ನೀರಲಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನದ ನಿಮಿತ್ತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ, ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಹನುಮಂತಪ್ಪ ಕಟಂಬ್ಲಿ, ಅಂದಪ್ಪ ಹಾರೋಗೇರಿ, ಮಲ್ಲಪ್ಪ ಕುರಿ, ಆಶಾಬಿ ಹಡಗಲಿ ಇತರರಿದ್ದರು. 
ಕೊಪ್ಪಳ

ಮತದ ಮಹತ್ವ ಎಲ್ಲರಿಗೂ ತಲುಪಲಿ

ಪ್ರಮುಖ ಮುಖ್ಯಾಂಶಗಳು

  • ಮತದಾರರ ದಿನ

ಮತದ ಮಹತ್ವ ಎಲ್ಲರಿಗೂ ತಲುಪಲಿ

ಅಳವಂಡಿ: ಪ್ರಜಾಪ್ರಭುತ್ವ ಗಟ್ಟಿಯಾಗಿರಲು ಮತದಾನ ಪ್ರಬಲ ಸಾಧನ ಎಂದು ಮುಖ್ಯಶಿಕ್ಷಕ ರಾಮಚಂದ್ರಗೌಡ ಗೊಂಡಬಾಳ ಹೇಳಿದರು.
ಸಮೀಪದ ನೀರಲಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಹೆಚ್ಚು ಯುವ ಮತದಾರರನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ರಾಷ್ಟ್ರೀಯ ಮತದಾರರ ದಿನ ಹಾಗೂ ಚುನಾವಣಾ ಆಯೋಗದ ಸಂಸ್ಥಾಪನಾ ದಿನದ ನೆನಪಿಗಾಗಿ ಆಚರಣೆ ಆರಂಭಿಸಿದೆ. ಪ್ರಜಾಪ್ರಭುತ್ವ ಜಾರಿಗೊಳಿಸುವಲ್ಲಿ ಮತದ ಮಹತ್ವ ದೇಶದ ಪ್ರತಿಯೊಬ್ಬ ನಾಗರಿಕನನ್ನು ತಲುಪಬೇಕು ಎಂದರು.
ಶಿಕ್ಷಕರಾದ ಕೃಷ್ಣಪ್ಪ ತಳಕಲ್, ಹನುಮಂತಪ್ಪ ಕಟಂಬ್ಲಿ, ಅಂದಪ್ಪ ಹಾರೋಗೇರಿ, ಮಲ್ಲಪ್ಪ ಕುರಿ, ಆಶಾಬಿ ಹಡಗಲಿ, ವಿದ್ಯಾರ್ಥಿಗಳು ಇದ್ದರು.