ಮಾಸಾಶನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಉಪ ತಹಸೀಲ್ದಾರ್ ಕೃಷ್ಣವೇಣಿಗೆ ಗುರುವಾರ ಸಲ್ಲಿಸಿದರು. ತಾಲೂಕಾಧ್ಯಕ್ಷ ಬಸವರಾಜ ಗೋನಾಳ್, ಪದಾಧಿಕಾರಿಗಳಾದ ಕೆ. ನಾಗರಾಜ, ಶಿವಕುಮಾರ, ಸರಸ್ವರಿ, ಶೇಷಮ್ಮ ಇತರರಿದ್ದರು.
ಗಂಗಾವತಿ: ಅಂಗವಿಕಲರ ಮಾಸಾಶನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ನಗರದ ತಾಲೂಕಾಡಳಿತ ಸೌಧದ ಮುಂದೆ ಗುರುವಾರ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಕೃಷ್ಣವೇಣಿಗೆ ಮನವಿ ಸಲ್ಲಿಸಿದರು.
ತಾಲೂಕಾಧ್ಯಕ್ಷ ಬಸವರಾಜ ಗೋನಾಳ್ ಮಾತನಾಡಿ, ಅಂಗವಿಕಲರ ಕಾಯ್ದೆ ಜಾರಿಗೊಳಿಸುವಲ್ಲಿ ಸರ್ಕಾರ ವಿಲವಾಗಿದ್ದು, ತುಟ್ಟಿ ಕಾಲದಲ್ಲಿ ಅತ್ಯಂತ ಕಡಿಮೆ ಮಾಸಾಶನ ನೀಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಹೇಳಿಕೊಳ್ಳುವ ಸರ್ಕಾರ, ಅಂಗವಿಕಲರ ಜೀವನಭದ್ರತೆ ಗ್ಯಾರಂಟಿ ನೀಡಿಲ್ಲ. ಅಂಗವಿಕಲರ ಅಭಿವೃದ್ಧಿಗೆ ಮೀಸಲಾದ ಅನುದಾನ ಬಳಸಿಕೊಳ್ಳುವಲ್ಲಿ ಇಲಾಖೆಗಳು ವಿಲವಾಗಿವೆ. ಅಂಗವಿಕಲರ ಹಕ್ಕುಗಳ ಕಾಯ್ದೆ 2026 ಸಮರ್ಪಕ ಜಾರಿಯಾಗಿಲ್ಲ. ಪಿಂಚಣಿ ಹಕ್ಕುಕಾಯ್ದೆ ಮರೀಚಿಕೆಯಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ 100ದಿನ ಕೆಲಸ ಸಿಗುತ್ತಿಲ್ಲ. ಶಿಕ್ಷಣಕ್ಕೆ ಸಹಾಯ, ಶೇ.5 ವಸತಿ, ನೀವೇಶನ ಮೀಸಲು, 10ಸಾವಿರ ರೂ.ಮಾಸಾಶನ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ಕೆ. ನಾಗರಾಜ, ಶಿವಕುಮಾರ, ಯಮನಮ್ಮ, ಸತೀಶ, ಮೋಹನ್, ಪಿ. ಭುವನೇಶ್ವರಿ, ಸರಸ್ವತಿ, ಬಸವರಾಜ, ಎನ್.ರಾಘವೇಂದ್ರ, ಡಾ. ಅಶೋಕ, ಶೇಷಮ್ಮ, ಖಾದರ್‌ಪಾಷಾ, ಕೆ.ಶೆಕ್ಷಾವಲಿ, ಹನುಮಂತ, ಮುಕ್ಕಣ್ಣ, ಎಸ್.ಬಿ. ಭುವನೇಶ್ವರಿ, ಎಂ.ಎಸ್. ಯಮನಮ್ಮ ಇತರರಿದ್ದರು.