ಮಾಸಾಶನ ಬಿಡುಗಡೆ ಆಗ್ರಹಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿಗೆ ಮಂಗಳವಾರ ಸಲ್ಲಿಸಿದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಒಕ್ಕೂಟದ ತಾಲೂಕಾಧ್ಯಕ್ಷ ಬಸವರಾಜ ಗೋನಾಳ್, ಪದಾಧಿಕಾರಿಗಳಾದ ಮುತ್ತಣ್ಣ ದಾಸನಾಳ್, ಯಲ್ಲಪ್ಪ ವಡ್ಡರಹಟ್ಟಿ, ವಿಜಯಶ್ರೀ, ಯಮನಮ್ಮ ಇತರರಿದ್ದರು.
ಗಂಗಾವತಿ: ಅಂಗವಿಕಲರ ಮಾಸಾಶನ ಬಿಡುಗಡೆಗೆ ಒತ್ತಾಯಿಸಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ತಾಲೂಕು ಸಮಿತಿ ಸದಸ್ಯರು ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಸಹಯೋಗದಲ್ಲಿ ತಹಸಿಲ್ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿ ಪ್ರಭಾರ ತಹಸೀಲ್ದಾರ್ ವಿಶ್ವನಾಥ ಮುರಡಿಗೆ ಮನವಿ ಸಲ್ಲಿಸಿದರು.
ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ ಹೊಸಳ್ಳಿ, ಒಕ್ಕೂಟದ ತಾಲೂಕಾಧ್ಯಕ್ಷ ಬಸವರಾಜ ಗೋನಾಳ್ ಮಾತನಾಡಿ, ಅಂಗವಿಕಲರ ಮಾಸಾಶಾನ ಕಳೆದ 3 ತಿಂಗಳಿಂದ ಬಿಡುಗಡೆಯಾಗಿಲ್ಲ. ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದ್ದು, ಕುಟುಂಬ ಸಂಕಷ್ಟಕ್ಕೊಳಗಾಗಿದೆ. ಜೀವನ ನಿರ್ವಹಣೆ ಭತ್ಯೆ 5ಸಾವಿರ ರೂ. ನೀಡಬೇಕೆಂಬ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹಿರಿಯ ನಾಗರಿಕರು ಮತ್ತು ವಿಧವೆಯರ ಮಾಸಾಶನ ಹೆಚ್ಚಿಸಬೇಕು.
ಎಲ್ಲ ಅಂಗವಿಕಲರಿಗೆ ರಾಜ್ಯಾದ್ಯಂತ ಸಂಚರಿಸಲು ಬಸ್‌ಪಾಸ್ ಉಚಿತ ವ್ಯವಸ್ಥೆಯಾಗಬೇಕು. ಪ್ರತಿ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ಜತೆಗೆ 35 ಕೆಜಿ ಅಕ್ಕಿ ಇತರ ದಿನಸಿ ವಸ್ತುಗಳನ್ನು ವಿತರಿಸಬೇಕು. ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ವಿತರಿಸುವಂಗತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಮುತ್ತಣ್ಣ ದಾಸನಾಳ್, ಯಲ್ಲಪ್ಪ ವಡ್ಡರಹಟ್ಟಿ, ಶಬ್ಬೀರ್, ಶಿವಕುಮಾರ, ನಾಗರಾಜ, ಕೆ. ಶೇಷಮ್ಮ, ಹನುಮಂತ ದಾಸನಾಳ, ದುರುಗಪ್ಪ , ವಿಜಯಶ್ರೀ, ಯಮನಮ್ಮ, ಮಲ್ಲೇಶ, ಬೀಬಿಜಾನ್, ಖಾದರ್ ಬಾಷಾ ಇತರರಿದ್ದರು.