ಕೊಪ್ಪಳ ಗವಿಶ್ರೀ ಜಾತ್ರೆಯಲ್ಲಿ ಅಕ್ಕ ಪಡೆ ಪೋಲಿಸ್​ ಇಲಾಖೆ ಸಿಬ್ಬಂದಿಗಳಾದ ಸಾವಿತ್ರಿ ಡಿ, ಈರಣ್ಣ ತಾವರಗೇರಾ, ಹೋಮ್​ ಗಾರ್ಡ್​ಗಳಾದ ಎನ್​. ಯಲ್ಲಮ್ಮ, ನಾಗರತ್ನ ಗಂಗಾವತಿ, ಭಾಗ್ಯ ಮತ್ತು ತಾಯೇರಾ ಬೇಗಂ ಅವರನ್ನು ಜಿಲ್ಲಾ ಮಹಿಳಾ ಕಾಂಗ್ರೆಸ್​ನಿಂದ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು. 
ಕೊಪ್ಪಳ

ಇಂದಿರಾ ಗಾಂಧಿ ದಿಟ್ಟತನದಂತೆ ಅಕ್ಕ ಪಡೆ ಕೆಲಸ ಮಾಡಲಿ

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿ ಗೊಂಡಬಾಳ ಸಲಹೆ
  • ಅಕ್ಕ ಪಡೆಗೆ ಸನ್ಮಾನ
ಕೊಪ್ಪಳ: ರಾಜ್ಯ ಕಾಂಗ್ರೆಸ್​ ಸರಕಾರದ ಮಹತ್ವಾಕಾಂಕ್ಷೆಯ ಅಕ್ಕಪಡೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಆದರ್ಶದೊಂದಿಗೆ ದಿಟ್ಟತನದಂದಿ ಕಾರ್ಯನಿರ್ವಹಿಸಲಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್​ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಆಶಿಸಿದರು.
ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಪೋಲಿಸ್​ ಔಟ್​ ಪೋಸ್ಟ್​ ಹತ್ತಿರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆರಂಬಿಸಿದ ಅಕ್ಕಪಡೆ ಸಿಬ್ಬಂದಿ ಜಿಲ್ಲಾ ಮಹಿಳಾ ಕಾಂಗ್ರೆಸ್​ನಿಂದ ಸನ್ಮಾನಿಸಿ ಮಾತನಾಡಿದರು.
ಸಂಷ್ಟಕ್ಕೊಳಗಾದ ಮಹಿಳೆಯರ ತುರ್ತು ಸಹಾಯಕ್ಕಾಗಿ ಅಕ್ಕ ಪಡೆ ಸದಾ ಸದ್ಧ. ಲಭ್ಯವಿರುವ ಸಹಾಯವಾಣಿಗೆ ಕರೆ ಮಾಡಬಹುದು. ದೂರುಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸಿ, ಗಂಭೀರ ಪ್ರಕರಣದ ಆರೋಪಿಯನ್ನು ಸ್ಥಳಿಯ ಪೊಲೀಸ್​ ಠಾಣೆಗೆ ಹಸ್ತಾಂತರಿಸುತ್ತದೆ. ಅಕ್ಕಪಡೆ ಸದಸ್ಯರಿಗೆ ಹಿಂಸಾಚಾರ ನಿರ್ವಹಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ವಿಶೇಷ ತರಬೇತಿ ನೀಡಲಾಗಿದ್ದು. ಇದು ಜನರಲ್ಲಿ ಬಾಲ್ಯ ವಿವಾಹ ನಿಷೇಧ, ಪೋಸ್ಕೋ ಕಾಯಿದೆ ಮತ್ತು ಮೊಬೈಲ್​ ಸುರಕ್ಷತಾ ನಿಯಮಗಳ ಕುರಿತು ಅರಿವು ಮೂಡಿಸುತ್ತದೆ ಎಂದರು .
ಕೆಪಿಸಿಸಿ ಸದಸ್ಯೆ ಗಿರಿಜಾ ಸಂಗಟಿ, ಮುಖಂಡರಾದ ಕಿಶೋರಿ ಬೂದನೂರ್​, ಜಯಶ್ರೀ ಕಂದಕೂರ್​, ಕೆಡಿಪಿ ಸದಸ್ಯೆ ನಾಗರತ್ನ ಹುಲಿಗಿ, ರೇಷ್ಮಾ ಖಾಜಾವಲಿ, ಸುಮಂಗಲಾ ನಾಯಕ್​, ಸೌಭಾಗ್ಯ ಗೊರವರ್​, ಶರಣಮ್ಮ ಪೂಜಾರಿ, ಜಯಶ್ರೀ ಅರಕೇರಿ, ಶಿಲ್ಪಾ ಗುಡ್ಲಾನೂರ್​, ಅನಿತಾ ಅಳ್ಳಮ್ಮನವರ, ಗ್ಯಾರೆಂಟಿ ಸಮಿತಿ ಸದಸ್ಯೆ ರೇಣುಕಮ್ಮ ಕಾರಟಗಿ ಸೇರಿದಂತೆ ಇತರರಿದ್ದರು.