ಕೊಪ್ಪಳದ ಶ್ರೀ ರೇಣುಕಾಚಾರ್ಯ ಭವನದಲ್ಲಿ ನಡೆದ ಜಂಗಮ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಅರಿವು ಆಚಾರ ಕಾರ್ಯಕ್ರಮದಲ್ಲಿ ಕಡಲಬಾಳು ಗವಿಮಠ ಶಾಖಾ ಮಠದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಮಾತನಾಡಿದರು. ಮೈನಳ್ಳಿ- ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿದ್ದರು.
ಕೊಪ್ಪಳ : ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ದಾಧನೆಯನ್ನು ಇಲ್ಲಿಗೆ ನಿಲ್ಲಿಸದೆ ಮುಂದೆಯು ಉತ್ತಮವಾದ ಸಾಧನೆಯ ಮೂಲಕ ತಂದೆ&ತಾಯಿಗಳಿಗೆ ಕೀರ್ತಿ ತರಬೇಕು ಎಂದು ಕಡಲಬಾಳು ಗವಿಮಠ ಶಾಖಾ ಮಠದ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಹೇಳಿದರು.
ನಗರದ ಶ್ರೀ ರೇಣುಕಾಚಾರ್ಯ ಮಂದಿರದ ಭವನದಲ್ಲಿ ಇತ್ತೀಚಿಗೆ ನಡೆದ ಜಂಗಮ ಸಮುದಾಯದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಹಾಗೂ ಅರಿವು ಆಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಕಾರ್ಯವನ್ನು ಜಂಗಮ ಸಮಾಜ ಪ್ರತಿ ವರ್ಷವೂ ಮಾಡುತ್ತಿದ್ದು, ಮಕ್ಕಳು ಮುಂದಿನ ತಮ್ಮ ಶೈಕ್ಷಣಿಕ ದಿನಗಳಲ್ಲಿ ಸತತ ಅಧ್ಯಯನ ನಡೆಸಿ ಹೆತ್ತವರಿಗೆ ಹಾಗೂ ಕಲಿಸಿದ ಗುರುಗಳಿಗೆ ಕೀರ್ತಿ ತನ್ನರಿ ಎಂದರು.
ಮೈನಳ್ಳಿ- ಬಿಕನಳ್ಳಿ ಶ್ರೀ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು. ಜಂಗಮ ಸಮುದಾಯದ ಹಂಪಯ್ಯ ಮೆತಗಲ್ಲ, ಚಂದ್ರಶೇಖರಯ್ಯ ಸೊಪ್ಪಿಮಠ, ವಿಕೆ ಜಾಗಟಗೇರಿ, ಗವಿಸಿದ್ದಯ್ಯ ಸಸಿಮಠ, ಬಾಲಚಂದ್ರಯ್ಯ, ಶಂಕರಯ್ಯ ಹಿರೇಮಠ, ಶಂಕರಯ್ಯ ಸಾಲಿಮಠ, ಸದಾಶಿವಯ್ಯ ಹಿರೇಮಠ, ಮಂಜು ಸಾಲಿಮಠ, ವೀರೇಶ್ ಮಹಾಂತಯ್ಯನಮಠ, ಜಗದೀಶ್ ಹಿರೇಮಠ ಇತರರಿದ್ದರು.