- ಸರ್ಕಾರಕ್ಕೆ ಶಾಸಕ ಜನಾರ್ದನ ರೆಡ್ಡಿ ಸಲಹೆ
ಕೊಪ್ಪಳ : ಅಧಿಕಾರ ಹಂಚಿಕೆ ವಿಷಯದಲ್ಲಿ ಮೂರು ವರ್ಷ ಕಳೆದಿವೆ. ಬಾಕಿ ಎರಡು ವರ್ಷವಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲಿ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ತಾಲೂಕಿನ ಇರಕಲ್ ಗಡಾದಲ್ಲಿ ಮಂಗಳವಾರ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಹಿಜಾಬ್ ವಿಚಾರದಲ್ಲಿ ಸರ್ಕಾರ ರಾಜ್ಯದ ಜನರ ಶಾಂತಿ ಹಾಳು ಮಾಡುತ್ತಿದೆ. ಶಾಲೆಯಲ್ಲಿ ಎಸ್ ಸರ್ ಎಂದು ಅಮೇರಿಕಾದಲ್ಲಿ ಹೇಳಲಿ. ನಮ್ಮಲ್ಲಿ ಜೈ ಶ್ರೀರಾಮ್ ಎಂದರೆ ತಪ್ಪಿಲ್ಲ. ಸಿಎಂ ಹುದ್ದೆ ಜಗಳದಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೆಯಾಗಿದೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಸಿಎಂ ಸ್ಥಾನ ಬಿಡುವಂತೆ ಸಿದ್ದರಾಮಯ್ಯಗೆ ಒತ್ತಡ ಬರುತ್ತಿದೆ ಎನ್ನುತ್ತಿದ್ದಾರೆ. ಅದನ್ನು ತೀರ್ಮಾನ ಮಾಡಿಕೊಂಡು ಬಾಕಿ ಎರಡು ವರ್ಷವಾದರೂ ಅಭಿವೃದ್ಧಿಪರ ಆಡಳಿತ ನೀಡಲಿ ಎಂದು ಸಲಹೆ ನೀಡಿದರು.
ಗ್ಯಾರಂಟಿಗಳ ಪರಿಷ್ಕರಣೆ ಬಗ್ಗೆ ಮಾತನಾಡಿ, ಸಿಎಂ ಯಾರೆಂಬುದೇ ಗ್ಯಾರಂಟಿ ಇಲ್ಲ. ಬದಲಾವಣೆ ಬಳಿಕ ಗ್ಯಾರಂಟಿ ಪರಿಷ್ಕರಿಸಲಿ. ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ. ಇಲ್ಲದಿದ್ದರೆ ಡಿಕೆಶಿ ಆಗಬಹುದು. ಪರಮೇಶ್ವರ, ರ್ಖಗೆ ಆಗಲಿ ಎಂದು ಹೇಳಿ ಸಿದ್ದರಾಮಯ್ಯ ಬಣದವರ ಡಿಕೆಶಿಗೆ ಟೆನ್ಶನ್ ನೀಡುತ್ತಿದ್ದಾರೆಂದು ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಪಕ್ಷ ಸಂಟನೆ ಬಗ್ಗೆ ತಿಳಿಸಿದ್ದಾರೆ. ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ಪದಾಧಿಕಾರಿಗಳ ಬದಲಾವಣೆ ಹೈಕಮಾಂಡ್ಗೆ ಬಿಟ್ಟಿದ್ದು. ನಾನಾಗಲಿ, ಶ್ರೀರಾಮುಲು ಆಗಲಿ ಪಕ್ಷದ ಹುದ್ದೆ ಕೇಳಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬರಲಿ ಎಂಬುದು ನಮ್ಮ ಅಪೇೆ. ನನ್ನ ಸ್ನೇಹಿತನಿಗೆ ಒಳ್ಳೆ ಸ್ಥಾನ ಸಿಕ್ಕರೆ ಖುಷಿ ಪಡುವ ವ್ಯಕ್ತಿ ನಾನು. 2028ರಲ್ಲಿ ರಾಜ್ಯದಲ್ಲಿ ಬಿಜೆಪಿ 150 ಸ್ಥಾನ ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಕೊಪ್ಪಳ ರಿಪಬ್ಲಿಕ್ ಆಗೋದು ಪಕ್ಕಾ
ನನಗೆ ಹಿಟ್ನಾಳ ಸಹೋದರರ ಪರಿಚಯ ಆಗಿದ್ದು ಗಂಗಾವತಿಗೆ ಬಂದ ಮೇಲೆ. ಇಕ್ಬಾಲ್ ಅನ್ಸಾರಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಜನರ ಪ್ರೀತಿ, ವಿಶ್ವಾಸಕ್ಕೆ ಬೆಲೆ ನೀಡಿ ಗಂಗಾವತಿಗೆ ಬಂದಿರುವೆ. ನನಗೆ ಬಳ್ಳಾರಿ, ಗಂಗಾವತಿ ಎರಡೂ ಒಂದೇ. ಮುಂದೆಯೂ ಗಂಗಾವತಿಯಲ್ಲಿ ಸ್ಪರ್ಧೆ ಮಾಡುವೆ. ಅನ್ಸಾರಿ ಜೆಡಿಎಸ್, ಎಂಐಎಂಗೆ ಹೋಗ್ತಾರೊ ಗೊತ್ತಿಲ್ಲ. ಆದರೆ, ಹಿಟ್ನಾಳ ಬ್ರದರ್ಸ್ ಕೊಪ್ಪಳ ರಿಪಬ್ಲಿಕ್ ಮಾಡುತ್ತಾರೆ ಎಂದಿರುವುದು ಸತ್ಯ. ಅನ್ಸಾರಿ ಹಿಟ್ನಾಳ ಸಹೋದರರ ನೀರಿಳಿಸಲು ತೀರ್ಮಾನಿಸಿದಂತಿದೆ. ಇದರಿಂದ ನಮಗೆ ಲಾಭವಾಗಲಿದೆ. 2028ರಲ್ಲಿ ನಾನು ಗಂಗಾವತಿಯಿಂದಲೇ ಸ್ಪರ್ಧಿಸುವೆ ಎಂದು ರೆಡ್ಡಿ ಅನ್ಸಾರಿಗೆ ಟಾಂಗ್ ನೀಡಿದರು.
"
ಬಿಜೆಪಿ ಸರ್ಕಾರ ರೈತರಿಗೆ ಬಿತ್ತನೆ ಬೀಜಕ್ಕೆ ಸಹಾಯಧನ ನೀಡುತ್ತಿತ್ತು. ಕಾಂಗ್ರೆಸ್ ರೈತರ ಪರ ಕಾಳಜಿ ತೋರುತ್ತಿಲ್ಲ. ನಾವು ರೈತರ ಕೃಷಿ ಚಟುವಟಿಕೆ ಬಗ್ಗೆ ಯೋಚಿಸಿದರೆ ಅವರು ದೆಹಲಿಯಲ್ಲಿ ಸಿಎಂ ಕುರ್ಚಿಗೆ ಗುದ್ದಾಟ ನಡೆಸಿದ್ದಾರೆ.ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಹಾಳಾಗಿದೆ. ಮುಂದೆ ಏನಾಗುವುದೋ ಗೊತ್ತಿಲ್ಲ.
— ಗಾಲಿ ಜನಾರ್ದನ ರೆಡ್ಡಿ. ಗಂಗಾವತಿ ಶಾಸಕ.