ಹಲವಾಗಲಿ ಗ್ರಾಮದಲ್ಲಿ ಮುಟ್ಟಿನ ಕಪ್ ಬಳಕೆ, ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಕಾಶಪ್ಪ, ಪ್ರತಿಭಾ, ಶೋಭಾ, ಹನುಮಂತಮ್ಮ, ಗವಿಸಿದ್ದಮ್ಮ, ರೇಣುಕಾ ಇತರರಿದ್ದರು. 
ಕೊಪ್ಪಳ

ಮುಟ್ಟಿನ ಕಪ್ ಬಳಕೆ ಸುರಕ್ಷಿತ

ರುದ್ರಪ್ಪ ವಾಲಿ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯಕರ
  • ಭವಿಷ್ಯಕ್ಕಾಗಿ
  • ಸ್ತನ್ಯಪಾನ

ಅಳವಂಡಿ: ಮುಟ್ಟಿನ ಕಪ್‌ಗಳ ಬಳಕೆ ಮಹಿಳೆಯರ ಆರೋಗ್ಯ ದೃಷ್ಟಿಯಿಂದ ಸುರಕ್ಷಿತ, ಪರಿಸರ ಸ್ನೇಹಿ ಹಾಗೂ ಮಿತವ್ಯಯದ ವಿಧಾನವಾಗಿದೆ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಕಾಶಪ್ಪ ಹೇಳಿದರು.

ಹಲವಾಗಲಿ ಗ್ರಾಮದಲ್ಲಿ ಕಲವೂರು ಪಿಎಚ್‌ಸಿ ವತಿಯಿಂದ ಮುಟ್ಟಿನ ಕಪ್ ಬಳಕೆ ತರಬೇತಿ ಕಾರ್ಯಾಗಾರ, ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು. ಕುಟುಂಬ ಕಲ್ಯಾಣ ಯೋಜನೆಗಳು, ಎಚ್‌ಪಿವಿ ಲಸಿಕೆಯ ಮಹತ್ವ, ಸಾಂಕ್ರಾಮಿಕ ಹಾಗೂ ಅಸಾಂಕ್ರಾಮಿಕ ಕಾಯಿಲೆಗಳ ತಡೆ ಮತ್ತು ಆರೋಗ್ಯಕರ ಜೀವನಶೈಲಿಯ ಕುರಿತು ಮಾಹಿತಿ ನೀಡಿದರು.
ಆರೋಗ್ಯ ಸುರಕ್ಷತಾ ಅಧಿಕಾರಿ ಪ್ರತಿಭಾ ಮಾತನಾಡಿ, ತಾಯಿಯೂ ಮಗುವಿನ ಆರೋಗ್ಯಕರ ಭವಿಷ್ಯಕ್ಕಾಗಿ ಸ್ತನ್ಯಪಾನಕ್ಕೆ ಆದ್ಯತೆ ನೀಡಬೇಕು. ಜನಿಸಿದ ಮಗುವಿಗೆ ಮೊದಲ ಆರು ತಿಂಗಳು ತಾಯಿಹಾಲು ಮಾತ್ರ ನೀಡಬೇಕು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರು.
ನಂತರ ಮುಟ್ಟಿನ ಕಪ್ ಬಳಕೆ ವಿಧಾನ, ಸ್ವಚ್ಛಗೊಳಿಸುವುದು ಹಾಗೂ ಮರುಬಳಕೆ ಮಾಡುವ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು. ಮಹಿಳೆಯರಲ್ಲಿ ಮುಟ್ಟಿನ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳುವ ಅಗತ್ಯವನ್ನು ವಿವರಿಸಿದರು.