಸುತ್ತಿದ್ದು, ಮೂವರು ಸಿಎಂಗಳ ಭಾವಚಿತ್ರಗಳ ಫ್ಲೆಕ್ಸ್ ಹಾಕಿ ಸ್ವಾಗತ ಕೋರಲಾಗಿದೆ. ಭದ್ರತೆ ದೃಷ್ಟಿಯಿಂದ ಪಂಪಾವನ, ಬಸ್​ನಿಲ್ದಾಣ ಹಾಗೂ ಪೊಲೀಸ್​ ಠಾಣೆ ಮುಂಭಾಗ ಪ್ರದೇಶವನ್ನು ಕಾರ್ಯಕ್ರಮ ಮುಗಿವವರೆಗೂ ಸಾರ್ವಜನಿಕರ ಓಡಾಟಕ್ಕೆ ರ್ನಿಬಂಧಿಸಲಾಗಿದೆ.
"

ಕ್ರಸ್ಟ್​ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಮೂವರು ಸಿಎಂಗಳ ಪ್ರವಾಸ ವಿವರ ಬಂದಿದೆ. ಕೇಂದ್ರ ಸಚಿವರು, ರಾಜ್ಯ ಸಚಿವರು ಹಾಗೂ ವಿವಿಧ ಸಂಸದ, ಶಾಸಕರು ಬರುವ ನಿರೀೆ ಇದೆ. ಅಧಿಕಾರಿಗಳ ತಂಡ ರಚಿಸಿದ್ದು ಗಣ್ಯರನ್ನುಬರಮಾಡಿಕೊಂಡು ವಾಪಸ್​ ಕಳಿಸುವವರೆಗೂ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. 15 ಸಾವಿರ ಜನರಿಗೆ ಬೇಕಾಗುವಷ್ಟು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

— ಡಾ.ಸುರೇಶ ಬಿ.ಇಟ್ನಾಳ. ಕೊಪ್ಪಳ ಡಿಸಿ.
"

ಮೂವರು ಸಿಎಂಗಳು ಬರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಿದ್ದೇವೆ. ಹುಲಿಗಿ ಕ್ರಾಸ್​ನಿಂದ ಮುನಿರಾಬಾದ್​ ಒಳ ಹೋಗುವ ರಸ್ತೆಯಲ್ಲಿ ಸಾರ್ವನಿಕರಿಗೆ ರ್ನಿಬಂಧಸಿಲಾಗಿದೆ. ಎನ್​ಎಚ್​ಗೆ ಹೊಂದಿಕೊಂಡು ಇರುವ ಸೇವಾ ರಸ್ತೆ ಬಳಸಿ ಒಳ&ಹೊರ ಹೋಗಲು ಅವಕಾಶ ಕಲ್ಪಿಸಲಾಗಿದೆ. ಅಗತ್ಯ ಪಾರ್ಕಿಂಗ್​ ನಿರ್ಮಿಸಿದ್ದು ಸಾರ್ವಜನಿಕರು ಸಹಕರಿಸಬೇಕು.

— ಡಾ.ರಾಮ್​ ಎಲ್​.ಅರಸಿದ್ದಿ. ಎಸ್ಪಿ ಕೊಪ್ಪಳ.