ಮುಧೋಳ ಗ್ರಾಮದಲ್ಲಿ ಈದ್ ಮಿಲಾಲ್ ನಿಮಿತ್ತ ಮದಿನಾ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು. ಪ್ರಮುಖರಾದ ಹಸನಸಾಬ ಹಿರೇಮನಿ, ಲಾಲಸಾಬ ಆರ್‌ಬೆಳ್ಳಿನ, ಫಕ್ರುಸಾಬ ಮೋತೆಖಾನ್, ಸೈದುಸಾಬ ಹಿರೇಮನಿ, ಗ್ರಾಪಂ ಮಾಜಿ ಸದಸ್ಯ ಖಾದಿರ್‌ಬಾಷಾ ತೋಳಗಲ್ ಇತರರಿದ್ದರು.
- ಹಜರತ್ ಮೌಲಾನಾ ಆಫೀಜ್ ದಾನೇಶ್ ಖಾಜಿ
- ಯಲಬುರ್ಗಾ ಮುಧೋಳ ಮದಿನಾ ಸ್ತಬ್ಧಚಿತ್ರ ಮೆರವಣಿಗೆ
ಯಲಬುರ್ಗಾ: ತಾಲೂಕಿನಾದ್ಯಂತ ಮುಸ್ಲಿಮರು ಈದ್‌ಮಿಲಾದ್ ಸಡಗರದಿಂದ ಆಚರಿಸಿದರು.
ಬೆಳಗ್ಗೆ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ಕೋರಿದರು. ಮುಧೋಳ ಗ್ರಾಮದಲ್ಲಿ ಹಜರತ್ ಸಯ್ಯದ್‌ಶಾ ವಲಿ ಅಂಜುಮನ್ ಕಮಿಟಿ, ನೌಜವಾನ್ ಯೂಥ್ ಕಮಿಟಿ ಮತ್ತು ಜಾಮಿಯಾ ಮಸ್ಜೀದ್ ಕಮಿಟಿ ಸಹಯೋಗದಿಂದ ಜಾಮಿಯಾ ಮಸೀದಿಯಿಂದ ಮದಿನಾ ಸ್ತಬ್ಧಚಿತ್ರ ಮೆರವಣಿಗೆ ನಡೆಯಿತು.
ಹಜರತ್ ಮೌಲಾನಾ ಆಫೀಜ್ ದಾನೇಶ್ ಖಾಜಿ ಮಾತನಾಡಿ, ಪ್ರವಾದಿ ಮಹಮ್ಮದ್ ಪೈಗಂಬರ್ ಅವರು ಜಗತ್ತಿಗೆ ಶಾಂತಿಯ ಸಂದೇಶ ಸಾರಿದ್ದಾರೆ. ಅವರ ಆದರ್ಶ ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು. ಪ್ರಮುಖರಾದ ಹಸನಸಾಬ ಹಿರೇಮನಿ, ಲಾಲಸಾಬ ಆರ್‌ಬೆಳ್ಳಿನ, ಫಕ್ರುಸಾಬ ಮೋತೆಖಾನ್, ಸೈದುಸಾಬ ಹಿರೇಮನಿ, ಗ್ರಾಪಂ ಮಾಜಿ ಸದಸ್ಯ ಖಾದಿರ್‌ಬಾಷಾ ತೋಳಗಲ್ ಇತರರಿದ್ದರು.