ಕಾರಟಗಿಯ ಮಹಾದೇಶ್ವರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಶ್ರಾವಣ ಮಾಸದ ಕೊನೇ ದಿನ ಭಜನೆ ಕಾರ್ಯಕ್ರಮ ನೆರವೇರಿಸಿದರು. ಪ್ರಮುಖರಾದ ಸಿದ್ದರಾಮಯ್ಯ ಹಿರೇಮಠ, ಮಂಜುನಾಥ ಶೀಲವಂತರ್, ಮಲ್ಲಪ್ಪ ಕೊಟಗಿ, ಅರ್ಚಕರಾದ ಶರಣಯ್ಯಸ್ವಾಮಿ, ರುದ್ರಮುನಿ ಸ್ವಾಮಿ ಇತರರಿದ್ದರು.
- ಮಹಾದೇಶ್ವರ ಸೇವಾ ಟ್ರಸ್ಟ್‌ನಿಂದ ಸೇವೆ
- ಕಾರಟಗಿ ವಿಶೇಷ ಪೂಜೆ, ದಾಸೋಹ
ಕಾರಟಗಿ: ಶ್ರಾವಣ ಮಾಸ ನಿಮಿತ್ತ ಇಲ್ಲಿನ ಮಹಾದೇಶ್ವರ ಸೇವಾ ಟ್ರಸ್ಟ್‌ನಿಂದ ತಿಂಗಳ ಕಾಲ ಹಮ್ಮಿಕೊಂಡಿದ್ದ ಭಜನಾ ಕಾರ್ಯಕ್ರಮ ಮಹಾದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ದಾಸೋಹ ನಡೆಸುವ ಮೂಲಕ ಸಂಪನ್ನಗೊಂಡಿತು.
ಶ್ರಾವಣ ಆರಂಭ ದಿನದಿಂದ ಪ್ರತಿದಿನ ಬೆಳಗ್ಗೆ ಶ್ರೀ ಶರಣಬಸವೇಶ್ವರ ಮತ್ತು ಮಹಾದೇಶ್ವರರ ಭಾವಚಿತ್ರದೊಂದಿಗೆ ಒಂದು ವಾರ್ಡ್‌ನಲ್ಲಿ ಭಜನಾ ಮೆರವಣಿಗೆ ಮಾಡಲಾಯಿತು. ಭಜನೆ ಕಾರ್ಯಕ್ರಮ ಪಟ್ಟಣದಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಭಕ್ತರಿಂದ ಉತ್ತಮ ಸ್ಪಂದನೆ, ಧಾರ್ಮಿಕ ಭಾವನೆ ಮೂಡಿಸಿ ಯಶಸ್ವಿಯಾಯಿತು ಎಂದು ನೇತೃತ್ವ ವಹಿಸಿದ್ದ ಸಿದ್ದರಾಮಯ್ಯ ಹಿರೇಮಠ ಹೇಳಿದರು.
ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಜನಾ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು. ಈ ವೇಳೆ ಪುರಸಭೆ ಸದಸ್ಯ ಬಸವರಾಜ ಕೊಪ್ಪದ, ಅರ್ಚಕರಾದ ಶರಣಯ್ಯಸ್ವಾಮಿ, ರುದ್ರಮುನಿ ಸ್ವಾಮಿ, ಪ್ರಮುಖರಾದ ಮಂಜುನಾಥ ಶೀಲವಂತರ್, ಮಲ್ಲಪ್ಪ ಕೊಟಗಿ, ಬಸವರಾಜ ಅರಳಿ, ರಾಜಶೇಖರ ಕೋರಿ, ಬಸವರಾಜ ಚಿನಿವಾಲರ್, ಪ್ರವೀಣ ಗದ್ದಿ, ಸಿದ್ದಪ್ಪ ಬಪ್ಪೂರ ಇತರರಿದ್ದರು.