ಶ್ರೀಕೃಷ್ಣ ಜಯಂತಿ ಆಚರಣೆ ಸಂಬಂಧ ಮಂಗಳವಾರ ಕೊಪ್ಪಳದಲ್ಲಿ ಎಡಿಸಿ ಸಿದ್ರಾಮೇಶ್ವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಮುದಾಯ ಮುಖಂಡರಾದ ಕುರುಗೋಡ ರವಿ ಯಾದವ, ಜಗನ್ನಾಥ ಯಾದವ, ಯಮನೂರಪ್ಪ ಇದ್ದರು.
- ಎಡಿಸಿ ಸಿದ್ರಾಮೇಶ್ವರ ಹೇಳಿಕೆ
- ಸೆ.4ಕ್ಕೆ ಶ್ರೀ ಕೃಷ್ಣ ಜಯಂತಿ
ಕೊಪ್ಪಳ : ಜಿಲ್ಲಾಡಳಿತದಿಂದ ಆ.28ರಂದು ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಹಾಗೂ ನುಲಿಯ ಚಂದಯ್ಯ ಜಯಂತಿ ಸರಳವಾಗಿ ಆಚರಿಸಲಾಗುವುದೆಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಬೆಳಗ್ಗೆ 10 ಗಂಟೆಗೆ ಡಿಸಿ ಕಚೇರಿ ಸಭಾಂಗಣದಲ್ಲಿ ನಾರಾಯಣಗುರು ಭಾವಚಿತ್ರಕ್ಕೆ ಪುಷ್ಪಾರ್ಪಣೆ ಇರಲಿದೆ. ಜಿಲ್ಲಾಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಿ. ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯವಾಗಿ ಜಯಂತಿ ಆಚರಿಸಿ ಎಂದು ಸೂಚಿಸಿದರು. ಸಮುದಾಯ ಪುಮುಖರಾದ ಈರಣ್ಣ ಈ., ವಿಶ್ವನಾಥ ಪಿ., ಅನಿಲ್ಕುಮಾರ, ಗೋವಿಂದರಾಜ ಕಾರಟಗಿ, ಎ.ಡಿ. ರವಿ, ವೆಂಕಟೇಶ ಗಂಗಾವತಿ, ಕಿರಣಕುಮಾರ ಇತರರಿದ್ದರು.
ನುಲಿಯ ಚಂದಯ್ಯ ಜಯಂತಿ: ಆ.28ರಂದು ಬೆಳಗ್ಗೆ 9.30ಕ್ಕೆ ಗವಿಮಠದಿಂದ ಸಾಹಿತ್ಯಭವನವರೆಗೆ ನುಲಿಯ ಚಂದಯ್ಯ ಭಾವಚಿತ್ರದ ಮೆರವಣಿಗೆ ಇರುವುದು. ಎಲ್ಲ ಅಧಿಕಾರಿಗಳು ಭಾಗಿಯಾಗಿ. ಶಾಲಾ-&ಕಾಲೇಜು, ವಸತಿ ಶಾಲೆಗಳು ಹಾಗೂ ಗ್ರಾಪಂಗಳಲ್ಲಿ ಜಯಂತಿ ಆಚರಿಸಿ. ಪೊಲೀಸ್ ಬಂದೋಬಸ್ತ್, ಕುಡಿವ ನೀರು ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿ. ಅಚ್ಚುಕಟ್ಟಾಗಿ ಹಾಗೂ ಅರ್ಥಪೂರ್ಣವಾಗಿ ಜಯಂತಿ ಆಚರಣೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.
ಸಮುದಾಯ ಮುಖಂಡರಾದ ಶಂಬಣ್ಣ ಭಜಂತ್ರಿ, ಬಸವಣ್ಣ ಓಜನಹಳ್ಳಿ, ಲೋಕೇಶ್ ಭಜಂತ್ರಿ, ಲಕ್ಷ$್ಮಣ ಭಜಂತ್ರಿ, ನಾಗಪ್ಪ ಭಜಂತ್ರಿ, ತಿಪ್ಪಣ್ಣ ಭಾಗ್ಯನಗರ ಇತರರಿದ್ದರು.
ಶ್ರೀ ಕೃಷ್ಣ ಜಯಂತಿ ಅದ್ದೂರಿ ಆಚರಣೆ
ಕೊಪ್ಪಳ: ಜಿಲ್ಲಾ ಕೇಂದ್ರದಲ್ಲಿ ಸೆ.4ರಂದು ಶ್ರೀಕೃಷ್ಣ ಜಯಂತಿ ಅದ್ದೂರಿಯಾಗಿ ಆಚರಿಸಲಾಗುವುದು. ಅಂದು ಬೆಳಗ್ಗೆ 9.30 ಗಂಟೆಗೆ ನಗರದ ಶ್ರೀ ಶಿರಸಪ್ಪಯ್ಯನ ಮಠದಿಂದ ಗಡಿಯಾರ ಕಂಬ, ಜವಾಹರ ರಸ್ತೆ ಮಾರ್ಗವಾಗಿ ಶ್ರೀ ಕೃಷ್ಣ ದೇವಸ್ಥಾನದವರೆಗೆ ಭಾವಚಿತ್ರ ಮೆರವಣಿಗೆ ಇರುವುದು. ಸರ್ಕಾರಿ ಕಚೇರಿ, ಗ್ರಾಪಂ, ಶಾಲಾ&ಕಾಲೇಜಿನಲ್ಲಿ ಜಯಂತಿ ಆಚರಿಸಿ. ಮೆರವಣಿಗೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಿ. ಕಲಾವಿದರು, ಸಾರ್ವಜನಿಕರಿಗೆ ಕುಡಿವ ನೀರು ಇತರ ಸೌಲಭ್ಯ ಕಲ್ಪಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಸಮುದಾಯ ಮುಖಂಡರಾದ ಕುರುಗೋಡ ರವಿ ಯಾದವ, ಜಗನ್ನಾಥ ಯಾದವ, ಯಮನೂರಪ್ಪ, ಚಂದ್ರಶೇಖರ ಅಡವಿಬಾವಿ, ಹುಲುಗಪ್ಪ ವಾಲಿಕಾರ, ಶಿವಪ್ಪ ಮಿರ್ಜಿ ಇತರರಿದ್ದರು.