ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಕಾರ್ಖಾನೆಗಳ ವಿರುದ್ಧ ಧ್ವನಿ ಎತ್ತುವಂತೆ ಆಗ್ರಹಿಸಿ ಕೊಪ್ಪಳದಲ್ಲಿ ಹಾಕಿರುವ ಬ್ಯಾನರ್. 
ಕೊಪ್ಪಳ

ಶಾಸಕರೇ ಸದನದಲ್ಲಿ ಧ್ವನಿ ಎತ್ತಿ, ಬ್ಯಾನರ್ ಕಟ್ಟಿ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಬ್ಯಾನರ್ ಕಟ್ಟಿ ಆಗ್ರಹ
  • ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಧರಣಿ
ಕೊಪ್ಪಳ: ಜಿಲ್ಲೆಯಲ್ಲಿ ಕಾರ್ಖಾನೆಗಳ ವಿಸ್ತರಣೆ ಖಂಡಿಸಿ ಕೊಪ್ಪ‌ಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಮ್ಮಿಕೊಂಡ ಅನಿರ್ಧಿಷ್ಟ ಧರಣಿ ಮಂಗಳವಾರ 40 ದಿನ ಪೂರೈಸಿದೆ. ಸದನ ಆರಂಭವಾಗಿದ್ದು ಜಿಲ್ಲೆಯ ಶಾಸಕರು ಸದನದಲ್ಲಿ ಕಾರ್ಖಾನೆಗಳ ವಿಸ್ತರಣೆ ತಡೆ ಬಗ್ಗೆ ದನಿ ಎತ್ತುವಂತೆ ಆಗ್ರಹಿಸಿ ನಗರದ ವಿವಿಧೆಡೆ ಬ್ಯಾನರ್ ಹಾಕಿಸುವ ಮೂಲಕ ಜನಪ್ರತಿನಿಧಿಗಳ‌ ನಿಷ್ಕ್ರಿಯತೆ ಖಂಡಿಸಿದರು.
ನಗರದ ಪ್ರಮುಖ ವೃತ್ತ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ದೊಡ್ಡ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಸಚಿವ ಶಿವರಾಜ ತಂಗಡಗಿ, ಶಾಸಕರಾದ ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ, ಜನಾರ್ದನ ರೆಡ್ಡಿ, ಬಿಪ ಸದಸ್ಯೆ ಹೇಮಲತಾ ನಾಯಕ ಭಾವಚಿತ್ರ ಹಾಕಿಸಲಾಗಿದೆ. ’ಅಧಿವೇಶನದಲ್ಲಿ ಧ್ವನಿ ಎತ್ತಿ’ ಎಂಬ ಸಂದೇಶ ಬರೆದು ಆಗ್ರಹ ಮಾಡಲಾಗಿದೆ.
ಬಲ್ಡೋಟಾ, ಕಿರ್ಲೋಸ್ಕರ್‌, ಕಲ್ಯಾಣಿ ಸ್ಟೀಲ್‌, ಮುಕುಂದ್‌ ಸುಮಿ ಹಾಗೂ ಕ್ಸಿಂಡಿಯಾ ಕಾರ್ಖಾನೆಗಳು ವಿಸ್ತರಣೆಗೆ ಮುಂದಾಗಿವೆ‌. ಅದಕ್ಕೆ ಅವಕಾಶ ಕೊಡಬಾರದು ಎಂದು ಬ್ಯಾನರ್‌ನಲ್ಲಿ ಒತ್ತಾಯಿಸಿದ್ದಾರೆ‌.