ಕಾರಟಗಿಯ ನೋಂದಣಿ ಕಚೇರಿಯಲ್ಲಿ ಶಿಕ್ಷಣ ಇಲಾಖೆಗೆ ಜಾಗ ನೋಂದಣಿ ಮಾಡಿಸಿ ಕೊಟ್ಟ ಸಚಿವ ಶಿವರಾಜ್ ತಂಗಡಗಿ ಅವರ ತಾಯಿ ಹುಲಿಗೆಮ್ಮ ಜತೆ ಬಿಇಒ ನಟೇಶ್ ಇತರರಿದ್ದಾರೆ. 
ಕೊಪ್ಪಳ

ಶಾಲೆಗೆ ಜಾಗ ದಾನ ನೀಡಿದ ಸಚಿವರ ತಾಯಿ

ಪ್ರಮುಖ ಮುಖ್ಯಾಂಶಗಳು

  • ಜಾಗ ದಾನ

ಶಾಲೆಗೆ ಜಾಗ ದಾನ ನೀಡಿದ ಸಚಿವರ ತಾಯಿ

ಕನಕಗಿರಿ: ಜಾಗದ ವಿಷಯದಲ್ಲಿ ವಿವಾದ ಉಂಟಾಗಿ ಕಟ್ಟಡ ನಿರ್ಮಾಣವಾಗದೇ ಕಳೆದ 7 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತಾಲೂಕಿನ ಆದಾಪುರ ಗ್ರಾಮದ ಶಾಲೆ ನಿರ್ಮಾಣಕ್ಕೆ ಸಚಿವ ಶಿವರಾಜ ತಂಗಡಗಿ ತಾಯಿ ಹುಲಿಗೆಮ್ಮ ವರ್ಷದ ಹಿಂದೆಯೇ ಖರೀದಿಸಿದ್ದ ಒಂದು ಎಕರೆ ಜಾಗವನ್ನು ಇತ್ತೀಚೆಗೆ ದಾನ ಮಾಡಿ ಇಲಾಖೆಗೆ ನೋಂದಣಿ ಮಾಡಿಸಿದ್ದಾರೆ.
ಆದಾಪುರಲ್ಲಿದ್ದ ಹಳೇ ಕಟ್ಟಡದ ಕೆಲ ಕೊಠಡಿಗಳನ್ನು 2019ರಲ್ಲಿ ತೆರವು ಮಾಡಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ ಸ್ಥಳದ ಮಾಲೀಕರ ಕುಟುಂಬಸ್ಥರು ತಕರಾರು ಮಾಡಿದ್ದರು. ಕೊಠಡಿಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿತ್ತು. ಮಾಜಿ ಶಾಸಕ ಸೇರಿ ಈಗಿನ ಸಚಿವರಿಂದಲೂ ಸಮಸ್ಯೆ ಇತ್ಯರ್ಥವಾಗಿರಲಿಲ್ಲ.
ಕೊನೆಗೆ ಸಚಿವ ತಂಗಡಗಿ ಕುಟುಂಬ ಭೂ ದಾನ ಮಾಡಿ ಗ್ರಾಮದ ಸರ್ವೇ ನಂ.86/1/4ರಲ್ಲಿ ಒಂದು ಎಕರೆ ಜಮೀನನ್ನು ಒಂದು ವರ್ಷದ ಹಿಂದೆ ಸಚಿವರ ತಾಯಿ ಹುಲಿಗೆಮ್ಮ ಖರೀದಿಸಿದ್ದರು. ಇದೀಗ ರಾಜ್ಯಪಾಲರ ಹೆಸರಿನಲ್ಲಿ ನೋಂದಾಯಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ.
ಶಾಲೆಗೆ ಭೂಮಿ ದಾನ ನೀಡಲು ನಡೆದಿರುವ ಪ್ರಕ್ರಿಯೆಗಳ ಕುರಿತು 2024ರ ನ.29ರಂದು ಆದಾಪುರ ಶಾಲೆಗೆ ಭೂಮಿ ನೀಡಲು ಮುಂದಾದ ಸಚಿವ ತಂಗಡಗಿ ಶೀರ್ಷಿಕೆಯಡಿ ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.