ಗಂಗಾವತಿ ಹಿರೇಜಂತಕಲ್ ಬೀದಿ ನಾಯಿಗಳ ನಿರ್ವಹಣೆ ಕೇಂದ್ರದಲ್ಲಿ ಬೀದಿನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಭಾನುವಾರ ಹಮ್ಮಿಕೊಳ್ಳಲಾಗಿತ್ತು. 
ಕೊಪ್ಪಳ

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಕ್ರಮ

ಪ್ರಮುಖ ಮುಖ್ಯಾಂಶಗಳು

  • ಬೀದಿನಾಯಿಗಳ
  • ನಿರ್ವಹಣೆ
  • ಕೇಂದ್ರ
ಗಂಗಾವತಿ: ನಗರದಲ್ಲಿ ಬೀದಿ ನಾಯಿಗಳ ಉಪಟಳ ನಿಯಂತ್ರಣಕ್ಕಾಗಿ ಸಂತಾನಶಕ್ತಿ ಹರಣ ಚಿಕಿತ್ಸಾ ಕಾರ್ಯಚರಣೆ ನಗರಸಭೆಯಿಂದ ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಹಿರೇಜಂತಕಲ್‌ನಲ್ಲಿ ಆರಂಭಿಸಿರುವ ಬೀದಿನಾಯಿಗಳ ನಿರ್ವಹಣೆ ಕೇಂದ್ರದಲ್ಲಿ ನಗರದಲ್ಲಿ ಕಳೆದೆರೆಡು ದಿನಗಳಿಂದ ಹಿಡಿದಿರುವ ನಾಯಿಗಳಿಗೆ ಬಳ್ಳಾರಿ ಮೂಲದ ವೈದ್ಯರ ತಂಡ ಸಂತಾನಶಕ್ತಿ ಹರಣ ಚಿಕಿತ್ಸೆ ಕೈಗೊಂಡಿತ್ತು.
ಪರಿಸರ ಇಂಜಿನಿಯರ್ ಶರಣಪ್ಪ ಮಾತನಾಡಿ, ನಗರದಲ್ಲಿ 1,600ಕ್ಕೂ ಹೆಚ್ಚು ಬೀದಿ ನಾಯಿಗಳಿದ್ದು, ನಿಯಂತ್ರಣಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 9ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಹೀಗಾಗಿ 650 ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಕೈಗೊಳ್ಳಲಾಗುತ್ತಿದೆ. ಹಂತಹಂತವಾಗಿ ನಗರದಲ್ಲಿರುವ ನಾಯಿಗಳ ಹಾವಳಿ ನಿಯಂತ್ರಿಸಲಾಗುವುದು ಎಂದರು. ಆರೋಗ್ಯ ನಿರೀಕ್ಷಕ ಎ.ನಾಗರಾಜ ಸೇರಿ ಪೌರ ಕಾರ್ಮಿಕರಿದ್ದರು.