ಕೊಪ್ಪಳ : ಹನ್ನೆರಡನೇ ಮೇ ಸಾಹಿತ್ಯ ಮೇಳವನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದು ಮೇ 16 ಮತ್ತು 17ರಂದು ಎರಡು ದಿನಗಳ ಕಾಲ ನಡೆಯಲಿದೆ ಎಂದು ಸಂಚಾಲಕ ಟಿ.ರತ್ನಾಕರ ತಿಳಿಸಿದರು.
ನರಗದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪ್ರತಿ ವರ್ಷವೂ ಮೇಳ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಕೊಪ್ಪಳದಲ್ಲೂ ಯಶಸ್ವಿಯಾಗಿದೆ. ಈ ವರ್ಷ ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಮುಂಬಯಿನ ನ್ಯಾ.ಬಿ.ಜಿ.ಕೋಳ್ಸೆ ಪಾಟೀಲ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕರ್ನೂಲಿನ ಪಾಣಿ, ಬೆಂಗಳೂರಿನ ವಿ. ಬಾಲಸುಬ್ರಮಣಿಯನ್, ಕಲಬುರಗಿಯ ಕೆ.ನೀಲಾ ಇತರರು ಭಾಗಿಯಾಗುವರು. ವಿವಿಧ ವಿಷಯಗಳ ಕುರಿತು ಗೋಷ್ಠಿ, ಕವಿಗೋಷ್ಠಿ, ಅನುಭವ ಕಥನ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ, ಸಂವಾದ, ವಿಚಾರ ಮಂಡನೆ ಇರಲಿದೆ. ನ್ಯಾಯಾಧೀಶ ಎಚ್.ನಾಗಮೋಹನದಾಸ್ ಸಮಾರೋಪ ನುಡಿ ಆಡುವರು. ನಾಡಿನಾದ್ಯಂತ ವಿವಿಧ ಗಣ್ಯರು ಭಾಗಿಯಾಗುವರು. ಕೊಪ್ಪಳದಿಂದ ನೂರಾರು ಜನರು ತೆರಳಲಿದ್ದೇವೆ. ಸಾಹಿತ್ಯಾಸಕ್ತರು ಆಗಮಿಸುವಂತೆ ಮನವಿ ಮಾಡಿದರು.
ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು, ಡಿ.ಎಂ.ಬಡಿಗೇರ, ಶರಣು ಶೆಟ್ಟರ್ ಇತರರಿದ್ದರು.