ಕೇಸೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಜರುಗಿತು. ತಾಪಂ ಇಒ ಅಮರೇಶ್ ಯಾದವ್, ತಾಲೂಕು ಸಾಮಾಜಿಕ ವಲಯ ಅರಣ್ಯ ಅಧಿಕಾರಿ, ಎಡಿ ನಿಂಗನಗೌಡ, ಪಿಡಿಒ ವಾಗೀಶ್ ಇತರರಿದ್ದರು.  
ಕೊಪ್ಪಳ

ಯುಗ-ಯುಗಗಳವರೆಗೆ ಉಳಿಯಲಿ

ಶ್ರೀನಾಥ

ಪ್ರಮುಖ ಮುಖ್ಯಾಂಶಗಳು

  • ತಾಪಂ ಇಒ ಅಮರೇಶ್ ಯಾದವ್
  • ಕುಷ್ಟಗಿ ಕೇಸೂರು ವಿಶ್ವ ಪರಿಸರ ದಿನ
ಕುಷ್ಟಗಿ: ತಾಲೂಕಿನ ಕೇಸೂರು ಗ್ರಾಪಂ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು.
ತಾಪಂ ಇಒ ಅಮರೇಶ್ ಯಾದವ್ ಮಾತನಾಡಿ, ಪರಿಸರ ಕಾಳಜಿ ಜತೆಗೆ ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಪ್ರತಿಯೊಬ್ಬ ಜೀವಕೋಶಗಳ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ. ಪರಿಸರದಲ್ಲಿ ಗಾಳಿ, ನೀರು, ಮರ, ಕಾಡು, ಜಲಮೂಲಗಳು ಪ್ರತಿಯೊಂದು ಬಹಳ ಮುಖ್ಯ. ಈ ಪರಿಸರವು ಯುಗ ಯುಗಗಳವರೆಗೂ ಉಳಿಯಬೇಕಾಗಿದೆ. ಆದ್ದರಿಂದ ಪರಿಸರವನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನೀರನ್ನು ವ್ಯರ್ಥ ಮಾಡದೆ ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆ ಮುಕ್ತವಾಗಿಸಲು ಆದ್ಯತೆ ನೀಡಬೇಕು ಎಂದರು.
ತಾಪಂ ಎಡಿ ನಿಂಗನಗೌಡ ವಿ.ಎಚ್., ತಾಲೂಕು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಶಿವರಾಜ, ಪಿಡಿಒ ವಾಗೀಶ, ತಾಪಂ ಐಇಸಿ ಸಂಯೋಜಕ ಚಂದ್ರಶೇಖರ. ಜಿ., ತಾಂತ್ರಿಕ ಸಂಯೋಜಕ ಬಸವರಾಜ ಟಿ., ಜಿಲ್ಲಾ ಸಂಯೋಜಕ ವಾಸುದೇವ ಮೂರ್ತಿ ಹಾಗೂ ಗ್ರಾಪಂ ಸಿಬ್ಬಂದಿ ಇದ್ದರು.