ಜಮೀರ್ ಅಹ್ಮದಖಾನ್ ಗೆ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಕುಷ್ಟಗಿಯ ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮುಸ್ಲಿಂ ಸಮಾಜದವರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮುಸ್ಲಿಂ ಸಮಾಜದ ಮುಖಂಡರಾದ ಶೇಖ್ ನಿಜಾಮುದ್ದೀನ್ ಕಪಾಲಿ, ಸದ್ದಾಂ ಹುಸೇನ, ಅಕ್ಬರ್ ಮಾಟಲದಿನ್ನಿ,ಮೌಲಾ ಗುಮಗೇರಿ ಇದ್ದರು. 
ಕೊಪ್ಪಳ

ಜಮೀರ್ ಅಹ್ಮದ್ ಗೆ ಕೈ ತಪ್ಪಿದ ಸಚಿವ ಸ್ಥಾನ ಪ್ರತಿಭಟನೆ

ಕುರುವತ್ತಿ ಶ್ರೀಕಾಂತಪ್ಪ
ಕು?್ಟಗಿ: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ಪ್ರಥಮ ಹಂತದಲ್ಲಿ ಅವಕಾಶ ನೀಡದೆ ವಂಚಿಸಿದೆ ಹಿನ್ನೆಲೆ ಮುಸ್ಲಿಂ ಸಮುದಾಯದ ಮುಖಂಡರು ಶುಕ್ರವಾರ ಸಂಜೆ ಪಟ್ಟಣದ ಮಲ್ಲಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಅವರಿಗೆ ಎಂದು ಕಾಂಗ್ರೆಸ್ ವರಿ?್ಠರ ವಿರುದ್ಧವಾಗಿ ಪಂಜಿನ ಮೆರವಣಿಗೆ ಮಾಡುವ ಮೂಲಕ ಪ್ರತಿಭಟನೆ ಮಾಡಿ ಗಮನ ಸೆಳೆದರು.
ಕಾಂಗ್ರೆಸ್ ಪಕ್ಷದ ಕಟ್ಟಾಳು ಪಕ್ಷದ ಶಿಸ್ತಿನ ಸಿಪಾಯಿ ಯಂತೆ ಕೆಲಸ ಮಾಡಿದ್ದ ಜಮೀರ್ ಅಹ್ಮದ್ ಖಾನ್ ರವರನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ ಕೂಡಲೇ ಅವರನ್ನು ಪಕ್ಷ ಸಚಿವ ಸ್ಥಾನವನ್ನು ನೀಡಿ ಇಡೀ ಮುಸ್ಲಿಂ ಸಮುದಾಯದ ನಾಯಕತ್ವಕ್ಕೆ ಬೆಲೆ ನೀಡಬೇಕು ಎಂದು ನಯುಮ್ ಒತ್ತಾಯಿಸಿದರು. ಮಲ್ಲಯ್ಯ ವೃತ್ತದಿಂದ ಬಸ್ ನಿಲ್ದಾಣ ರಸ್ತೆಯ ಮೂಲಕ ಮಾರುತಿ ವೃತ್ತದಿಂದ ಬಸವೇಶ್ವರ ವೃತ್ತದಲ್ಲಿ ಸೇರಿದ ಪ್ರತಭಟನಾ ಕಾರರು ಪಂಜಿನ ಮೆರವಣಿಗೆ ಮಾಡುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದರು. ಜಮೀರ್ ಅಹ್ಮದ್ ಅವರನ್ನು ಸಚಿವ ಸಂಪುಟದಲ್ಲಿ ತೆಗೆದುಕೊಳ್ಳದೇ ಇದ್ದರೆ ಉಗ್ರವಾದ ಹೋರಾಟ ಮುಸ್ಲಿಂ ಸಮುದಾಯದಿಂದ ಎದುರಿಸಲು ಕಾಂಗ್ರೆಸ್ ವರಿಷ್ಠರಿಗೆ ಎಚ್ಚರಿಕೆ ನೀಡುವ ಮೂಲಕ ಎಲ್ಲರೂ ಜಮೀರ್ ಪರ ಘೋ?ಣೆ ಕೂಗಿದರು.
ಈ ಸಂದರ್ಭದಲ್ಲಿ ಶೇಖ್ ನಿಜಾಮುದ್ದೀನ್ ಕಪಾಲಿ, ಸದ್ದಾಂ ಹುಸೇನ, ಅಕ್ಬರ್ ಮಾಟಲದಿನ್ನಿ,ಮೌಲಾ ಗುಮಗೇರಿ, ರಜಾಕ ಸುಳ್ಳದ,ಹುಸೇನ ನಧಾಫ್, ಮೈನುದ್ದೀನ ವಕೀಲರು, ಶಪೀ ವಕೀಲರು, ಅಬ್ದುಲ್ ಟೆಂಗುಂಟಿ, ಯೂಸೂಫ್ ಕನಕಾಪೂರ, ರಿಯಾಜ್, ಹುಸೇನ್ ಕಾಯಿಗಡ್ಡಿ, ನಯುಮ್ ಚೌಡಿ, ರಾಜೇಸಾಬ್ ಭಾವಿಕಟ್ಟಿ ಗುಮಗೇರಾ ಸೇರಿದಂತೆ ಅನೇಕರು ಪ್ರತಿಭಟನೆ ಯಲ್ಲಿ ಇದ್ದರು.